ಮುಂಬೈ: ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ ಅಂತ ಜೋಕ್ ಮಾಡಿದ ನಟ ರೋಹಿತ್ ರಾಯ್ ಈಗ ಅದಕ್ಕಾಗಿ ಸಿಕ್ಕಾಪಟ್ಟೆ ಪಶ್ಚಾತ್ತಾಪ ಪಡುವಂತಾಗಿದೆ.
ಇನ್ಸ್ಟಾಗ್ರಾಂನಲ್ಲಿರುವ ತನ್ನ ಅಕೌಂಟ್‌ನಲ್ಲಿ ರೋಹಿತ್ ರಾಯ್, ‘‘ರಜನಿಕಾಂತ್ ಟೆಸ್ಟೆಡ್ ಪಾಸಿಟಿವ್ ಫಾರ್ ಕರೊನಾ. ಕರೊನಾ ಈಸ್ ನೌ ಅಂಡರ್ ಕ್ವಾರಂಟೈನ್’’ (ರಜನಿಕಾಂತ್‌ಗೆ ಕರೊನಾ ಬಂದಿದೆ. ಕರೊನಾವನ್ನೇ ಕ್ವಾರಂಟೈನ್ ಮಾಡಲಾಗಿದೆ) ಎಂಬ ಸಂದೇಶವನ್ನು ಪೋಸ್ಟ್ ಮಾಡಿದ್ದ.
ಇದನ್ನೂ ಓದಿಭಕ್ತರಿಲ್ಲದೆ ಸೊರಗಿದ ದೇಗುಲ, ಐತಿಹಾಸಿಕ ಸ್ಥಳಗಳು
ಜತೆಗೆ ‘‘ಕರೊನಾವನ್ನು ಸೋಲಿಸೋಣ!! ನೀವು ಕೆಲಸಕ್ಕೆ ಹೋದಾಗ ಸೇಫಾಗಿರಿ! ಮಾಸ್ಕ್ ಧರಿಸಿ, ಪ್ರತಿದಿನವೂ ಮಾಸ್ಕ್ ಅನ್ನು ತೊಳೆಯಿರಿ, ದಿನಕ್ಕೆ ಹಲವು ಬಾರಿ ಸ್ಯಾನಿಟೈಸರ್ ಬಳಸಿ… ಕರೊನಾಕ್ಕೆ ನಾವು ಅವಕಾಶ ಕೊಡದಿದ್ದರೆ ಅದು ನಮ್ಮ ಬಳಿ ಬರಲು ಸಾಧ್ಯವಿಲ್ಲ- ಸೇಫಾಗಿರಿ’’ ಎಂದೂ ಬರೆದಿದ್ದ.
ಆದರೆ ಇದನ್ನು ಎಲ್ಲರೂ ಜೋಕ್ ಆಗಿ ತೆಗೆದುಕೊಳ್ಳಲೇ ಇಲ್ಲ. ರಜನಿಕಾಂತ್‌ರ ಅಭಿಮಾನಿಗಳಂತೂ ಇದನ್ನೊಂದು ಜೋಕ್ ಅಂತ ಒಪ್ಪಿಕೊಳ್ಳಲೇ ಇಲ್ಲ. ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ರಾಯ್‌ನನ್ನು ಟ್ರೋಲ್ ಮಾಡತೊಡಗಿದರು.
ಇದರಿಂದ ಬೆಚ್ಚಿಬಿದ್ದ ರೋಹಿತ್, ‘‘ಸಮಾಧಾನ ಮಾಡಿಕೊಳ್ಳಿ, ಇದು ಒಂದು ಜೋಕ್ ಅಷ್ಟೆ. ಕ್ಷಮಿಸಿ, ಇದು ಬ್ಯಾಡ್ ಟೇಸ್ಟ್ ಹೊಂದಿರುವ ಜೋಕ್ ಅಂತ ನನಗಂತೂ ಅನ್ನಿಸುತ್ತಿಲ್ಲ. ರಜನಿಕಾಂತ್ ಕುರಿತ ಈ ಹಿಂದಿನ ಜೋಕ್‌ಗಳಂತೆಯೇ ಇದೂ ಇದೆ. ನಿಮ್ಮನ್ನೆಲ್ಲ ನಗಿಸುವದಷ್ಟೇ ನನ್ನ ಉದ್ದೇಶವಾಗಿತ್ತು. ನೀವು ಕಾಮೆಂಟ್ ಮಾಡುವ ಮೊದಲು ನನ್ನ ಉದ್ದೇಶ ಏನಿತ್ತೆಂಬುದನ್ನು ಗಮನಿಸಿ. ನಾನು ನಿಮ್ಮನ್ನು ನೋಯಿಸಲು ಈ ಪೋಸ್ಟ್ ಹಾಕಲಿಲ್ಲ. ಆದರೆ ನೀವೆಲ್ಲ ನನ್ನನ್ನು ನೋಯಿಸಲೆಂದೇ ಕಾಮೆಂಟ್ ಮಾಡುತ್ತಿದ್ದೀರಿ’’ ಎಂದು ಸಮಜಾಯಿಷಿ ನೀಡಿದ್ದಾನೆ.
VIDEO ] ಮೆಲ್ಲಮೆಲ್ಲನೆ ಜಾರಿ ಸಮುದ್ರದಲ್ಲಿ ಲೀನವಾದ ಮನೆಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
