ನವದೆಹಲಿ:ದೇಶದಲ್ಲಿ ಕರೊನಾ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ನಡುವೆಯೇ ಗುಣಮುಖರ ಸಂಖ್ಯೆ ಕೂಡ ವೇಗವಾಗಿ ಏರಿಕೆಯಾಗುತ್ತಿದ್ದು, ತುಸು ನೆಮ್ಮದಿ ತಂದಿದೆ. ಇದೇ ಮೊದಲ ಬಾರಿಗೆ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಏರಿಕೆ ಕಂಡಿದೆ. ಬುಧವಾರ 5,217 ರೋಗಿಗಳು ಚೇತರಿಸಿಕೊಳ್ಳುವುದರೊಂದಿಗೆ ಒಟ್ಟು ಗುಣಮುಖರ ಸಂಖ್ಯೆ 1.39 ಲಕ್ಷಕ್ಕೆ ಏರಿಕೆಯಾಗಿದೆ. ಇದೇ ವೇಳೆ ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳು 1.36 ಲಕ್ಷ ಇವೆ. ಈವರೆಗೆ ಈವರೆಗೆ ಶೇಕಡಾ 48.99 ರೋಗಿಗಳು ಚೇತರಿಸಿಕೊಂಡಿದ್ದಾರೆ.
ಕರೊನಾ ಅಟ್ಟಹಾಸಕ್ಕೆ ಹೆಚ್ಚು ಪೀಡಿತವಾಗಿರುವ ಮಹಾರಾಷ್ಟ್ರದಲ್ಲಿ 44 ಸಾವಿರ ರೋಗಿಗಳು ಗುಣಮುಖರಾಗಿದ್ದು, ಇನ್ನೂ 46 ಸಾವಿರ ಸಕ್ರಿಯ ಪ್ರಕರಣಗಳಿವೆ. ಮಿಕ್ಕಂತೆ ಹಲವು ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರ ಪ್ರಮಾಣ ಅಧಿಕವಾಗಿದೆ. ತಮಿಳುನಾಡಿನಲ್ಲಿ 19 ಸಾವಿರ ಮಂದಿ ಗುಣಮುಖರಾಗಿದ್ದು, ಇನ್ನು 17 ಸಾವಿರ ಸಕ್ರಿಯ ಕೇಸ್​ಗಳಿವೆ. ಗುಜರಾತ್​ನಲ್ಲಿ 14 ಸಾವಿರ ಗುಣಮುಖ, 5 ಸಾವಿರ ಸಕ್ರಿಯ, ರಾಜಸ್ಥಾನದಲ್ಲಿ 8 ಸಾವಿರ ಗುಣಮುಖ, 2 ಸಾವಿರ ಸಕ್ರಿಯ, ಮಧ್ಯಪ್ರದೇಶದಲ್ಲಿ 6 ಸಾವಿರ ಗುಣಮುಖ, 2 ಸಾವಿರ ಸಕ್ರಿಯ ಪ್ರಕರಣಗಳಿವೆ.ಇದನ್ನೂ ಓದಿ:24 ಗಂಟೆಯಲ್ಲಿ ಬೆಂಗಳೂರು ನಗರದಲ್ಲೇ ಹೆಚ್ಚು ಕರೊನಾ ಪ್ರಕರಣ ದಾಖಲು; ರಾಮನಗರದಲ್ಲೂ 2 ಕೇಸ್​
ಶೇ. 80 ಸೋಂಕಿತರು ಸಣ್ಣ ಪ್ರಮಾಣದಲ್ಲಿ ರೋಗ ಲಕ್ಷಣಗಳಿಂದ ಬಳಲುತ್ತಿದ್ದು, ಮಿಕ್ಕ ಶೇ. 20 ಸೋಂಕಿತರಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅವಶ್ಯಕತೆ ಇದೆ. ಆಸ್ಪತ್ರೆಗೆ ದಾಖಲಾದ ಶೇಕಡಾ 5 ರೋಗಿಗಳಿಗೆ ಮಾತ್ರ ಐಸಿಯುನ ಅವಶ್ಯಕತೆ ಬೀಳುತ್ತದೆ ಎಂದು ದೆಹಲಿಯ ಸಫ್ದರ್​​ಜಂಗ್​ ಆಸ್ಪತ್ರೆಯ ಡಾ.ನೀರಜ್ ಗುಪ್ತಾ ತಿಳಿಸಿದ್ದಾರೆ. ರೋಗನಿರೋಧಕ ಶಕ್ತಿ ಹೆಚ್ಚಿರುವ ಸೋಂಕಿತರು ಅಲ್ಪಾವಧಿಯಲ್ಲೇ ಗುಣಮುಖರಾಗುತ್ತಿದ್ದಾರೆ.
ಮುಂಬೈನಲ್ಲಿ ಕರೊನಾ ಸಮುದಾಯ ಪ್ರಸರಣ ಹಂತಕ್ಕೆ ತಲುಪಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಸಮುದಾಯ ಪ್ರಸರಣ ಆರಂಭವಾಗಿದೆ ಎನ್ನುವುದು ಜನರ ಕಲ್ಪನೆ ಎಂದು ಆರೋಗ್ಯ ಸಚಿವ ರಾಜೇಶ್ ತೋಪೆ ತಿಳಿಸಿದ್ದಾರೆ. ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಪ್ರತಿ ಪ್ರಕರಣದ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಸಮುದಾಯ ಪ್ರಸರಣವೆಂದರೆ ಶೇ. 20ರಿಂದ ಶೇ. 40 ಪ್ರಕರಣಗಳ ಸಂಪರ್ಕ ಪತ್ತೆಯಾಗಬಾರದು. ಆದರೆ ನಮ್ಮಲ್ಲಿ ಅಂತಹ ಪರಿಸ್ಥಿತಿ ಇಲ್ಲ. 45 ಸಾವಿರಕ್ಕೂ ಅಧಿಕ ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಮರಣ ಪ್ರಮಾಣ ಶೇ. 3.5ರಷ್ಟಿದೆ. ಸೋಂಕು ದ್ವಿಗುಣ ಅವಧಿ 20 ದಿನಗಳಿಗೆ ಏರಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ:ಜೈಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗಿದ್ದಕ್ಕೆ ಇಬ್ಬರು ಮಹಿಳಾ ಕೈದಿಗಳಿಗೆ ಜಾಮೀನು
30 ಸಾವಿರ ಸೋಂಕು ಕಾಣಿಸಿಕೊಂಡಿರುವ ದೆಹಲಿಯಲ್ಲಿ ಸಮುದಾಯ ಪ್ರಸರಣವಾಗುತ್ತಿದೆ ಎಂದು ಸರ್ಕಾರ ಹೇಳಿತ್ತು. ಆದರೆ ಕೇಂದ್ರ ಸರ್ಕಾರ ದೆಹಲಿಯಲ್ಲಿ ಸಮುದಾಯ ಪ್ರಸರಣವಾಗಿಲ್ಲವೆಂದು ಸ್ಪಷ್ಟನೆ ನೀಡಿತ್ತು.
ಅಳಿಯನ ಸಾವಿನ ಬೆನ್ನಲ್ಲೇ ಫೇಸ್​ಬುಕ್​ ಕವರ್​, ಪ್ರೊಫೈಲ್​ಗೆ ಕಪ್ಪು ಫೋಟೋ ಅಪ್ಲೋಡ್ ಮಾಡಿದ ಅರ್ಜುನ್​ ಸರ್ಜಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 16 =
Remember me
