ನವದೆಹಲಿ:ದೇಶದಲ್ಲಿ ಕರೊನಾ ನಿತ್ಯ ಸೋಂಕಿನ ಸಂಖ್ಯೆ ಮತ್ತು ಪಾಸಿಟಿವಿಟಿ ದರ ಇಳಿಮುಖವಾಗಿದೆ. ಇಂದು ಸತತ 18ನೇ ದಿನ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯು ಹೊಸ ಸೋಂಕಿತರ ಸಂಖ್ಯೆಯನ್ನು ಮೀರಿಸಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 2,38,022 ಜನರು ಗುಣಮುಖರಾಗಿದ್ದರೆ, 1,52,734 ಹೊಸ ಪ್ರಕರಣಗಳು ವರದಿಯಾಗಿವೆ.
ಭಾನುವಾರದಂದು 1,65,553 ಹೊಸ ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ 46 ದಿನಗಳಲ್ಲಿ ಕಂಡುಬಂದ ಅತಿಕಡಿಮೆ ನಿತ್ಯಪ್ರಕರಣ ಸಂಖ್ಯೆಯಾಗಿದೆ. ಕರೊನಾ ಸಾವುಗಳ ಸಂಖ್ಯೆ ಇನ್ನೂ ಕಳವಳಕ್ಕೆ ಕಾರಣವಾಗಿದೆ. ಆದಾಗ್ಯೂ ಮೇ 3 ರ ನಂತರದ ಮೂರು ವಾರಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ – 3,460 ಕ್ಕೆ – ನಿತ್ಯಸಾವುಗಳ ಸಂಖ್ಯೆ ಇಳಿದಿದೆ.
ಇದನ್ನೂ ಓದಿ:ಹಸಿವು ಸಹಿಸಲಾಗ್ತಿಲ್ಲ, ನಮ್ಗೆ ಕರೊನಾ ಸೋಂಕಾದರೂ ಬರಲಿ.. ಆಸ್ಪತ್ರೆಯಲ್ಲಿ ಒಪ್ಪೊತ್ತಿನ ಊಟವಾದ್ರೂ ಸಿಗುತ್ತೆ…
ಇಂದು ಬೆಳಿಗ್ಗೆ 8 ಗಂಟೆಗೆ ಅಪ್​ಡೇಟ್​ ಮಾಡಲಾದ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 1,52,734 ಹೊಸ ಪ್ರಕರಣಗಳು ವರದಿಯಾಗಿದ್ದು, ಹಾಲಿ ಒಟ್ಟು 20,26,092 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ, 2,38,022 ಜನರು ಕರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರೆ, 3,128 ಜನ ಸಾವಪ್ಪಿದ್ದಾರೆ.(ಏಜೆನ್ಸೀಸ್)
“ಜೂನ್​ ತಿಂಗಳಲ್ಲಿ 10 ಕೋಟಿ ಡೋಸ್ ಕೋವಿಶೀಲ್ಡ್​ ಪೂರೈಕೆ”

VIDEO | ಕರೊನಾ ರೋಗಿ ಶವವನ್ನು ಸೇತುವೆ ಮೇಲಿಂದ ನದಿಗೆ ಬಿಸಾಡಿದ ಕುಟುಂಬಸ್ಥರು !

‘ಮನ್​​ ಕಿ ಬಾತ್’​​ನಲ್ಲಿ ಬೆಂಗಳೂರಿನ ರೈಲ್ವೆ ಪೈಲೆಟ್​ಗೆ ಮೆಚ್ಚುಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − nine =
Remember me
