ನವದೆಹಲಿ:ಕರೊನಾ ಸೋಂಕಿತರ ಗುಣ ಪ್ರಮಾಣ ಭಾರತದಲ್ಲಿ ಶೇ. 80 ದಾಟಿದ್ದು, ಇದು ಜಗತ್ತಿನಲ್ಲೇ ಅತ್ಯಧಿಕ ಎಂದೆನಿಸಿಕೊಂಡಿದೆ. ಭಾರತದಲ್ಲಿ ಸತತ ಮೂರನೇ ದಿನ 90 ಸಾವಿರ ಮಂದಿ ಗುಣವಾಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ ಕರೊನಾ ಸೋಂಕಿನಿಂದ ಗುಣವಾದವರ ಪ್ರಮಾಣ ಮೇ 4ರಂದು ಶೇ. 27.52 ಇದ್ದಿದ್ದು, ಜುಲೈ 13ರಂದು ಶೇ. 63.02 ಆಗಿತ್ತು. ಈಗ ಸೆ. 21ರಂದು ಅದು ಶೇ. 80ಕ್ಕೆ ತಲುಪಿದೆ.
ಕಳೆದ 24 ಗಂಟೆಗಳಲ್ಲಿ 93,356 ಸೋಂಕಿತರು ಗುಣವಾಗಿದ್ದು, ಗುಣವಾದವರ ಒಟ್ಟು ಸಂಖ್ಯೆ 43,96,399 ತಲುಪಿದೆ. ಇಷ್ಟೊಂದು ಗುಣ ಪ್ರಮಾಣ ಜಗತ್ತಿನಲ್ಲೇ ಅತ್ಯಧಿಕ. ಇನ್ನು ಕೋವಿಡ್​-19 ದೇಶದಲ್ಲಿ ಪ್ರಕರಣಗಳ ಒಟ್ಟು ಸಂಖ್ಯೆ 5.49 ದಶಲಕ್ಷ ದಾಟಿದ್ದು, ಇದುವರೆಗೆ 87,882 ಮಂದಿ ಕರೊನಾಗೆ ಬಲಿ ಆಗಿದ್ದಾರೆ ಎಂದು ಕೇಂದ್ರ ಹೇಳಿದೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × two =
Remember me
