ನವದೆಹಲಿ:ದೇಶದಲ್ಲಿ ಕರೊನಾ ಸೋಂಕಿನ ಪ್ರಮಾಣ ದಾಖಲೆಯ ಏರಿಕೆ ಕಾಣುತ್ತಿರುವ ನಡುವೆಯೇ ಪ್ರತಿದಿನ ಸರಾಸರಿ 60 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗುತ್ತಿದ್ದಾರೆ.
ಒಟ್ಟಾರೆ ಗುಣಮುಖರ ಸಂಖ್ಯೆ 30 ಲಕ್ಷ ದಾಟಿದೆ. ಈವರೆಗೆ 40 ಲಕ್ಷಕ್ಕೂ ಹೆಚ್ಚು ಸೋಂಕು ದೃಢವಾಗಿದ್ದು, ಅದರಲ್ಲಿ 9 ಲಕ್ಷ ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಗುಣಮುಖ ಪ್ರಮಾಣ ಶೇ. 77.15ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಪ್ರಮಾಣ ಶೇ. 21.11ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಮರಣ ಪ್ರಮಾಣ ಶೇ. 1.74ರಷ್ಟಿದೆ. ಶೇ. 0.5ಕ್ಕೂ ಕಡಿಮೆ ಜನರು ವೆಂಟಿಲೇಟರ್ ಸಹಾಯ ಪಡೆದುಕೊಂಡಿದ್ದಾರೆ. ಶೇ. 2 ಜನರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಶೇ. 3.5 ಸೋಂಕಿತರಿಗೆ ಆಕ್ಸಿಜನ್ ನೀಡಲಾಗಿದೆ ಎಂದು ತಿಳಿಸಲಾಗಿದೆ. ಗುರುವಾರ 83 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಇದು ಈವರೆಗಿನ ಏಕದಿನ ಏರಿಕೆಯಲ್ಲಿ ಗರಿಷ್ಠ ದಾಖಲೆಯಾಗಿದೆ. 1,096 ಜನರು ಸಾವನ್ನಪ್ಪಿದ್ದು, ಒಟ್ಟಾರೆ ಮೃತರ ಸಂಖ್ಯೆ 68,500ರಷ್ಟಾಗಿದೆ. ಮಹಾರಾಷ್ಟ್ರದಲ್ಲಿ ಕಳೆದ ಮೂರು ವಾರಗಳಲ್ಲಿ ಸಕ್ರಿಯ ಪ್ರಕರಣಗಳಲ್ಲಿ ಶೇ. 6.8 ಏರಿಕೆ ಕಂಡುಬಂದಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
2021ರ ಮಧ್ಯದವರೆಗೆ ಔಷಧ ಸಿಗಲ್ಲ:2021ರ ಮಧ್ಯ ಭಾಗದ ವರೆಗೆ ಕರೊನಾ ಔಷಧ ಲಭ್ಯವಾಗುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲೂ್ಯಎಚ್​ಒ) ವಕ್ತಾರೆ ಮಾರ್ಗರೇಟ್ ಹ್ಯಾರಿಸ್ ತಿಳಿಸಿದ್ದಾರೆ. ವಿಶ್ವಾದ್ಯಂತ ನೂರಾರು ಔಷಧಗಳು ಸಿದ್ಧವಾಗುತ್ತಿವೆ. ಆದರೆ ಕ್ಲಿನಿಕಲ್ ಹಂತದಲ್ಲಿರುವ ಯಾವುದೇ ಔಷಧ ಈವರೆಗೆ ಉತ್ತಮ ಪರಿಣಾಮ ತೋರಿಲ್ಲ. 3ನೇ ಹಂತದ ಪ್ರಯೋಗವನ್ನು ಹೆಚ್ಚು ಅವಧಿಯವರೆಗೆ ಮಾಡಬೇಕಾಗುತ್ತದೆ. ಹೆಚ್ಚು ಜನರ ಮೇಲೆ ಪ್ರಯೋಗ ಮಾಡಿದ ನಂತರ ಔಷಧದ ಗುಣಮಟ್ಟ ನಿರ್ಧರಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ದೇಶದಲ್ಲಿ ಗರಿಷ್ಠ ಮಟ್ಟ ತಲುಪುವುದು ಯಾವಾಗ?
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಸೋಂಕು ಗರಿಷ್ಠ ಮಟ್ಟ ತಲುಪಿದೆ. ಆದರೆ ಭಾರತದಲ್ಲಿ ಮಾತ್ರ ಸೋಂಕಿನ ಪ್ರಮಾಣ ಪ್ರತಿನಿತ್ಯ ಹೆಚ್ಚಳವಾಗುತ್ತಲೇ ಸಾಗಿದೆ. ವಿಶ್ವದ ಕರೊನಾ ಸೋಂಕಿತ ದೇಶಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಅಮೆರಿಕದಲ್ಲಿ 41 ದಿನಗಳ ಹಿಂದೆ (ಜುಲೈ 24ರಂದು 78,427 ಪ್ರಕರಣ) ಅತಿ ಹೆಚ್ಚಿನ ಸೋಂಕು ಪತ್ತೆಯಾಗಿತ್ತು. ಅದಾದ ನಂತರ ಸೋಂಕಿನಲ್ಲಿ ಏರಿಳಿತ ಕಂಡುಬಂದಿದೆ. ಆದರೂ ಹೆಚ್ಚಿನ ಸೋಂಕು ಪತ್ತೆಯಾಗಿಲ್ಲ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್​ನಲ್ಲಿ ಗರಿಷ್ಠ ಮಟ್ಟದ ಸೋಂಕು(69,074 ಪ್ರಕರಣ) ಪತ್ತೆಯಾಗಿ 36 ದಿನಗಳು ಕಳೆದಿವೆ. ನಾಲ್ಕನೇ ಸ್ಥಾನದಲ್ಲಿರುವ ರಷ್ಯಾದಲ್ಲಿಯೂ ಗರಿಷ್ಠ ಮಟ್ಟ ವರದಿಯಾಗಿ 48 ದಿನಗಳು ಕಳೆದಿವೆ. ಆದರೆ ಭಾರತದಲ್ಲಿ ಏಕದಿನ ಪ್ರಕರಣದಲ್ಲಿ ಏರಿಕೆಯೇ ಕಂಡುಬರುತ್ತಿದೆ.
ರಷ್ಯಾದ ಸ್ಪುಟ್ನಿಕ್ ಔಷಧ ಸುರಕ್ಷಿತ?
ಕರೊನಾ ಸೋಂಕಿಗೆ ರಷ್ಯಾ ನೋಂದಣಿ ಮಾಡಿಸಿಕೊಂಡಿರುವ ಸ್ಪುಟ್ನಿಕ್ ಔಷಧವು ಮನುಷ್ಯರ ಮೇಲೆ ಸುರಕ್ಷಿತ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪ್ರಭಾವ ಹೊಂದಿದೆ ಎನ್ನುವುದು ಸಣ್ಣ ಪ್ರಮಾಣದ ಪ್ರಯೋಗದಿಂದ ದೃಢವಾಗಿದೆ. ಔಷಧವನ್ನು 76 ಜನರ ಮೇಲೆ 42 ದಿನಗಳ ಮಟ್ಟಿಗೆ ಪ್ರಯೋಗ ಮಾಡಲಾಗಿದೆ. ಅದರಲ್ಲಿ ಎಲ್ಲರಲ್ಲೂ 21 ದಿನಗಳೊಳಗೆ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿದೆ. 28 ದಿನಗಳೊಳಗೆ ಟಿ ಸೆಲ್ ಸ್ಪಂದನೆಯಾಗಿದೆ ಎಂದು ತಿಳಿಸಲಾಗಿದೆ. ಈ ಔಷಧದ ಪ್ರಯೋಗಕ್ಕೆ ಒಳಗಾದ ಯಾರೊಬ್ಬರಿಗೂ ತೊಂದರೆಗಳು ಉಂಟಾಗಿಲ್ಲ ಎನ್ನಲಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 − eighteen =
Remember me
