ದೆಹಲಿ:ಕರೊನಾ ಹೆಸರಲ್ಲಿ ಯಾರ್ಯಾರೋ ಹೇಗ್ಹೇಗೋ ಹಣ ಮಾಡಿಕೊಂಡಿದ್ದಿದೆ. ಅಂಥದ್ದೇ ಒಂದು ಕೆಲಸವನ್ನು ಈ ಕಿಡಿಗೇಡಿಗಳಿಬ್ಬರು ಮಾಡಿದ್ದು, ಕೊನೆಗೂ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ವಾಹನದ ಮೇಲೆ ‘ಕೋವಿಡ್​ ಸರ್ವಿಸ್​’ ಸ್ಟಿಕ್ಕರ್​ ಅಂಟಿಸಿಕೊಂಡು ಮತ್ತೇರಿಸೋ ಕೆಲಸ ಮಾಡುತ್ತಿದ್ದ ಇವರು ಇದೀಗ ಕಂಬಿ ಎಣಿಸುವಂತಾಗಿದೆ.
ಹೀಗೆ ಮಾಡಬಾರದ್ದನ್ನು ಮಾಡಲು ಹೋಗಿದ್ದಕ್ಕೆ ಇವರಿಗೆ ಹೊಸ ವರ್ಷದಂದು ಸಂತೋಷ ಉಂಟಾಗುವ ಬದಲು ಬೇಸರ ಆಗುವಂತಾಗಿದೆ. ಏಕೆಂದರೆ ಹೊಸ ವರ್ಷದ ಸಂದರ್ಭವನ್ನೇ ಎನ್​ಕ್ಯಾಷ್​ ಮಾಡಿಕೊಂಡು ಕೈತುಂಬ ಕ್ಯಾಷ್​ ಮಾಡಿಕೊಳ್ಳಬೇಕು ಎಂದುಕೊಂಡಿದ್ದ ಇವರ ಲೆಕ್ಕಾಚಾರ ತಲೆಕೆಳಗಾಗಿದ್ದು, ಅಂದೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಚಂದನ್ ಷಾ ಮತ್ತು ಕೃಷ್ಣನ್ ಡಿಯೊ ಎಂಬವರು ಬಂಧಿತರು. ಖಚಿತ ಮಾಹಿತಿ ಮೇರೆಗೆ ದೆಹಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.
ಇದನ್ನೂ ಓದಿ:ಯಡಿಯೂರಪ್ಪ ಅವರೇ ಸುಪ್ರೀಂ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಬಿಜೆಪಿ ಸಭೆ ಬಳಿಕ ಘೋಷಣೆ
ಕೋವಿಡ್​-19 ತುರ್ತು ಸೇವೆ ವಾಹನ ಎಂಬಂತೆ ಸ್ಟಿಕ್ಕರ್ ಹಾಕಿಕೊಂಡಿದ್ದ ಇವರಿಬ್ಬರು, ಆ ವಾಹನದ ಮೂಲಕ ಡ್ರಗ್ಸ್​ ಸರಬರಾಜು ಮಾಡುತ್ತಿದ್ದರು. ಒಡಿಶಾದಿಂದ ದೆಹಲಿಗೆ ಬರುತ್ತಿದ್ದ ಟೆಂಪೊವನ್ನು ದೆಹಲಿ ಪೊಲೀಸರು ತಡೆದು ಪರಿಶೀಲಿಸಿದಾಗ ಡ್ರಗ್ಸ್​ ಪತ್ತೆಯಾಗಿದೆ. ಬಂಧಿತರಿಂದ 950 ಕೆಜಿ ಮಾರಿಜುವಾನ ವಶ ಪಡಿಸಿಕೊಳ್ಳಲಾಗಿದೆ. ಬಂಧಿತರ ವಿಚಾರಣೆ ನಡೆಸುತ್ತಿರುವ ಪೊಲೀಸರು ಆ ಮೂಲಕ ಡ್ರಗ್ಸ್​ ಪೂರೈಸುತ್ತಿರುವವರ ಪತ್ತೆಗೆ ಮುಂದಾಗಿದ್ದಾರೆ. (ಏಜೆನ್ಸೀಸ್​)
‘ಮೊದಲ ಪತ್ನಿಯ ಜತೆ ಚೆನ್ನಾಗಿಯೇ ಇದ್ದೇನೆ: ಇನ್ನೊಂದು ಮದ್ವೆಯಾಗುವಂತೆ ಮಗಳೇ ಹೇಳಿದ್ದಳು’

ಮಾರಣಾಂತಿಕ ಎಬೋಲಾ ಪತ್ತೆಹಚ್ಚಿದ ವೈದ್ಯನಿಂದ ಇಡೀ ಮನುಕುಲವೇ ಬೆಚ್ಚಿಬೀಳುವಂತಹ ಎಚ್ಚರಿಕೆ!

ಲವ್​ ಜಿಹಾದ್​ ಎಂದು ಕೇಸ್ ಹಾಕಿದ್ಲು- ಆಮೇಲೆ ನೋಡಿದ್ರೆ ಎಲ್ಲಾ ಮೊದಲೇ ಮುಗಿಸಿದ್ಲು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 + 17 =
Remember me
