ಮುಂಬೈ:ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕರೊನಾ ವೈರಸ್​ನ ಹೊಸ ರೂಪಾಂತರಿ ಭಾರತೀಯ ಷೇರುಪೇಟೆಗೆ ಭಾರಿ ಆಘಾತ ನೀಡಿದೆ. ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 1688 ಅಂಕ ಇಳಿಕೆ ಕಂಡಿದ್ದರೆ ನಿಫ್ಟಿ 17100 ಮಟ್ಟಕ್ಕಿಂತ ಕೆಳಕ್ಕೆ ಕುಸಿದಿದೆ. ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಭಾರತ ಮಾತ್ರವಲ್ಲದೇ ವಿಶ್ವದ ಬಹುತೇಕ ಷೇರುಮಾರುಕಟ್ಟೆಯಲ್ಲಿ ಇಳಿಕೆ ದಾಖಲಾಗಿದೆ.
ಸೆನ್ಸೆಕ್ಸ್ 1687.94 ಅಂಶ ಇಳಿಕೆಯೊಂದಿಗೆ (ಶೇ.2.87) 57,107.15ರಲ್ಲಿ ಅಂತ್ಯಗೊಂಡಿದೆ. ನಿಫ್ಟಿ 509.80 (ಶೇ. 2.91)ಅಂಕ ಇಳಿಕೆ ಕಂಡು 17,026.45ರಲ್ಲಿ ಮುಕ್ತಾಯವಾಗಿದೆ. ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ 37 ಪೈಸೆ ಇಳಿಕೆ ಕಂಡಿದೆ. ಇಂಡಸ್ ಇಂಡ್ ಬ್ಯಾಂಕ್, ಮಾರುತಿ, ಟಾಟಾ ಸ್ಟೀಲ್, ಎನ್​ಟಿಪಿಸಿ, ಬಜಾಜ್ ಫೈನಾನ್ಸ್, ಎಚ್​ಡಿಎಫ್​ಸಿ, ಟೈಟನ್ ಷೇರುಗಳಲ್ಲಿ ಇಳಿಕೆ ಕಂಡುಬಂದಿದೆ. ಡಾ.ರೆಡ್ಡೀಸ್, ನೆಸ್ಲೆ, ಏಷ್ಯನ್ ಪೇಂಟ್ಸ್, ಟಿಸಿಎಸ್ ಷೇರುಗಳು ಏರಿಕೆ ಕಂಡಿವೆ. ರಿಯಲ್ಟಿ, ಮೆಟಲ್, ಆಟೋ ಕ್ಷೇತ್ರದ ಷೇರುಗಳು ಶೇ. 6ರವರೆಗೂ ಇಳಿಕೆ ದಾಖಲಿಸಿವೆ.
ಫಾರ್ಮಾ ಷೇರುಗಳಿಗೆ ಬೇಡಿಕೆ:ಕರೊನಾ ಪ್ರಕರಣ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಆರೋಗ್ಯ, ಔಷಧ ಕ್ಷೇತ್ರದ ಷೇರುಗಳತ್ತ ಮುಖ ಮಾಡಿದ್ದಾರೆ. ಡಾ.ರೆಡ್ಡಿ, ಅಪೊಲೊ ಹಾಸ್ಪಿಟಲ್ ಷೇರುಗಳ ಬೆಲೆ ಏರಿಕೆ ಕಂಡಿದೆ. ಔಷಧ ಕಂಪನಿ ಸಿಪ್ಲಾ ಷೇರು ಮೌಲ್ಯ ಶೇ. 7.37 ಏರಿಕೆ ಕಂಡಿದೆ.
ಕಚ್ಚಾತೈಲ ಇಳಿಕೆ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾತೈಲದ ದರ ಶೇ. 4 ಇಳಿಕೆ ಕಂಡಿದೆ. ಕರೊನಾ ಏರಿಕೆ ಹಿನ್ನೆಲೆಯಲ್ಲಿ ಬೇಡಿಕೆ ಕುಸಿದ ಕಾರಣ ಬೆಲೆಯೂ ಇಳಿದಿದೆ. ಬ್ರೆಂಟ್ ಕಚ್ಚಾತೈಲ ದರ ಈಗ ಪ್ರತಿ ಬ್ಯಾರಲ್​ಗೆ 80 ಡಾಲರ್​ಗಿಂತಲೂ ಕಡಿಮೆ ಆಗಿದೆ. ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗೆ 79.06 ಡಾಲರ್​ಗೆ ಒಂದು ಬ್ಯಾರಲ್ ಮಾರಾಟವಾಗಿದೆ.
ಕುಸಿತಕ್ಕೆ ಕಾರಣವೇನು?:ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರಿ ವೈರಸ್ ಪತ್ತೆಯಾಗಿರುವುದು ಇಳಿಕೆಗೆ ಪ್ರಮುಖ ಕಾರಣ. ಹಲವು ದೇಶಗಳಲ್ಲಿ ಈಗಾಗಲೇ ಕರೊನಾ ಪ್ರಕರಣಗಳು ಹೆಚ್ಚುತ್ತಿವೆ. ಆಸ್ಟ್ರೇಲಿಯಾ, ಬ್ರಿಟನ್, ಜರ್ಮನಿ, ಯುರೋಪ್​ನ ಹಲವು ರಾಷ್ಟ್ರಗಳಲ್ಲಿ ಲಾಕ್​ಡೌನ್ ವಿಧಿಸಲಾಗಿದೆ. ಅಮೆರಿಕದಲ್ಲೂ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಈಗ ಹೊಸ ರೂಪಾಂತರಿ ಪತ್ತೆಯಾಗಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಇನ್ನಷ್ಟು ದೇಶಗಳು ಲಾಕ್​ಡೌನ್ ವಿಧಿಸುವ ಸಾಧ್ಯತೆ ಇದೆ. ಇದರಿಂದ ಭೀತಿಗೊಂಡ ದೊಡ್ಡ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ವಿಶ್ವದಾದ್ಯಂತ ಷೇರುಮಾರುಕಟ್ಟೆಯಲ್ಲಿ ಇಳಿಕೆ ಕಂಡುಬಂದಿದೆ. ಇದರ ಜತೆಗೆ ಅಮೆರಿಕದ ಫೆಡರಲ್ ರಿಸರ್ವ್ (ಅಲ್ಲಿನ ರಿಸರ್ವ್ ಬ್ಯಾಂಕ್) ಬಡ್ಡಿದರ ಏರಿಕೆಯ ಸುಳಿವು ನೀಡಿದೆ. ಕರೊನಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಆರ್ಥಿಕ ಉತ್ತೇಜನ ಕ್ರಮಗಳನ್ನು ಸ್ಥಗಿತ ಮಾಡುತ್ತಿದೆ. ಇದು ಕೂಡ ಮಾರುಕಟ್ಟೆ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಭಾರತದಲ್ಲೂ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ತುಸು ಏರಿಕೆ ಕಂಡುಬಂದಿದೆ. ಪ್ರಕರಣ ಸಂಖ್ಯೆ ಇನ್ನಷ್ಟು ಏರಿಕೆ ಕಂಡರೆ, ಮಾರುಕಟ್ಟೆಯೂ ಕುಸಿತ ಕಾಣಬಹುದು ಎನ್ನಲಾಗಿದೆ. ವಿದೇಶಿ ಹೂಡಿಕೆದಾರರು ಕಳೆದ ಎರಡು ತಿಂಗಳಿಂದ ದೊಡ್ಡ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 3 =
Remember me
