ನವದೆಹಲಿ:ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ಎರಡು ವರ್ಷದ ನಂತರವೂ ರೋಗ ಲಕ್ಷಣ ಮತ್ತೆ ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನವೊಂದನ್ನು ಉಲ್ಲೇಖಿಸಿ ವೈದ್ಯಕೀಯ ಪತ್ರಿಕೆ ‘ದಿ ಲ್ಯಾನ್ಸೆಟ್’ ವರದಿ ಮಾಡಿದೆ. ಕರೊನಾದಿಂದ ಸುಧಾರಿಸಿಕೊಂಡ ಗಣನೀಯ ಪ್ರಮಾಣದ ಜನರ ವಿವಿಧ ಅಂಗಗಳು ಮತ್ತು ವ್ಯವಸ್ಥೆಗಳಲ್ಲಿ ದೀರ್ಘಕಾಲೀನ ಪರಿಣಾಮ ಉಂಟಾಗುತ್ತದೆ ಎನ್ನುವುದಕ್ಕೆ ಪುರಾವೆ ಸಿಕ್ಕಿದೆ ಎಂದು ಪತ್ರಿಕೆ ಹೇಳಿದೆ. ಕೋವಿಡ್ ಸೋಂಕಿತರಾಗಿ ಗುಣ ಮುಖರಾದವರಲ್ಲಿ ಎರಡು ವರ್ಷದ ನಂತರದ ಆರೋಗ್ಯ ಸ್ಥಿತಿ ಸಾಮಾನ್ಯರಲ್ಲಿ ಇರುವುದಕ್ಕಿಂತ ಗಣನೀಯವಾಗಿ ಕಡಿಮೆಯಾಗಿರುತ್ತದೆ ಎಂದು ಅಧ್ಯಯನ ಹೇಳಿದೆ.
ಅರ್ಧದಷ್ಟು ಮಂದಿ ಆಸ್ಪತ್ರೆಗೆ:ಕರೊನಾದಿಂದ ಚೇತ ರಿಸಿಕೊಂಡ ಎರಡು ವರ್ಷದ ನಂತರ ಆಸ್ಪತ್ರೆ ಸೇರಿದ ಅರ್ಧದಷ್ಟು ಮಂದಿಯಲ್ಲಿ ಕೋವಿಡ್​ನ ಕನಿಷ್ಠ ಒಂದಾ ದರೂ ಲಕ್ಷಣವಿರುತ್ತದೆ ಎಂದು ಅಧ್ಯಯನ ಹೇಳಿದೆ.
19 ಸಾವಿರಕ್ಕಿಳಿದ ಸಕ್ರಿಯ ಕೇಸ್:ಗುರುವಾರ ಭಾರತದಲ್ಲಿ ಕರೊನಾ ಸೋಂಕಿನ 2,827 ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 4,31,13,413ಕ್ಕೆ ಏರಿದೆ. 24 ಜನರ ಮರಣದೊಂದಿಗೆ ಸಾವಿನ ಸಂಖ್ಯೆ 5,24,181ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 19,067ಕ್ಕೆ (0.04%) ಇಳಿದಿದೆ. ದೈನಿಕ ಪಾಸಿಟಿವಿಟಿ ದರ ಶೇ. 0.60 ಹಾಗೂ ಸಾಪ್ತಾಹಿಕ ದರ ಶೇ. 0.72 ಆಗಿದೆ. ರಾಷ್ಟ್ರೀಯ ಚೇತರಿಕೆ ದರ ಶೇ. 98.74 ಆಗಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಲ್ಲಿ ಇದುವರೆಗೆ ನೀಡಿದ ಲಸಿಕೆ ಪ್ರಮಾಣ 190.83 ಕೋಟಿ ಡೋಸ್ ದಾಟಿದೆ ಎಂದು ಸರ್ಕಾರ ವಿವರಿಸಿದೆ.
ಕ್ಷೀಣವಾಗುತ್ತಿದೆ ಕರೊನಾ:ಅಮೆರಿಕ ಮತ್ತು ಆಫ್ರಿಕಾ ಹೊರತುಪಡಿಸಿ ಜಗತ್ತಿನ ಉಳಿದ ಭಾಗಗಳಲ್ಲಿ ಕರೊನಾ ಸಾಂಕ್ರಾಮಿಕತೆ ಕ್ಷೀಣಿಸುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಹೇಳಿದೆ. ಜಾಗತಿಕವಾಗಿ 35 ಲಕ್ಷ ಹೊಸ ಕೇಸ್​ಗಳು ದೃಢಪಟ್ಟಿದ್ದು 25,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದು ಇಳಿಕೆಯನ್ನು ತೋರಿಸುತ್ತದೆ ಎಂದು ವರದಿ ತಿಳಿಸಿದೆ.
10 ಲಕ್ಷ ದಾಟಿದ ಸಾವು:ಅಮೆರಿಕದಲ್ಲಿ ಕರೊನಾ ವ್ಯಾಧಿಗೆ ಬಲಿಯಾದವರ ಸಂಖ್ಯೆ 10 ಲಕ್ಷ ದಾಟಿದೆ ಎಂದು ಎಂದು ಅಧ್ಯಕ್ಷ ಜೋ ಬೈಡೆನ್ ಗುರುವಾರ ಪ್ರಕಟಿಸಿದ್ದಾರೆ. ಸೋಂಕಿನ ವಿರುದ್ಧ ಜಾಗೃತರಾಗಿದ್ದು ಆದಷ್ಟು ಹೆಚ್ಚು ಪ್ರಾಣಗಳನ್ನು ಉಳಿಸುವುದು ಅಗತ್ಯ ಎಂದು ಹೇಳಿಕೆಯೊಂದರಲ್ಲಿ ಬೈಡೆನ್ ಹೇಳಿದ್ದಾರೆ.
ಉತ್ತರ ಕೊರಿಯಾದಲ್ಲಿ ಲಾಕ್​ಡೌನ್:ಉತ್ತರ ಕೊರಿಯಾದಲ್ಲಿ ಕರೊನಾ ವ್ಯಾಧಿಯ ಮೊದಲ ಪ್ರಕರಣ ಗುರುವಾರ ದೃಢಪಟ್ಟಿದ್ದು ಲಾಕ್​ಡೌನ್ ಘೋಷಿಸಲಾಗಿದೆ. ಜಗತ್ತಿನಲ್ಲಿ ಕರೊನಾ ಮಹಾಮಾರಿ ಆರ್ಭಟಿಸಿ ಎರಡು ವರ್ಷಕ್ಕೂ ಹೆಚ್ಚಿನ ಅವಧಿ ಕಳೆದ ನಂತರ ಉತ್ತರ ಕೊರಿಯಾ ಮೊದಲ ಕೇಸನ್ನು ದೃಢಪಡಿಸಿದೆ. ರಾಜಧಾನಿ ಪಾಂಗ್ಯಾಂಗ್​ನಲ್ಲಿ ಭಾನುವಾರ ಜ್ವರಪೀಡಿತ ಅನೇಕ ಜನರಿಂದ ಸ್ಯಾಂಪಲ್​ಗಳನ್ನು ಸಂಗ್ರಹಿಸಲಾಗಿದ್ದು ಒಬ್ಬನಲ್ಲಿ ಒಮಿಕ್ರಾನ್ ತಳಿಯ ಸೋಂಕು ಇರುವುದು ತಿಳಿದು ಬಂದಿದೆ. ಸಾಂಕ್ರಾಮಿಕತೆಯ ಮೊದಲ ಪ್ರಕರಣ ದೃಢಪಡುವುದರೊಂದಿಗೆ ಅದು ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ದೇಶದಾದ್ಯಂತ ನಗರಗಳು ಮತ್ತು ಕೌಂಟಿಗಳಲ್ಲಿ ಲಾಕ್​ಡೌನ್ ವಿಧಿಸಲು ಅಧ್ಯಕ್ಷ ಕಿಮ್ ಜಾಂಗ್ ಉನ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಬೂಸ್ಟರ್ ಡೋಸ್ ನಿಯಮ ಸಡಿಲಿಕೆ:ಎರಡೂ ಡೋಸ್ ಪಡೆದ ಒಂಬತ್ತು ತಿಂಗಳ ನಂತರ ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ಪಡೆಯಬೇಕೆಂಬ ನಿಯಮವನ್ನು ವಿದೇಶಗಳಿಗೆ ತೆರಳುವ ಭಾರತೀಯರಿಗೆ ಸಡಿಲಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬೂಸ್ಟರ್ ಡೋಸ್ ಪಡೆಯುವುದನ್ನು ಕೆಲವು ದೇಶಗಳು ಕಡ್ಡಾಯಗೊಳಿಸಿದ್ದು ಅಂಥ ರಾಷ್ಟ್ರಗಳಿಗೆ ಶಿಕ್ಷಣ, ಉದ್ಯೋಗ ಮತ್ತಿತರ ಕಾರ್ಯ ನಿಮಿತ್ತ ತೆರಳುವವರಿಗೆ ತೊಂದರೆಯಾಗುವುದನ್ನು ನಿವಾರಿಸಲು ಕೇಂದ್ರ ಮುಂದಾಗಿದೆ.
ಛೇ.. ಇದೆಂಥ ದುರಂತ!; ಮಗಳಿಗೆ ಮದ್ವೆ ಮಾಡಿಸಿ ಗಂಡನ ಮನೆಗೆ ಕಳಿಸಿದ ಬೆನ್ನಿಗೇ ತಂದೆಯ ಸಾವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + one =
Remember me
