ಹೈದರಾಬಾದ್:ಒಂದೆಡೆ ಕರೊನಾ ಸೋಂಕು ಎಲ್ಲರನ್ನೂ ಭಯಭೀತಿಗೊಳಿಸಿದ್ದರೆ, ಸೋಂಕಿಗೆ ಒಮ್ಮೆ ಒಳಗಾದರೆ ಅವರನ್ನು ಜನರು ನಂಬದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆಯವರಷ್ಟೇ ಅಲ್ಲ, ಖುದ್ದು ಮನೆಯವರೇ ನಂಬದ ಪರಿಸ್ಥಿತಿ ಇದೆ.
ಇಂಥದ್ದೇ ಸಂಕಷ್ಟಕ್ಕೆ ಸಿಲುಕಿದ್ದಾರೆ ಹಲವು ಕರೊನಾ ಸೋಂಕಿತರು. ಈ ಪೈಕಿ, ಹೈದರಾಬಾದ್‌ನ ಪ್ರಕರಣ ಮಾತ್ರ ಬೆಳಕಿಗೆ ಬಂದಿದೆ. ಇಲ್ಲಿ ಸುಮಾರು 50 ಮಂದಿ ಸೋಂಕಿತರು ಮನೆಗೆ ಜಪ್ಪಯ್ಯ ಎಂದರೂ ಹೋಗುತ್ತಿಲ್ಲ. ಗುಣಮುಖರಾದರೂ ಮನೆಗೆ ಹೋದವರು ಪಾವಸ್‌ ಆಗಿದ್ದಾರೆ. ಕಾರಣ ಮಾತ್ರ ಭಯಾನಕವಾಗಿದೆ.
ಅದೇನೆಂದರೆ ಗುಣಮುಖರಾಗಿ ಮನೆಗೆ ಹೊರಟವರಿಗೆ ದೊಡ್ಡ ಆಘಾತವೇ ಕಾದಿತ್ತು. ಗುಣಮುಖರಾಗಿದ್ದರೂ ಅವರನ್ನು ಮನೆಯೊಳಗೆ ಸೇರಿಸಿಕೊಳ್ಳಲು ಕುಟುಂಬದವರು ಸಿದ್ಧರಿರಲಿಲ್ಲ. ಇಂಥದ್ದೇ ಸ್ಥಿತಿ 50 ಜನರಿಗೆ ಆಗಿದ್ದು, ಅವರು ಮತ್ತೆ ಆಸ್ಪತ್ರೆಗೆ ಮರಳಿದ್ದಾರೆ.
93 ವರ್ಷದ ವೃದ್ಧೆಯೊಬ್ಬರು ತಮಗಾಗಿರುವ ನೋವನ್ನು ಬಿಚ್ಚಿಟ್ಟಿದ್ದಾರೆ, ಕರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಹೈದರಾಬಾದ್​ನ ಗಾಂಧಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದೆ. ಆದರೆ, ಮನೆಯೊಳಗೆ ತಮ್ಮನ್ನು ಯಾರೂ ಸೇರಿಸಿಕೊಳ್ಳುತ್ತಿಲ್ಲ. ಮಕ್ಕಳು ಮಾತ್ರವಲ್ಲದೇ ಮೊಮ್ಮಕ್ಕಳೂ ನನ್ನನ್ನು ಕಂಡರೆ ಹೆದರಿಕೊಳ್ಳುತ್ತಾರೆ. ಅದ್ದರಿಂದ ಪುನಃ ಆಸ್ಪತ್ರೆಗೆ ಬಂದಿದ್ದೇನೆ ಎನ್ನುತ್ತಾರೆ.
ಇದನ್ನೂ ಓದಿ:ಟಿಕ್​ ಟಾಕ್ ಸ್ಟಾರ್​​​ ಆತ್ಮಹತ್ಯೆಗೆ ಕಾರಣವೇನು? ಪೊಲೀಸರಿಗೆ ಸ್ಪೋಟಕ ಮಾಹಿತಿ ನೀಡಿದ ಕುಟುಂಬ​
ಇದು ಆ ಅಜ್ಜಿಯೊಬ್ಬರ ಕತೆಯಲ್ಲ. ಹೈದರಾಬಾದ್​ನ ಕೋವಿಡ್ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿರುವ 50 ರೋಗಿಗಳ ಮನೆಯವರು ಇದೇ ಕಾರಣಕ್ಕೆ ತಮ್ಮವರನ್ನು ಮನೆಗೆ ಕರೆದುಕೊಂಡು ಹೋಗಲು ಒಪ್ಪಿಲ್ಲ. ಇದರಿಂದ ಎಲ್ಲರೂ ಆಸ್ಪತ್ರೆಯಲ್ಲೇ ಉಳಿಯುವಂತಾಗಿದೆ. ಕೆಲವರು ಆಸ್ಪತ್ರೆಯ ಸಿಬ್ಬಂದಿಯ ಫೋನ್​ಗೆ ಪ್ರತಿಕ್ರಿಯೆಯನ್ನೇ ನೀಡಿಲ್ಲ. ಇನ್ನು ಕೆಲವು ರೋಗಿಗಳು ಆಸ್ಪತ್ರೆಯ ಗೇಟ್ ಬಳಿ ಗಂಟೆಗಟ್ಟಲೆ ತಮ್ಮ ಮನೆಯವರಿಗಾಗಿ ಕಾದು, ಸುಸ್ತಾಗಿ ಮತ್ತೆ ಆಸ್ಪತ್ರೆಗೆ ವಾಪಾಸಾಗಿದ್ದಾರೆ. ಹೀಗಾಗಿ, 50ಕ್ಕೂ ಹೆಚ್ಚು ಜನರು ಆಸ್ಪತ್ರೆಯಲ್ಲಿ ಮರು ದಾಖಲಾಗಿದ್ದಾರೆ.
ಡಿಸ್ಚಾರ್ಜ್ ಆಗಿರುವ ಎಲ್ಲ ರೋಗಿಗಳು ಆರೋಗ್ಯವಾಗಿದ್ದಾರೆ. ಆದರೆ, ಅವರನ್ನು ಸ್ವೀಕರಿಸಲು ಅವರ ಮನೆಯವರು ನಿರಾಕರಿಸುತ್ತಿದ್ದಾರೆ. ಹೀಗಾಗಿ, ಅವರನ್ನು ಮತ್ತೆ ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಗಿದೆ ಎಂದು ಗಾಂಧಿ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ. ಪ್ರಭಾಕರ್ ರಾವ್ ತಿಳಿಸಿದ್ದಾರೆ.(ಏಜೆನ್ಸೀಸ್‌)
ಕರೊನಾ ಸೋಂಕು: ಆಸ್ಪತ್ರೆಯಲ್ಲಿಯೇ ನೇಣಿಗೆ ಶರಣಾದ ಮಹಿಳೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:17 + 18 =
Remember me
