ನವದೆಹಲಿ :ಮಕ್ಕಳಲ್ಲಿ ಕೋವಿಡ್​19 ಸೋಂಕು ಕಾಣಿಸಿಕೊಂಡಾಗ ಪಾಲಿಸಬೇಕಾದ ಚಿಕಿತ್ಸಾ ಕ್ರಮದ ಬಗ್ಗೆ ಕೇಂದ್ರ ಸರ್ಕಾರ ಸಮಗ್ರ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಆರೋಗ್ಯ ಸಚಿವಾಲಯದ ಡೈರೆಕ್ಟೊರೇಟ್​ ಜನರಲ್ ಆಫ್ ಹೆಲ್ತ್​ ಸರ್ವೀಸಸ್(ಡಿಜಿಎಚ್​​ಎಸ್) ಹೊರಡಿಸಿರುವ ಈ ಮಾರ್ಗಸೂಚಿಗಳಲ್ಲಿ ಕರೊನಾ ಸೋಂಕಿತ ಮಕ್ಕಳಿಗೆ ರೆಮ್​ಡೆಸಿವಿರ್​ ಆ್ಯಂಟಿವೈರಲ್​ ಔಷಧಿ ಬಳಕೆ ಬೇಡ ಎಂದಿದ್ದು, ಸ್ಟೀರಾಯ್ಡ್​ ಬಳಕೆ ಮತ್ತು ಸಿಟಿ ಸ್ಕ್ಯಾನ್​ಗಳ ಬಗ್ಗೆಯೂ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಆಸ್ಪತ್ರೆಯಲ್ಲಿ ದಾಖಲಾಗಿರುವ ತೀವ್ರ ಮತ್ತು ಗಂಭೀರ ಸೋಂಕಿನ ಪ್ರಕರಣಗಳಲ್ಲಿ ಮಾತ್ರ ಸ್ಟಿರಾಯ್ಡ್​ಅನ್ನು ಬಿಗಿ ಮೇಲ್ವಿಚಾರಣೆಯಲ್ಲಿ ಬಳಸಬೇಕು ಎಂದು ಡಿಜಿಎಚ್​ಎಸ್​ ಶಿಫಾರಸ್ಸು ಮಾಡಿದೆ. “ಸ್ಟಿರಾಯ್ಡ್​ಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ಡೋಸ್​ನಲ್ಲಿ ಮತ್ತು ಸರಿಯಾದ ಅವಧಿಗೆ ಬಳಸಬೇಕು. ವೈದ್ಯರ ಸಲಹೆಯಿಲ್ಲದೆ ಸ್ಟಿರಾಯ್ಡ್​ ಬಳಸಬಾರದು” ಎಂದಿದೆ.
ಇದನ್ನೂ ಓದಿ:ಮಕ್ಕಳ ಮೇಲೆ ಕೋವಾಕ್ಸಿನ್ ಟ್ರಯಲ್ಸ್​ಗೆ ದೆಹಲಿ ಏಮ್ಸ್​ ಸಜ್ಜು
ಕರೊನಾ ಸೋಂಕಿತರಲ್ಲಿ ವೈರಲ್​ ಲೋಡ್​ಅನ್ನು ಕಡಿಮೆ ಮಾಡಲು ಬಳಸುವ ರೆಮ್​ಡೆಸಿವಿರ್ ಚುಚ್ಚುಮದ್ದನ್ನು ಮಕ್ಕಳಿಗೆ ಶಿಫಾರಸು ಮಾಡಿಲ್ಲ. “18 ವರ್ಷದೊಳಗಿನವರಲ್ಲಿ ರೆಮ್​ಡೆಸಿವಿರ್​ ಬಳಕೆಗೆ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ” ಎನ್ನಲಾಗಿದೆ.
ಶ್ವಾಸಕೋಶಕ್ಕೆ ಎಷ್ಟು ಪ್ರಮಾಣದಲ್ಲಿ ಸೋಂಕು ಹರಡಿದೆ ಎಂದು ಪರೀಕ್ಷಿಸಲು ಬಳಸುವ ಹೈರೆಸಲ್ಯೂಷನ್ ಸಿಟಿ (ಎಚ್​ಆರ್​ಸಿಟಿ)ಯನ್ನು ತೀರಾ ಅಗತ್ಯವಿದ್ದರೆ ಮಾತ್ರ ಆರ್ಡರ್​ ಮಾಡಬೇಕು. ಮೆದುಪ್ರಮಾಣದ ಮತ್ತು ಏಸಿಮ್ಟಮ್ಯಾಟಿಕ್ ಪ್ರಕರಣಗಳಲ್ಲಿ ಆ್ಯಂಟಿಮೈಕ್ರೋಬಿಯಲ್​ಗಳ ಬಳಕೆ ಸೂಕ್ತವಲ್ಲ; ಅದೇ ಮಧ್ಯಮ ಮತ್ತು ತೀವ್ರ ಪ್ರಕರಣಗಳಲ್ಲಿ ಹೆಚ್ಚುವರಿ ಸೋಂಕು ಕಂಡುಬಂದಾಗ ಮಾತ್ರ ಬಳಸಬೇಕು ಎನ್ನಲಾಗಿದೆ.(ಏಜೆನ್ಸೀಸ್)
ಜನರಿಗೆ ಮತ್ತೊಂದು ಶಾಕ್​ : ಪ್ರತಿ ಯುನಿಟ್​​ಗೆ 30 ಪೈಸೆ ವಿದ್ಯುತ್ ದರ ಏರಿಕೆ

ಕರೊನಾ ನಿಯಮ ಉಲ್ಲಂಘಿಸಿ ಬರ್ತ್​ಡೇ! ಪೊಲೀಸ್ ಅಧಿಕಾರಿ ಸಸ್ಪೆಂಡ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 13 =
Remember me
