ನವದೆಹಲಿ :ಕರೊನಾ ಲಸಿಕಾ ಅಭಿಯಾನದ ಮೂರನೇ ಹಂತ ಇಂದು ಆರಂಭವಾಗಿದ್ದು, 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದಾರೆ. ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳ ಪ್ರತಿಯೊಂದು ದಿನವೂ ಸರ್ಕಾರಿ ಮತ್ತು ಖಾಸಗಿ ಲಸಿಕೆ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುವುದು ಎನ್ನಲಾಗಿದೆ.
ಲಸಿಕಾ ಅಭಿಯಾನವು ಏಪ್ರಿಲ್​ನಲ್ಲಿ ಸರ್ಕಾರಿ ರಜಾದಿನಗಳನ್ನೂ ಒಳಗೊಂಡಂತೆ ಎಲ್ಲಾ ದಿನಗಳಲ್ಲೂ ನಡೆಯಬೇಕು ಎಂದು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಕರೊನಾ ಸಂಬಂಧಿತ ಸಾವುಗಳು ಶೇ. 90 ರಷ್ಟು 45 ವರ್ಷ ಮೇಲ್ಪಟ್ಟ ಜನರಲ್ಲೇ ಕಂಡುಬಂದಿರುವುದರಿಂದ ಈ ವರ್ಗದ ಜನರು ಸೋಂಕು ಹೊಂದುವ ಅತಿ ಹೆಚ್ಚು ಅಪಾಯವನ್ನು ಹೊಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಸಚಿವ ಬಿ.ಸಿ ಪಾಟೀಲ್​ಗೆ ಮನೆಯಲ್ಲೇ ಕರೊನಾ ಲಸಿಕೆ ಪ್ರಕರಣ: ತಾಲೂಕು ವೈದ್ಯಾಧಿಕಾರಿ ಅಮಾನತು!
ಮಾರ್ಚ್ 31 ರ ಬೆಳಿಗ್ಗೆ 9 ಗಂಟೆಯಿಂದ ಏಪ್ರಿಲ್ 1 ರ ಬೆಳಿಗ್ಗೆ 9 ಗಂಟೆವರೆಗಿನ 24 ಗಂಟೆಗಳಲ್ಲಿ ಭಾರತದಲ್ಲಿ 72,330 ಕರೊನಾ ಪ್ರಕರಣಗಳು ವರದಿಯಾಗಿವೆ. 2020ರ ಅಕ್ಟೋಬರ್​ನಲ್ಲಿ ಈ ರೀತಿಯ ಏರಿಕೆ ಕಂಡಿದ್ದು, ಇದೀಗ ಮತ್ತೆ ಸೋಂಕು ದರ ಏರಿರುವುದು ಕಳವಳಕ್ಕೆ ಕಾರಣವಾಗಿದೆ. ವರದಿಯಾದ ಪ್ರಕರಣಗಳಲ್ಲಿ 39,544 ಮಹಾರಾಷ್ಟ್ರದಿಂದ ದಾಖಲಾಗಿದ್ದು, ಛತ್ತೀಸಗಡದಿಂದ 4,563 ಮತ್ತು ಕರ್ನಾಟಕದಿಂದ 4,000 ಪ್ರಕರಣಗಳು ದಾಖಲಾಗಿವೆ.(ಏಜೆನ್ಸೀಸ್)
15 ನಿಮಿಷದಲ್ಲಿ ಕರೊನಾ ಪರೀಕ್ಷೆ ಫಲಿತಾಂಶ ನೀಡುವ ‘ನಿರ್ವಾಣ’
ಚಿಕ್ಕ ಮಕ್ಕಳಲ್ಲಿ ಹೆಚ್ಚಿದ ಕರೊನಾ ಸೋಂಕು; ಎಚ್ಚರವಾಗಿರಲು ಸಲಹೆ
ಈ ಅಪರೂಪದ ತರಕಾರಿಯ ಬೆಲೆ ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 20 =
Remember me
