ನವದೆಹಲಿ:ಕರೊನಾ ಲಸಿಕೆ ಲಭ್ಯವಾಗುತ್ತಿದ್ದಂತೆ ಅದನ್ನು ತ್ವರಿತವಾಗಿ ಜನರಿಗೆ ವಿತರಿಸಲು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸಿದೆ. ಅಂಗನವಾಡಿ ಕೇಂದ್ರಗಳು, ಶಾಲೆಗಳು, ಪಂಚಾಯಿತಿ ಕಟ್ಟಡಗಳನ್ನು ಕರೊನಾ ವೈರಸ್ ಲಸಿಕಾ ಕೇಂದ್ರಗಳನ್ನಾಗಿಸಲು ಸರ್ಕಾರ ನಿರ್ಧರಿಸಿದೆ. ಹಾಲಿ ಆರೋಗ್ಯ ಕೇಂದ್ರಗಳ ಜತೆ ಹೆಚ್ಚುವರಿಯಾಗಿ ಈ ಕೇಂದ್ರಗಳನ್ನು ಬಳಸಲಾಗುತ್ತದೆ ಎಂದು ತಜ್ಞರ ತಂಡ ರಚಿಸಿರುವ ನೀಲಿನಕ್ಷೆಯಲ್ಲಿ ಹೇಳಲಾಗಿದೆ.
ಕೋವಿಡ್-19 ವಿಶೇಷ ಲಸಿಕೆ ಕಾರ್ಯಕ್ರಮ ಅನ್ವಯ ಲಸಿಕಾ ಕೇಂದ್ರಕ್ಕೆ ಬಳಸಬಹುದಾದ ಕಟ್ಟಡಗಳನ್ನು ರಾಜ್ಯ ಸರ್ಕಾರಗಳು ಗುರುತಿಸಲಿವೆ. ಈಗಿರುವ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮಕ್ಕೆ (ಯುಐಪಿ) ಪರ್ಯಾಯವಾಗಿ ಇದನ್ನು ಕೈಗೊಳ್ಳಲಾಗುತ್ತದೆ. ಡೂಪ್ಲಿಕೇಶನ್ ತಡೆಯುವ ಉದ್ದೇಶದಿಂದ ಲಸಿಕೆ ಪಡೆಯುವವರ ಪಟ್ಟಿಯನ್ನು ಆಧಾರ್​ಗೆ ಸಂರ್ಪಸಲಾಗುತ್ತದೆ. ಫಲಾನುಭವಿಗಳನ್ನು ಟ್ರ್ಯಾಕ್ ಮಾಡಲೂ ಇದು ನೆರವಾಗುತ್ತದೆ. ಆಧಾರ್ ಇಲ್ಲದಿದ್ದರೆ ಭಾವಚಿತ್ರ ಸಹಿತವಾದ ಸರ್ಕಾರಿ ಐಡಿ ಕಾರ್ಡ್ ಬಳಸಲಾಗುತ್ತದೆ. ಲಸಿಕಾ ಕಾರ್ಯಕ್ರಮಕ್ಕಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ಇಲೆಕ್ಟ್ರಾನಿಕ್ ವ್ಯಾಕ್ಸಿನ್ ಇಂಟೆಲಿಜೆನ್ಸ್ ನೆಟ್​ವರ್ಕ್ (ಎವಿನ್) ವ್ಯವಸ್ಥೆ ಜಾಲವನ್ನು ಬಳಸಲಾಗುತ್ತದೆ.
ಪ್ರಧಾನಿ ಸಲಹೆ: ಚುನಾವಣೆ ಮತ್ತು ಪ್ರಕೃತಿ ವಿಕೋಪಗಳನ್ನು ನಿರ್ವಹಿಸಿದ ಅನುಭವಗಳನ್ನು ಲಸಿಕೆ ರವಾನೆ (ಡೆಲಿವರಿ) ಮತ್ತು ವಿತರಣೆ ವ್ಯವಸ್ಥೆ ಅಭಿವೃದ್ಧಿಪಡಿಸಲು ಬಳಸಿಕೊಳ್ಳುವಂತೆ ಕಳೆದ ವಾರ ನಡೆದ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಲಹೆ ಮಾಡಿದ್ದರು.
ವಿದೇಶಗಳಲ್ಲಿ ಲಸಿಕೆ ಪರೀಕ್ಷೆ: ಭಾರತದ ಕೆಲವು ಪಾಲುದಾರ ದೇಶಗಳಲ್ಲಿ ಕರೊನಾ ಲಸಿಕೆಯ ಮೂರನೇ ಹಂತದ ಪರೀಕ್ಷೆ ನಡೆಸುವ ಸಾಧ್ಯತೆಯನ್ನು ಭಾರತ ಪರಿಶೀಲಿಸುತ್ತಿದೆ. ಲಸಿಕೆ ಅಭಿವೃದ್ಧಿಯಲ್ಲಿ ಸಂಶೋಧನೆ ಸಹಯೋಗಕ್ಕೂ ದೇಶ ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ ವಿ ಶ್ರಿಂಗ್ಲಾ ತಿಳಿಸಿದ್ದಾರೆ.
ರೊಮೇನಿಯಾದಲ್ಲಿ ಕರ್ಫ್ಯೂ ಹೇರಿಕೆ
ಐರೋಪ್ಯ ಒಕ್ಕೂಟದ ಸದಸ್ಯ ದೇಶ ರೊಮೇನಿಯಾ, ಕನಿಷ್ಠ ಆರೋಗ್ಯ ಮೂಲಸೌಕರ್ಯ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಅಲ್ಲಿ ಕರೊನಾ ಸೋಂಕಿತರು ಹಾಗೂ ಮೃತರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವುದರಿಂದ ದೇಶಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ಶಾಲೆ ಕಾಲೇಜ್​ಗಳನ್ನು ಮುಚ್ಚಲಾಗಿದೆ.
ಸರಾಸರಿ ಸಾವಿನ ಪ್ರಮಾಣ ಇಳಿಕೆ
ಪ್ರತಿ ದಿನದ ಸರಾಸರಿ ಸಾವಿನ ಪ್ರಮಾಣ ಕಳೆದ ಏಳು ವಾರಗಳಿಂದ ಇಳಿಯುತ್ತಿದೆ. ಸೆಪ್ಟೆಂಬರ್ 16ರಿಂದ 22ರ ನಡುವೆ ಸರಾಸರಿ 1165 ಜನರು ಮೃತರಾಗಿದ್ದರು. ಅಕ್ಟೋಬರ್ 28ರಿಂದ ನವೆಂಬರ್ 3ರ ವರೆಗೆ ಇದು 513ಕ್ಕೆ ಇಳಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಅಮೆರಿಕದಲ್ಲಿ ಲಕ್ಷ ದಾಟಿದ ಪ್ರಕರಣ
ಅಮೆರಿಕದಲ್ಲಿ ಗುರುವಾರ 1,20,000ಕ್ಕೂ ಹೆಚ್ಚು ಕರೊನಾ ಪ್ರಕರಣ ದಾಖಲಾಗಿವೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವ ವಿದ್ಯಾಲಯ ಹೇಳಿದೆ. ಇದು ವಿಶ್ವದಲ್ಲೇ ಈವರೆಗಿನ ಏಕದಿನ ದಾಖಲೆ. ಸತತ 3ನೇ ದಿನವಾದ ಗುರುವಾರ ಸಾವಿನ ಸಂಖ್ಯೆ 1000 ದಾಟಿದೆ. ಸೆಪ್ಟೆಂಬರ್ ಆರಂಭದಲ್ಲಿ ಅಮೆರಿಕದಲ್ಲಿ ಈ ಪ್ರಮಾಣದ ಕೊವಿಡ್ ಸಾವು ಸಂಭವಿಸಿತ್ತು.
ದೆಹಲಿ ಕರೊನಾ ರಾಜಧಾನಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ದೆಹಲಿ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಇದು ‘ಕರೊನಾ ರಾಜಧಾನಿ’ ಆಗಬಹುದೆಂದು ಕಳವಳ ವ್ಯಕ್ತಪಡಿಸಿದೆ. ಸಾಂಕ್ರಾಮಿಕತೆ ವಿಚಾರದಲ್ಲಿ ದೆಹಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೋರ್ಟ್ ಹೇಳಿದೆ. ಭಾರತದಲ್ಲಿ ಶುಕ್ರವಾರ 47,638 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇದು ಗುರುವಾರಕ್ಕಿಂತ ಶೇಕಡ 5 ಕಡಿಮೆಯಾಗಿದೆ. ದೇಶದಲ್ಲಿ ಕರೊನಾ ಸೋಂಕಿತರ ಒಟ್ಟು ಸಂಖ್ಯೆ 84.11 ಲಕ್ಷಕ್ಕೆ ಏರಿದೆ. 1,24,985 ಜನರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5.2 ಲಕ್ಷವಾಗಿದೆ. ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 77.66 ಲಕ್ಷಕ್ಕೆ ಏರಿದೆ. ಗುರುವಾರದಿಂದ 54,157 ಜನರು ಗುಣಮುಖರಾಗಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಸೋಂಕಿತರಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 5 =
Remember me
