ನವದೆಹಲಿ:ಭಾರತದಲ್ಲಿ ಕರೊನಾ ಲಸಿಕೆಯ ಸಾಮೂಹಿಕ ವ್ಯಾಕ್ಸಿನೇಷನ್ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆ ಇದ್ದು, 50ಕ್ಕೂ ಹೆಚ್ಚು ವರ್ಷ ವಯಸ್ಸಾದ ಹಾಗೂ ತೀವ್ರ ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಿರುವ ರಾಜ್ಯಗಳಿಗೆ ಅಧಿಕ ಪ್ರಮಾಣದ ಡೋಸ್​ಗಳು ದೊರೆಯುವ ನಿರೀಕ್ಷೆ ಇದೆ. ಬಿಹಾರ, ಮಧ್ಯಪ್ರದೇಶ ಹಾಗೂ ರಾಜಸ್ಥಾನಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿದ್ದರೂ ತಮಿಳುನಾಡು ಹೆಚ್ಚು ಡೋಸ್​ಗಳನ್ನು ಪಡೆಯಲಿದೆ. ಏಕೆಂದರೆ ಬಿಹಾರದಲ್ಲಿ 12.30 ಕೋಟಿ ಜನಸಂಖ್ಯೆ ಇದ್ದು, ಅದರಲ್ಲಿ 1.80 ಕೋಟಿ ಜನರು ಮಾತ್ರ 50ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಆದರೆ, ಬಿಹಾರಕ್ಕಿಂತ ಶೇಕಡ 60 ಕಡಿಮೆ ಜನಸಂಖ್ಯೆ ಹೊಂದಿರುವ ತಮಿಳುನಾಡಿನಲ್ಲಿ 2 ಕೋಟಿ ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ. ಜತೆಗೆ ಬಿಹಾರದಲ್ಲಿ ಇತರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆ ಕಡಿಮೆ ಇದೆ. ಕೇರಳದಲ್ಲಿ 50 ವರ್ಷ ಮೇಲ್ಪಟ್ಟ ಪ್ರತಿ ಮೂವರಲ್ಲಿ ಒಬ್ಬರು ಮಧುಮೇಹ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ದೇಶದಲ್ಲಿನ ಒಟ್ಟು ಜನಸಂಖ್ಯೆಯ ಶೇಕಡ 19.5ರಷ್ಟಿರುವ 50 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಲಾಗುತ್ತದೆ. ಅಂದರೆ 26.50 ಕೋಟಿ ಮಂದಿ ಲಸಿಕೆ ಪಡೆಯಲಿದ್ದಾರೆ. ಇವರ ಜತೆಗೆ ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಪೌರ ಕಾರ್ವಿುಕರು ಸೇರಿದಂತೆ 1 ಕೋಟಿ ಜನರು ಮೊದಲು ಲಸಿಕೆ ಪಡೆಯುವವರ ಪಟ್ಟಿಯಲ್ಲಿದ್ದಾರೆ. ಅಲ್ಲದೇ 50 ವರ್ಷಕ್ಕಿಂತ ಒಳಗಿನ ಇತರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಸುಮಾರು 4 ಕೋಟಿ ಮಂದಿಗೂ ಲಸಿಕೆ ನೀಡಲಾಗುತ್ತದೆ. ಈ ಮೂಲಕ ಮೊದಲ ಆದ್ಯತೆಯ ಒಟ್ಟು 30 ಕೋಟಿ ಜನರಿಗೆ ಲಸಿಕೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಗೂಗಲ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ನೀಡಿದ್ದ ವರ್ಕ್ ಫ್ರಮ್ ಹೋಮ್ ಸೌಲಭ್ಯವನ್ನು ಮುಂದಿನ ವರ್ಷ ಸೆಪ್ಟೆಂಬರ್​ವರೆಗೆ ವಿಸ್ತರಿಸಿದೆ. ಪರಿಸ್ಥಿತಿ ಸುಧಾರಿಸುತ್ತಲೇ ‘ಅನುಕೂಲಕರ ಕರ್ತವ್ಯದ ವಾರ’ ಅನ್ನು ಜಾರಿಗೆ ತರಲು ಚಿಂತಿಸುತ್ತಿದ್ದೇವೆ. ಅದರ ಅನ್ವಯ ಮನೆಯಿಂದಲೇ ಕೆಲಸ ನಿರ್ವಹಿಸುವ ಉದ್ಯೋಗಿಗಳು ವಾರದಲ್ಲಿ ಕನಿಷ್ಠ ಮೂರು ದಿನ ಕಚೇರಿಗೆ ಬಂದು ಕೆಲಸ ಮಾಡಬೇಕಾಗುತ್ತದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮನೆಯಿಂದ ಕೆಲಸ ನಿರ್ವಹಿಸಲು, ಕಲಿಕೆ, ಮನರಂಜನೆ ಹಾಗೂ ಇತರ ವಿಷಯಗಳಿಗಾಗಿ ಜನರು ಸ್ಮಾರ್ಟ್​ಫೋನ್ ಬಳಸುವ ಅವಧಿ ಏರಿಕೆಯಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಭಾರತೀಯರಲ್ಲಿ ಸ್ಮಾರ್ಟ್​ಫೋನ್ ಬಳಕೆ ದಿನಕ್ಕೆ ಶೇ.25ರಷ್ಟು ಏರಿಕೆ ಕಂಡಿದ್ದು, ದಿನವೊಂದರಲ್ಲಿ ಸುಮಾರು 7 ತಾಸು ಪೋನ್​ನಲ್ಲಿ ತಲ್ಲೀನರಾಗಿರುತ್ತಾರೆ. 2019 ಮಾರ್ಚ್​ನಲ್ಲಿದ್ದ 4.9 ತಾಸಿನಿಂದ 2020 ಮಾರ್ಚ್ ವೇಳೆಗೆ ಸ್ಮಾರ್ಟ್ ಫೋನ್ ಬಳಕೆ ಅವಧಿ ಶೇ.11 ಅಂದರೆ 5.5 ತಾಸಿಗೆ ಏರಿಕೆಯಾಗಿತ್ತು. ಲಾಕ್​ಡೌನ್ ಬಳಿಕ ಇದು ಶೇ.25 ಏರಿಕೆ ಕಂಡು 7 ತಾಸಿಗೆ ಏರಿದೆ ಎಂದು ತಿಳಿದುಬಂದಿದೆ.
ಲಸಿಕೆ ಸಂಗ್ರಹಿಸಲು ಅಗತ್ಯವಾದ ಕೋಲ್ಡ್ ಸ್ಟೋರೇಜ್ ಬಾಕ್ಸ್ ಸೇರಿ ಹಲವು ಸಾಧನಗಳನ್ನು ರಾಜ್ಯಗಳಿಗೆ ಕಳುಹಿಸುವ ಪ್ರಕ್ರಿಯೆ ಪ್ರಾರಂಭಿಸಲಿದ್ದೇವೆ. ಸದ್ಯ ವ್ಯಾಕ್ಸಿನೇಷನ್ ಕೇಂದ್ರವೊಂದರಲ್ಲಿ ದಿನಕ್ಕೆ 100 ಜನರಿಗೆ ಮಾತ್ರ ಲಸಿಕೆ ನೀಡಲಾಗುವುದು. ಅಂತಿಮವಾಗಿ, ಎಲ್ಲರಿಗೂ ಲಸಿಕೆ ಸಿಗುತ್ತದೆ.
|ಅಶ್ವಿನಿ ಕುಮಾರ್ ಚೌಬೆಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ
ಇನ್​ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆಂಡ್ ಎವ್ಯಾಲುವೇಷನ್ ನೀಡಿರುವ ಮುನ್ಸೂಚನೆ ಪ್ರಕಾರ ಮುಂದಿನ 6 ತಿಂಗಳಲ್ಲಿ ಕರೊನಾಗೆ ಸುಮಾರು 2 ಲಕ್ಷ ಮಂದಿ ಸಾವನ್ನಪು್ಪವ ಸಾಧ್ಯತೆ ಇದೆ. ಹೀಗಾಗಿ ಕಡ್ಡಾಯವಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಆ ಸಾವುಗಳನ್ನು ಕಡಿಮೆ ಮಾಡಬಹುದು.|ಬಿಲ್ ಗೇಟ್ಸ್ಮೈಕ್ರೋಸಾಫ್ಟ್ ಸಹಸಂಸ್ಥಾಪಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
