ನವದೆಹಲಿ:ಮೇ 1ರಿಂದ 18 ವರ್ಷರಿಂದ 44 ವರ್ಷ ವಯಸ್ಸಿನವರಿಗೆ ಕರೊನಾ ಲಸಿಕೆ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಅದರ ನೋಂದಣಿ ಪ್ರಕ್ರಿಯೆಯನ್ನು ಇಂದಿನಿಂದ ಆರಂಭಿಸಲಾಗಿದೆ. ಮೊದಲನೇ ದಿನವೇ ಹೆಚ್ಚಿನ ಪ್ರಮಾಣದಲ್ಲಿ ನೋಂದಣಿಯಾಗಿದ್ದು, ಸರ್ವರ್​ ಕೂಡ ಡೌನ್​ ಆದ ಘಟನೆ ನಡೆದಿದೆ.
ಬುಧವಾರ ಸಂಜೆ 4 ಗಂಟೆಯಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಪ್ರತಿ ನಿಮಿಷಕ್ಕೆ 27 ಲಕ್ಷ ಜನರು ಲಸಿಕೆ ಪಡೆಯುವುದಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಭಾರೀ ಪ್ರಮಾಣದಲ್ಲಿ ನೋಂದಣಿ ಆಗಿದ್ದರಿಂದಾಗಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಕೋವಿನ್​ ಆ್ಯಪ್​ ಮತ್ತು ಆರೋಗ್ಯ ಸೇತು ಆ್ಯಪ್​ ಸರ್ವರ್​ ಡೌನ್ ಆಗಿದ್ದಾಗಿ ಅನೇಕರು ದೂರಿದ್ದಾರೆ. ಅನೇಕರಿಗೆ ಒಟಿಪಿ ಬಂದಿಲ್ಲ ಎನ್ನುವ ದೂರೂ ಕೇಳಿಬಂದಿದೆ. ಕೆಲ ಸಮಯದ ಬಳಿಕೆ ಸರ್ವರ್​ ಸರಿಯಾಗಿದ್ದಾಗಿ ತಿಳಿಸಲಾಗಿದೆ.
ಸರ್ವರ್​ ಸರಿಯಾಗಿರುವ ಬಗ್ಗೆ ಆರೋಗ್ಯ ಸೇತು ಅಧಿಕೃತ ಟ್ವಿಟ್ಟರ್​ ಹ್ಯಾಂಡಲ್​ನಲ್ಲೂ ಟ್ವೀಟ್ ಮಾಡಿ ಮಾಹಿತಿ ನೀಡಲಾಗಿದೆ. (ಏಜೆನ್ಸೀಸ್​)
ಊಟ ಸಿಗದೆ ಸಾವನ್ನಪ್ಪಿದ ವೃದ್ಧ! ಊರಿಗೆ ಹೋಗಲು ಕೆಲ ಗಂಟೆಗಳಿರುವಾಗಲೇ ಕೊನೆಯುಸಿರು

ರಾಜ್ಯದಲ್ಲಿ ಕರೊನಾ ಮಹಾಸ್ಫೋಟ! ಒಂದೇ ದಿನ 39 ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × 5 =
Remember me
