ನವದೆಹಲಿ :ಏಪ್ರಿಲ್ 11 ರಿಂದ ಸುಮಾರು 100 ಅರ್ಹ ಮತ್ತು ಸಿದ್ಧ ಫಲಾನುಭವಿಗಳನ್ನು ಹೊಂದಿರುವ ಕೆಲಸದ ಸ್ಥಳಗಳಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಪಡೆಯುವ ಅವಕಾಶವನ್ನು ಕಲ್ಪಿಸಬಹುದಾಗಿದೆ. ಕರೊನಾ ಸೋಂಕಿನ ಸ್ಫೋಟಕ ಏರಿಕೆಯ ನಡುವೆ ಲಸಿಕಾ ಅಭಿಯಾನವನ್ನು ಹೆಚ್ಚು ಪರಿಣಾಮಕಾರಿಗೊಳಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಮರ್ಪಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಪತ್ರ ಬರೆದಿದ್ದಾರೆ. ಲಸಿಕೆಯನ್ನು 18 ವರ್ಷ ಮೇಲ್ಪಟ್ಟು ಎಲ್ಲರಿಗೂ ಒದಗಿಸಬೇಕು ಎಂಬ ಬೇಡಿಕೆಯು ಕೇಳಿಬರುತ್ತಿದ್ದರೂ, 45 ವರ್ಷ ಮೇಲ್ಪಟ್ಟ ಜನರಿಗೇ ಲಸಿಕಾ ಅಭಿಯಾನವನ್ನು ಸೀಮಿತವಾಗಿ ಮುಂದುವರಿಸುವ ನಿಲುವನ್ನು ಕೇಂದ್ರ ಸರ್ಕಾರ ತಳೆದಿದೆ.
ಇದನ್ನೂ ಓದಿ:ಆರ್​​ಸಿಬಿಯ ಮತ್ತೊಬ್ಬ ಆಟಗಾರ ಡೇನಿಯಲ್ ಸ್ಯಾಮ್ಸ್​​ಗೆ ಕರೊನಾ
“ಲಸಿಕೆಯ ಸೌಲಭ್ಯವನ್ನು ಹೆಚ್ಚಿಸುವ ಸಲುವಾಗಿ, ವ್ಯಾಕ್ಸಿನೇಷನ್ ಸೆಷನ್​ಗಳನ್ನು ಸಾರ್ವಜನಿಕ ಮತ್ತು ಖಾಸಗಿ ಕೆಲಸದ ಸ್ಥಳಗಳಲ್ಲಿ ಆಯೋಜಿಸಬಹುದು. ಸುಮಾರು 100 ಅರ್ಹ ಮತ್ತು ಸಿದ್ಧ ಫಲಾನುಭವಿಗಳನ್ನು ಹೊಂದಿರುವ ಸ್ಥಳಗಳನ್ನು ಹತ್ತಿರದ ವ್ಯಾಕ್ಸಿನೇಷನ್ ಕೇಂದ್ರದೊಂದಿಗೆ ಟ್ಯಾಗ್ ಮಾಡುವ ಮೂಲಕ ಇದಕ್ಕೆ ಅನುಕೂಲ ಒದಗಿಸಬೇಕು” ಎಂದು ಪತ್ರದಲ್ಲಿ ಹೇಳಲಾಗಿದೆ.(ಏಜೆನ್ಸೀಸ್)
ಕರೊನಾ ನಿಯಮ ಉಲ್ಲಂಘಿಸಿ ಎಎಪಿ ಪ್ರತಿಭಟನೆ ; ‘ಪ್ರಧಾನಿ ಮೋದಿ ಮಾಡಿದ್ದನ್ನೇ ಮಾಡುತ್ತಿದ್ದೇವೆ’ ಎಂದ ನಾಯಕ !

ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ, ಚೇನಬ್ ಬ್ರಿಡ್ಜ್​​ನ ಆರ್ಚ್​ ರೆಡಿ

ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಆರೈಕೆಗಾಗಿ ಹೀಗೆ ಮಾಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 14 =
Remember me
