ನವದೆಹಲಿ :ಹದಿನೆಂಟು ವರ್ಷದ ಒಳಗಿನ ಮಕ್ಕಳ ಮೇಲೆ ನಡೆಯುತ್ತಿರುವ ಕರೊನಾ ಲಸಿಕೆಯ ಕ್ಲಿನಿಕಲ್​ ಟ್ರಯಲ್​ಗಳು ಇನ್ನೇನು ಮುಗಿಯುವ ಹಂತದಲ್ಲಿದೆ. ಮಕ್ಕಳಿಗೆ ಲಸಿಕೆ ನೀಡುವ ಬಗ್ಗೆ ಸರ್ಕಾರವು ನೀತಿ ರಚಿಸಲಿದ್ದು, ತಜ್ಞರು ಅನುಮತಿ ನೀಡಿದಾಗ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ದೆಹಲಿ ಹೈಕೋರ್ಟ್​ನಲ್ಲಿ ಅಪ್ರಾಪ್ತ ವಯಸ್ಕನ ಪರವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯ ವೇಳೆ, ಇಂದು(ಜುಲೈ 16) ಸರ್ಕಾರದ ಪರ ಈ ಹೇಳಿಕೆ ನೀಡಲಾಯಿತು ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ಅಪಾಯವಿರುವ ಭಯದ ಹಿನ್ನೆಲೆಯಲ್ಲಿ 12 ರಿಂದ 17 ವರ್ಷದ ವಯೋಮಾನದವರಿಗೆ ತಕ್ಷಣ ಕರೊನಾ ಲಸಿಕಾಕರಣಕ್ಕೆ ಆದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ:ಕುಂಟುತ್ತಿದೆ ಲಸಿಕಾ ಅಭಿಯಾನ ; ವಿದ್ಯಾರ್ಥಿಗಳಿಗೆ ಆದ್ಯತೆ ಮೇಲೆ ಸಿಗದ ವ್ಯಾಕ್ಸಿನ್
ಮುಖ್ಯ ನ್ಯಾಯಮೂರ್ತಿ ಡಿ.ಎನ್​.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ವಿಭಾಗೀಯ ಪೀಠವು, “ಟ್ರಯಲ್ಸ್​ ನಡೆಯಲಿ ಬಿಡಿ. ಏಕೆಂದರೆ ಟ್ರಯಲ್​ಗಳಿಲ್ಲದೆ ಮಕ್ಕಳಿಗೆ ಲಸಿಕೆಗಳನ್ನು ನೀಡುವುದು ದುರಂತವಾದೀತು” ಎಂದು ಅಭಿಪ್ರಾಯಪಟ್ಟಿತು. “ಟ್ರಯಲ್ಸ್​ ಮುಗಿದ ಕೂಡಲೇ, ತ್ವರಿತವಾಗಿ ಮಕ್ಕಳಿಗೆ (ಲಸಿಕೆ) ನೀಡಿ. ಇಡೀ ದೇಶ ಕಾಯುತ್ತಿದೆ” ಎಂದು ಸರ್ಕಾರಕ್ಕೆ ಹೇಳಿತು.(ಏಜೆನ್ಸೀಸ್)
ಜೆಇಇ 4ನೇ ಹಂತದ ಪರೀಕ್ಷೆ ಮುಂದೂಡಿಕೆ; ಜುಲೈ 20 ರವರೆಗೆ ನೋಂದಣಿ ಅವಕಾಶ

ಚಿತ್ರ ನಿರ್ಮಾಪಕನ​ ವಿರುದ್ಧ ರೇಪ್ ಕೇಸ್; ಕೆಲಸ ನೀಡುವುದಾಗಿ ಹೇಳಿ ವಂಚಿಸಿದ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 1 =
Remember me
