ನವದೆಹಲಿ :ಕರೊನಾ ಲಸಿಕೆ ಡೋಸ್​ಗಳು ವ್ಯರ್ಥವಾಗುವುದನ್ನು ತಡೆಯಲು ಮತ್ತು ತಂತ್ರಜ್ನಾನ ಬಳಕೆಯ ಸೌಲಭ್ಯವಿಲ್ಲದವರಿಗೆ ಅನುಕೂಲವಾಗಲು ಸರ್ಕಾರಿ ಲಸಿಕಾ ಕೇಂದ್ರಗಳಿಗೆ ವಾಕ್​-ಇನ್​ ಅವಕಾಶ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಈ ಮೂಲಕ ಕೋವಿನ್​ ಪೋರ್ಟಲ್​ನಲ್ಲಿ ನೋಂದಣಿಯಾಗಿರುವವರಿಗೆ ಮಾತ್ರ ಲಸಿಕೆ ನೀಡಬೇಕೆಂಬ ಆದೇಶವನ್ನು ಸಡಿಲಗೊಳಿಸಿದೆ.
ಇಂಟರ್​ನೆಟ್​ ಅಥವಾ ಸ್ಮಾರ್ಟ್​ ಫೋನ್​ಗಳ ಸೌಲಭ್ಯವಿಲ್ಲದ 18-44 ವರ್ಷ ವಯೋಮಾನದ ಜನರು ಸರ್ಕಾರಿ ಕರೊನಾ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಕೋವಿನ್​ ಪೋರ್ಟಲ್​​ನಲ್ಲಿ ನೋಂದಣಿ ಮಾಡಿಸಿ, ಲಸಿಕೆಗೆ ಅಪಾಯಿಂಟ್​ಮೆಂಟ್​ ಪಡೆಯಬಹುದು. ಜೊತೆಗೆ, ಲಸಿಕೆಯ ವೇಸ್ಟೇಜ್​ಅನ್ನು ಕಡಿಮೆ ಮಾಡಲು ಸ್ಥಳದಲ್ಲೇ ನೋಂದಣಿ ಮಾಡಿಸಿ ತಕ್ಷಣ ಲಸಿಕೆ ಪಡೆಯಲೂ ಈ ವಯೋಮಾನದ ಕೆಲವರಿಗೆ ಸೀಮಿತ ಅವಕಾಶ ನೀಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದನ್ನೂ ಓದಿ:ರಾಜ್ಯದಲ್ಲಿ 300ಕ್ಕೂ ಹೆಚ್ಚು ಬ್ಲ್ಯಾಕ್ ಫಂಗಸ್ ಪ್ರಕರಣ; ಕರೊನಾ ಗುಣಮುಖರಿಗೆ ಇಎನ್​ಟಿ ತಪಾಸಣೆಗೆ ಸೂಚನೆ
ಇಂದು ಮಧ್ಯಾಹ್ನ ಜಾರಿಗೊಳಿಸಿರುವ ಸೂಚನೆಗಳಲ್ಲಿ, ಲಸಿಕಾ ಕೇಂದ್ರಗಳಲ್ಲಿ ಕೋವಿನ್​ ನೋಂದಣಿಗೆ ಅವಕಾಶ ಮಾಡಿಕೊಟ್ಟಿರುವ ಕೇಂದ್ರ ಸರ್ಕಾರ, ಈ ಬಗ್ಗೆ ಅಂತಿಮ ನಿರ್ಧಾರವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಯಾ ಸರ್ಕಾರಗಳ ಮೇಲೇ ಬಿಟ್ಟಿದೆ. ರಾಜ್ಯ ಸರ್ಕಾರಗಳು ಈ ರೀತಿ ಅವಕಾಶವನ್ನು ಕಲ್ಪಿಸಲು ನಿರ್ಧರಿಸಿದಲ್ಲಿ, ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಮಾತ್ರ ವಾಕ್​ಇನ್​ಗೆ ಅವಕಾಶ ನೀಡಬಹುದು, ಖಾಸಗಿ ಆಸ್ಪತ್ರೆಗಳಲ್ಲಿ ಅಲ್ಲ ಎಂದೂ ಕೇಂದ್ರ ಹೇಳಿದೆ.
ಇದೇ ತೆರನ ವಾಕ್​ಇನ್ ನೋಂದಣಿ ಅವಕಾಶವು ಈಗಾಗಲೇ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಭ್ಯವಿದೆ. ಹೆಚ್ಚು ಜನಸಂದಣಿ ಉಂಟಾಗುವುದನ್ನು ತಪ್ಪಿಸಲು ಈ ಅವಕಾಶವನ್ನು 18-44 ವರ್ಷದವರಿಗೆ ಈವರೆಗೆ ನೀಡಿರಲಿಲ್ಲ. ಆದರೆ, ನೋಂದಣಿ ಮಾಡಿರುವವರು ಲಸಿಕೆ ಪಡೆಯಲು ಬಾರದ ಪಕ್ಷದಲ್ಲಿ ಲಸಿಕೆಯ ಡೋಸ್​ಗಳು ವ್ಯರ್ಥವಾಗುವುದನ್ನು ತಪ್ಪಿಸಲು, ಇನ್ನು ಮುಂದೆ ಎಲ್ಲಾ ವಯಸ್ಕರಿಗೂ ಅಲ್ಪ ಪ್ರಮಾಣದಲ್ಲಿ ವಾಕ್​ಇನ್​ಗಳಿಗೆ ಅವಕಾಶ ನೀಡಬೇಕೆಂದು ಸರ್ಕಾರ ಹೇಳಿದೆ.(ಏಜೆನ್ಸೀಸ್)
ಮಾಂಸ ಕಡಿಯುವ ಕತ್ತಿಯಿಂದ ಅಣ್ಣ ಅತ್ತಿಗೆಯನ್ನು ಕೊಚ್ಚಿದ; ಪುಟ್ಟ ಕಂದಮ್ಮನನ್ನೂ ಬಿಡಲಿಲ್ಲ…

ಕರೊನಾ ಕಾಲದಲ್ಲಿ ಮನೆಗಳಲ್ಲೇ ಗಟ್ಟಿಮೇಳ ! ತುಮಕೂರು ಜಿಲ್ಲೆಯಲ್ಲಿ 2 ದಿನಗಳಲ್ಲಿ 500 ಮದುವೆ !

VIDEO | ಕರೊನಾದಿಂದ ಗುಣಮುಖರಾದ ವೃದ್ಧೆಯ ಲವಲವಿಕೆ ನೋಡಿ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − three =
Remember me
