ನವದೆಹಲಿ:ದೇಶದಲ್ಲಿ ಕರೊನಾ ಸೋಂಕು ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿದೆ. ಇನ್ನೊಂದತ್ತ ಜನತೆಗೆ ಲಸಿಕೆ ನೀಡುವಲ್ಲಿ ವೈದ್ಯಕೀಯ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಈವರೆಗೆ ದೇಶಾದ್ಯಂತ ಒಟ್ಟು 44 ಲಕ್ಷ ಡೋಸೇಜ್​ ಕರೊನಾ ಲಸಿಕೆ ವ್ಯರ್ಥವಾಗಿದೆ ಎನ್ನುವುದು ಇದೀಗ ಬೆಳಕಿಗೆ ಬಂದಿದೆ.
ಲಸಿಕೆಯ ವಾಯಲ್​ ಒಂದರಲ್ಲಿ 10ರಿಂದ 12 ಡೋಸೇಜ್​ ಲಸಿಕೆ ಇರುತ್ತದೆ. ಅನೇಕರು ಲಸಿಕೆ ಪಡೆಯುವುದಕ್ಕೆ ನೋಂದಣಿ ಮಾಡಿಕೊಂಡಿರುತ್ತಾರಾದರೂ ಲಸಿಕೆ ಪಡೆಯಲು ಬರುವುದೇ ಇಲ್ಲ. ವಾಯಲ್​ ತೆರೆದ ನಂತರ ಅದರ ಲಸಿಕೆಯನ್ನು ನಿಗದಿತ ಸಮಯದೊಳಗೆ ಕೊಟ್ಟುಬಿಡಬೇಕು. ಇಲ್ಲವಾದಲ್ಲಿ ಅದು ವ್ಯರ್ಥವಾಗುತ್ತದೆ. ಅದೇ ಕಾರಣದಿಂದಾಗಿ ಲಸಿಕೆ ವೇಸ್ಟ್​ ಆಗುತ್ತಿರುವುದಾಗಿ ತಿಳಿಸಲಾಗಿದೆ.
ಲಸಿಕೆ ವೇಸ್ಟ್​ ಮಾಡಿರುವ ರಾಜ್ಯಗಳಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದೆ. ಅಲ್ಲಿ ಸುಮಾರು ಶೇ. 12.10 ಲಸಿಕೆ ವ್ಯರ್ಥವಾಗಿದೆ. ಉಳಿದಂತೆ ಹರಿಯಾಣದಲ್ಲಿ ಶೇ. 9.74, ಪಂಜಾಬ್​ನಲ್ಲಿ ಶೇ. 8.12, ಮಣಿಪುರದಲ್ಲಿ ಶೇ. 7.8 ಹಾಗೂ ತೆಲಂಗಾಣದಲ್ಲಿ ಶೇ. 7.55 ಲಸಿಕೆ ವ್ಯರ್ಥವಾಗಿದೆ ಎನ್ನುವುದು ವರದಿಯಿಂದ ತಿಳಿದುಬಂದಿದೆ. (ಏಜೆನ್ಸೀಸ್​)
ರಿಲೀಸ್ ಆದ ಒಂದೂವರೆ ತಿಂಗಳಲ್ಲೇ ಅಮೇಜಾನ್​ ಪ್ರೈಂಗೆ ರಾಬರ್ಟ್​ ಎಂಟ್ರಿ!

ಲಾಕ್​ಡೌನ್​ ಆದೇಶಕ್ಕೆ ಸುಪ್ರೀಂ ಕೋರ್ಟ್​ ತಡೆ! ರಾಜ್ಯ ಸರ್ಕಾರದಿಂದ ವರದಿ ಕೇಳಿದ ನ್ಯಾಯಾಲಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − twelve =
Remember me
