ಪುಣೆ: ‘ಕರೊನಾ ಲಸಿಕೆ ಯಾವಾಗ ಸಿಗುತ್ತದೆ?’, ಪ್ರಸ್ತುತ ಜಗತ್ತಿನ ಬಹುತೇಕ ಎಲ್ಲರ ಪ್ರಶ್ನೆಯೂ ಇದೇ. ಕಳೆದ ಕೆಲವು ತಿಂಗಳುಗಳಿಂದ ಬಹಳಷ್ಟು ಮಂದಿ ಕರೊನಾ ಲಸಿಕೆಯ ಶುಭಸುದ್ದಿಯ ನಿರೀಕ್ಷೆಯಲ್ಲೇ ಇದ್ದಾರೆ. ಈ ನಡುವೆಯೇ ಆ ಕುರಿತ ಭರವಸೆಯೊಂದು ಹೊರಬಿದ್ದಿದೆ.
ಪುಣೆಯಲ್ಲಿರುವ ಸೀರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ (ಎಸ್​ಐಐ) ಕರೊನಾ ಲಸಿಕೆಯನ್ನು ಉತ್ಪಾದಿಸುವ ಪ್ರಕ್ರಿಯೆಯಲ್ಲಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್​ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಿಸಿಜಿ ಲಸಿಕೆ ಪಡೆಯಲು ಎಸ್​​ಐಐಗೆ ಭೇಟಿ ಕೊಟ್ಟ ಬಳಿಕ, 2021ರ ಜನವರಿಯಲ್ಲಿ ಕರೊನಾ ಲಸಿಕೆ ಲಭ್ಯವಾಗಲಿದೆ ಎಂಬ ವಿಷಯ ಹೊರಗೆಡಹಿದ್ದಾರೆ.
ಆಗಸ್ಟ್​ ಬಳಿಕ ಪವಾರ್ ಇಲ್ಲಿಗೆ ಎರಡನೇ ಸಲ ಭೇಟಿ ಕೊಟ್ಟಿದ್ದು, ಕರೊನಾ ಲಸಿಕೆ ತಯಾರಿ ಕುರಿತು ಕುತೂಹಲ ಮೂಡಿದೆ. ಎಸ್​ಐಐ ಚೇರ್ಮನ್​ ಡಾ. ಸಿರಸ್​ ಎಸ್​. ಪೂನಾವಾಲಾ ಮತ್ತು ಅವರ ಪುತ್ರ, ಸಂಸ್ಥೆಯ ಸಿಇಒ ಅಡರ್​ ಪೂನಾವಾಲಾ ಅವರು ಪವಾರ್ ಜತೆ ಉತ್ತಮ ಸಂಬಂಧ ಹೊಂದಿರುವುದರಿಂದ ಪವಾರ್ ಅವರ ಹೇಳಿಕೆ ಭರವಸೆ ಮೂಡಿಸಿದೆ. (ಏಜೆನ್ಸೀಸ್​)
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:three × 5 =
Remember me
