ನವದೆಹಲಿ:ಕರೊನಾ ತೀವ್ರತೆಯಿಂದ ಪ್ರಮುಖ ಮೆಟ್ರೋ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ ಬಳಲುತ್ತಿವೆ. ದೇಶದ ಒಟ್ಟು ಕರೊನಾ ಪ್ರಕರಣಗಳಲ್ಲಿ ಸುಮಾರು ಅರ್ಧದಷ್ಟು ಈ ಮಹಾನಗರಗಳಲ್ಲೇ ಪತ್ತೆಯಾಗಿವೆ. ಅಹಮದಾಬಾದ್, ಇಂದೋರ್ ಮತ್ತು ಪುಣೆ ಸೇರಿ 7 ನಗರಗಳಲ್ಲಿನ ಒಟ್ಟು ಪ್ರಕರಣಗಳು ಶೇ. 60ಕ್ಕಿಂತ ಹೆಚ್ಚಾಗುತ್ತವೆ. ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತದಲ್ಲಿ ಈವರೆಗೆ 1.14 ಲಕ್ಷ ಪ್ರಕರಣಗಳು ವರದಿಯಾಗಿದ್ದು, ಇವು ದೇಶದ ಒಟ್ಟು ಪ್ರಕರಣಗಳ ಶೇಕಡಾ 48ರಷ್ಟಿವೆ. ಜತೆಗೆ ಈ ನಾಲ್ಕು ನಗರಳಲ್ಲಿ ಸುಮಾರು 3,150 ಮಂದಿ ಸಾವನ್ನಪ್ಪಿದ್ದು, ದೇಶದ ಒಟ್ಟು ಮೃತರ ಪ್ರಮಾಣಕ್ಕೆ ಹೋಲಿಸಿದರೆ ಶೇಕಡಾ 46ಕ್ಕಿಂತ ಅಧಿಕವಾಗಿದೆ. 7 ನಗರಗಳನ್ನೂ ಗಣನೆಗೆ ತೆಗೆದಕೊಂಡರೆ ಸಾವಿನ ಸಂಖ್ಯೆ 5,600 ಆಗಲಿದ್ದು, ಇದು ಶೇಕಡಾ 59ಕ್ಕಿಂತ ಹೆಚ್ಚಿದೆ.ಇದನ್ನೂ ಓದಿ:VIDEO: ದೊಡ್ಡ ಗಂಡಾಂತರದಿಂದ ಪಾರಾದ ಸಚಿವ ನಾರಾಯಣಗೌಡರು…
ಮಹಾರಾಷ್ಟ್ರದಲ್ಲಿ ಶನಿವಾರ ಒಂದೇ ದಿನ 120 ಮಂದಿ ಸಾವನ್ನಪ್ಪಿದ್ದು, ಮುಂಬೈ ನಗರವೊಂದರಲ್ಲೇ 58 ಮಂದಿ ಮೃತಪಟ್ಟಿದ್ದಾರೆ. ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈವರಗೆ 62 ಸಾವಿರ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ ಮುಂಬೈ ನಗರವೊಂದರಲ್ಲೇ 47 ಸಾವಿರ ಪ್ರಕರಣಗಳಿವೆ. ಅಹಮದಾಬಾದ್​ನಲ್ಲಿ ಈವರೆಗೆ 13 ಸಾವಿರ ಸೋಂಕಿತರು ಬೆಳಕಿಗೆ ಬಂದಿದ್ದು, ಚೆನ್ನೈನಲ್ಲಿ 20 ಸಾವಿರ ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲಿ 27 ಸಾವಿರ ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ದೆಹಲಿಯಲ್ಲಿ 1 ಲಕ್ಷ ಸೋಂಕು!:ಜೂನ್ ಅಂತ್ಯದ ವೇಳೆಗೆ ದೆಹಲಿಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ 1 ಲಕ್ಷ ಮುಟ್ಟುವ ಸಾಧ್ಯತೆ ಇದೆ ಎಂದು ದೆಹಲಿ ಸರ್ಕಾರ ರಚಿಸಿರುವ ಐವರು ತಜ್ಞರ ಸಮಿತಿ ವರದಿಯಲ್ಲಿ ತಿಳಿಸಿದೆ. ‘ಅಹಮದಾಬಾದ್, ಮುಂಬೈ ಹಾಗೂ ಚೆನ್ನೈ ಸೇರಿ ದೇಶದ ವಿವಿಧ ನಗರಗಳಿಗೆ ದೆಹಲಿ ಪ್ರಕರಣಗಳನ್ನು ತುಲನೆ ಮಾಡಿ ಅಧ್ಯಯನಿಸಿದ್ದೇವೆ. ಈ ಪ್ರಕಾರ ಜೂನ್ ಅಂತ್ಯದ ವೇಳೆಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷ ಮುಟ್ಟಬಹುದು. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚುವರಿ 15 ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡಲು ಸಲಹೆ ನೀಡಿದ್ದೇವೆ’ ಎಂದು ಕಮೀಟಿಯ ಅಧ್ಯಕ್ಷ ಡಾ. ಮಹೇಶ್ ವರ್ವ ಹೇಳಿದ್ದಾರೆ. ಜತೆಗೆ ಕರೊನಾ ರೋಗಿಗಳಿಗೆ ಹೋಟೆಲ್​ಗಳಲ್ಲೂ ಚಿಕಿತ್ಸೆ ನೀಡಬಹುದು. ಆದರೆ ಅದಕ್ಕೆ ತಕ್ಕಂತೆ ಆಕ್ಸಿಜನ್ ಸೇರಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಅಲ್ಲಿರಿಸಬೇಕಾಗುತ್ತದೆ ಎಂದೂ ತಿಳಿಸಿದ್ದಾರೆ.ಇದನ್ನೂ ಓದಿ:ತಮಗೆ ತಾವೇ ದಂಡ ಹಾಕಿಸಿಕೊಂಡು ಮಾದರಿಯಾದ ಅಧಿಕಾರಿ!
ಸೋಂಕಿತರಲ್ಲಿ ಶೇ. 4 ಜನರಿಗಷ್ಟೆ ವಿಮೆ:ದೇಶದಲ್ಲಿ ಕರೊನಾ ಸೋಂಕಿತರ ಪೈಕಿ ಕೇವಲ ಶೇ. 4 ಜನರು ವಿಮೆ ಹೊಂದಿದ್ದಾರೆ ಎಂಬ ಅಂಶ ಬಹಿರಂಗವಾಗಿದೆ. ಇದುವರೆಗೆ 8,500 ಜನರು ಮಾತ್ರ ಆರೋಗ್ಯ ವಿಮೆ ಕ್ಲೇಮ್ ಸಲ್ಲಿಸಿದ್ದು, ಅದರ ಮೊತ್ತ 135 ಕೋಟಿ ರೂಪಾಯಿ ಆಗಿದೆ. ದೇಶದ ಒಟ್ಟು 2.50 ಲಕ್ಷ ಕರೊನಾ ವೈರಸ್ ಸೋಂಕಿತರಲ್ಲಿ 8500 ಜನರು ಮಾತ್ರ ಆರೋಗ್ಯ ವಿಮೆ ಹೊಂದಿದ್ದಾರೆ.
ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದರೂ ಕೂಡ ಭಾರತ ವಿಶ್ವದಲ್ಲೇ ಅತೀ ಕಡಿಮೆ (ಪ್ರತಿ ಲಕ್ಷ ಜನಸಂಖ್ಯೆಗೆ) ಕರೊನಾ ಸೋಂಕು ಮತ್ತು ಸಾವು ಪ್ರಕರಣ ಗಳನ್ನು ಹೊಂದಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿ ಯಶಸ್ವಿಯಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ 0.49 ಜನರು ಕರೊನಾದಿಂದ ಮೃತಪಟ್ಟಿದ್ದು, 17.32 ಮಂದಿ ಮಾತ್ರ ಸೋಂಕಿಗೆ ಒಳಗಾಗಿದ್ದಾರೆ. ಕರೊನಾ ಅಟ್ಟಹಾಸಕ್ಕೆ ನಲುಗಿರುವ ಇತರ ರಾಷ್ಟ್ರಗಳಲ್ಲಿ ಈ ಪ್ರಮಾಣ ಹೆಚ್ಚಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲು್ಯಎಚ್​ಒ) ಮಾಹಿತಿ ಪ್ರಕಾರ, ಜರ್ಮನಿಯಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 219 ಜನರು ಸೋಂಕಿಗೆ ಒಳಗಾಗಿದ್ದು, ಇಟಲಿಯಲ್ಲಿ 387, ಬ್ರಿಟನ್​ನಲ್ಲಿ 419 ಮತ್ತು ಸ್ಪೇನ್​ನಲ್ಲಿ 515 ಜನರಿಗೆ ಸೋಂಕು ದೃಢಪಟ್ಟಿದೆ. ಬ್ರಿಟನ್​ನಲ್ಲಿ ಪ್ರತಿ ಲಕ್ಷ ಜನರಲ್ಲಿ 59 ಸಾವು ವರದಿಯಾಗಿದ್ದು, ಸ್ಪೇನ್​ನಲ್ಲಿ 58, ಇಟಲಿಯಲ್ಲಿ 55 ಮತ್ತು ಜರ್ಮನಿಯಲ್ಲಿ 10ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ.ಇದನ್ನೂ ಓದಿ:ಟಾಪ್​ 5 ತಲುಪಿದ ಭಾರತ: ಕೋವಿಡ್ 19 ಕೇಸ್​ಗಳ ಸಂಖ್ಯೆ ಸ್ಪೇನ್​ಗಿಂತಲೂ ಹೆಚ್ಚಾಯಿತು..
ಭಾರತದಲ್ಲಿ ಕರೊನಾ ವೈರಸ್ ಮಾರಕವಾಗಿಲ್ಲ ಮತ್ತು ಸಮಯ ಕಳೆದಂತೆ ಸೌಮ್ಯ ಸ್ವರೂಪಕ್ಕೆ ತಿರುಗುತ್ತಿದೆ ಎಂದು ಹೈದರಾಬಾದ್ ಮೂಲದ ಸೆಲ್ಯುಲಾರ್ ಮತ್ತು ಮಾಲಿಕ್ಯುಲರ್ ಬಯಾಲಜಿ (ಸಿಸಿಎಂಬಿ) ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಮಯ ಕಳೆದಂತೆ ನಮ್ಮ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತಿರುವುದರಿಂದಾಗಿ ವೈರಸ್ ಮಾರಕವಾಗಿಲ್ಲ ಎಂದು ಸಿಸಿಎಂಬಿ ನಿರ್ದೇಶಕ ರಾಕೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ. ಕರೊನಾ ವೈರಸ್ ತನ್ನ ಮೂಲ ಶಕ್ತಿಗಿಂತ ದುರ್ಬಲವಾಗುತ್ತಿದೆ. ಸೋಂಕಿತರಲ್ಲಿ ಕೇವಲ ಶೇಕಡಾ 10 ಜನರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸ್ಥಿತಿಯಲ್ಲಿದ್ದಾರೆ. ನೂರಾರು ಕಂಪನಿಗಳು ಕರೊನಾ ವಿರುದ್ಧದ ಲಸಿಕೆ ತಯಾರಿಕೆಗೆ ಶ್ರಮಿಸುತ್ತಿದ್ದು, ಮುಂದಿನ ವರ್ಷದ ಆರಂಭದ ವೇಳೆಗೆ ಲಸಿಕೆ ಸಿದ್ಧವಾಗಬಹುದು. ಇದು ಮಾರುಕಟ್ಟೆಗೆ ಬರುವ ಮೊದಲು ಲಕ್ಷಾಂತರ ಪ್ರಯೋಗಗಳು ಬೇಕಾಗುತ್ತವೆ. ಅಂದರೆ ಲಸಿಕೆ ಸಿದ್ಧವಾದ ಕೂಡಲೇ ಅದು ಎಲ್ಲರಿಗೂ ಲಭ್ಯವಾಗುವುದಿಲ್ಲ ಎಂದು ರಾಕೇಶ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.ಇದನ್ನೂ ಓದಿ:ದೆಹಲಿ ಆಸ್ಪತ್ರೆಗಳು ಸ್ಥಳೀಯರಿಗಷ್ಟೇ ಮೀಸಲು; ತಜ್ಞರ ಸಮಿತಿ ಶಿಫಾರಸು; ಅನುಷ್ಠಾನಕ್ಕೆ ಮುಂದಾದ ಸರ್ಕಾರ
ದೇಶದ ಬೃಹತ್ ಮಹಾನಗರಗಳಿಗೆ ಹೋಲಿಕೆ ಮಾಡಿದಲ್ಲಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಿದ್ದು, ಭಾನುವಾರದ ವರೆಗೆ 475 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ 298 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, 161 ಸಕ್ರಿಯ ಪ್ರಕರಣಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿಲಿಕಾನ್ ಸಿಟಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದಂತೆ, ಕರೊನಾ ನಿಯಂತ್ರಣ ಕಾರ್ಯದಲ್ಲೂ ತನ್ನ ಸಾಧನೆಯನ್ನು ಪ್ರದರ್ಶನ ಮಾಡಿದೆ. ಅಧಿಕಾರಿಗಳು ಕೈಗೊಂಡ ಕಟ್ಟುನಿಟ್ಟಿನ ಕ್ರಮ, ಕ್ವಾರಂಟೈನ್, ಕಂಟೇನ್ಮೆಂಟ್ ಅಳವಡಿಕೆ ಹಾಗೂ ಕರೊನಾ ವಾರ್ ರೂಂ ಮತ್ತು ಪ್ರತ್ಯೇಕ ಆಪ್​ಗಳ ಕಾರ್ಯನಿರ್ವಹಣೆಯಿಂದ ಕಡಿವಾಣ ಸಾಧ್ಯವಾಗಿದೆ.

ಪ್ರಿಯಕರನ ಜತೆ ಪತ್ನಿ ಪರಾರಿ; ಬೇಸರದಲ್ಲಿ ಪಾನಮತ್ತ ಪತಿ ಮಾಡಿಕೊಂಡ ಅನಾಹುತ ನೋಡಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 16 =
Remember me
