ಮುಂಬೈ: ಮಾರಕ ಕರೊನಾ ವೈರಸ್​ ಸೋಂಕಿನಿಂದ ತಪ್ಪಿಸಿಕೊಳ್ಳಲು ಮಾಸ್ಕ್​ (ಮುಖವಾಡ) ಧರಿಸುವುದು ಸಾಮಾನ್ಯ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್​ಗಳಿಗೆ ಅಧಿಕ ಬೇಡಿಕೆ ವ್ಯಕ್ತವಾಗಿದೆ. ಅಲ್ಲದೆ ಅದರ ಬೆಲೆ ದುಬಾರಿಯಾಗಿರುವುದರಿಂದ ಕೆಲವರು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ.
ಮನೆಯಲ್ಲೇ ಯುವತಿ ಸರಳವಾಗಿ ಮಾಸ್ಕ್​ ತಯಾರಿಸುವ ವಿಧಾನದ ವಿಡಿಯೋ ಒಂದನ್ನು ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ಅಪ್​ಲೋಡ್​ ಆದ ಕೆಲವೇ ನಿಮಿಷಗಳಲ್ಲಿ ಅಧಿಕ ಮಂದಿಯನ್ನು ತಲುಪಿದೆ.ವಿಡಿಯೋದಲ್ಲಿ ಏನಿದೆ? ಯುವತಿ ಟಿಶ್ಯೂ ಪೇಪರ್​ ಒಂದನ್ನು ತೆಗೆದುಕೊಂಡು ಅದನ್ನು ಮಡಚಿಕೊಳ್ಳುತ್ತಾರೆ. ಬಳಿಕ 2 ರಬ್ಬರ್​ ಬ್ಯಾಂಡ್​ ಅನ್ನು ಟಿಶ್ಯೂ ಪೇಪರ್​ಗೆ ಸಿಕ್ಕಿಸಿ ಸ್ಟ್ಯಾಪ್ಲರ್​ನಿಂದ ಪಿನ್​ ಮಾಡುತ್ತಾರೆ. ಇಲ್ಲಿಗೆ ಮಾಸ್ಕ್​ ಸಿದ್ಧಗೊಳ್ಳುತ್ತದೆ. ಬಳಿಕ ಅದನ್ನು ಧರಿಸುತ್ತಾರೆ.
ಸರಳವಾಗಿ ಮಾಸ್ಕ್​ ತಯಾರಿಸುವ ಮಾಹಿತಿ ನೀಡಿದ ಉದ್ಯಮಿ ಆನಂದ್​ ಮಹೀಂದ್ರಾ ಅವರಿಗೆ ವಿಡಿಯೋ ವೀಕ್ಷಣೆ ಮಾಡಿದವರು ಧನ್ಯವಾದ ಅರ್ಪಿಸಿದ್ದಾರೆ. (ಏಜೆನ್ಸೀಸ್​)
Voila. No more shortage of masks?? And I thought Indians were the masters of jugaad! 😊pic.twitter.com/67mLgSo0Od
— anand mahindra (@anandmahindra)March 11, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − six =
Remember me
