ಅಕ್ಲೆಂಡ್​:ಅಂದಾಜು 100 ದಿನಗಳಿಂದ ಯಾವುದೇ ಕೋವಿಡ್​-19 ಸೋಂಕು ಕಾಣಿಸಿಕೊಂಡಿಲ್ಲ ಎಂದು ಎರಡು ದಿನಗಳ ಹಿಂದಷ್ಟೇ ಬೀಗಿದ್ದ ನ್ಯೂಜಿಲೆಂಡ್​ನಲ್ಲಿ ಮತ್ತೆ ಕರೊನಾ ವೈರಾಣು ಸೋಂಕು ಪತ್ತೆಯಾಗಿದೆ. ಒಂದೇ ಕುಟುಂಬದ ನಾಲ್ವರಿಗೆ ಸೋಂಕು ತಗುಲಿದ್ದು, ಅದರ ಮೂಲ ಮಾತ್ರ ಇನ್ನೂ ನಿಗೂಢವಾಗಿದೆ.
ವಿಷಯ ತಿಳಿದ ನ್ಯೂಜಿಲೆಂಡ್​ ಪ್ರಧಾನಿ ಜೆಸಿಂಡಾ ಆರ್ಡೆನ್​, ತಮ್ಮ ದೇಶದ ಅತಿದೊಡ್ಡ ನಗರ ಅಕ್ಲೆಂಡ್​ನ ಸಂಪೂರ್ಣ ಲಾಕ್​ಡೌನ್​ಗೆ ಆದೇಶಿಸಿದ್ದಾರೆ. ನಾವೆಲ್ಲರೂ ಒಂದಾಗಿ ಕರೊನಾ ವೈರಾಣುವನ್ನು ಸೋಲಿಸಿದ್ದೆವು. ಈಗಲೇ ನಾವೆಲ್ಲರೂ ಒಟ್ಟಾಗಿ ವೈರಾಣುವನ್ನು ಮತ್ತೊಮ್ಮೆ ಸೋಲಿಸಲು ಮುಂದಾಗೋಣ ಎಂದು ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ಅವರು ದೇಶದ ಜನತೆಗೆ ಕರೆ ನೀಡಿದರು.
ಅಕ್ಲೆಂಡ್​ನಲ್ಲಿ ಬುಧವಾರ ಮಧ್ಯಾಹ್ನದಿಂದ 3ನೇ ಹಂತದ ಮುಂಜಾಗ್ರತಾ ಕ್ರಮಗಳು ಜಾರಿಯಲ್ಲಿರಲಿದೆ. ಸಾಧ್ಯವಾದಲ್ಲಿ ಜನರು ಮನೆಯೊಳಗೆ ಇರಬೇಕು, ಹೊರಬಂದರೂ ಬೇರೊಬ್ಬರೊಂದಿಗೆ ದೈಹಿಕ ಸಂಪರ್ಕ ಹೊಂದುವಂತಿಲ್ಲ. ಈ ನಿಯಮ ಮೂರು ದಿನ ಜಾರಿಯಲ್ಲಿರಲಿದೆ. ಇನ್ನುಳಿದಂತೆ ನ್ಯೂಜಿಲೆಂಡ್​ನಾದ್ಯಂತ 2ನೇ ಹಂತದ ಮುಂಜಾಗ್ರತಾ ಕ್ರಮಗಳು ಜಾರಿಯಲ್ಲಿರಲಿವೆ. ಈ ಸಂದರ್ಭದಲ್ಲಿ ಜನರು ದೈಹಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಸಾರ್ವಜನಿಕ ಸಭೆಸಮಾರಂಭಗಳಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ನಿರ್ಬಂಧಿಸಲ್ಪಡಲಿದೆ.
ಮದುವೆಯಾಗಿ ವರ್ಷಗಳೇ ಕಳೆದ್ರೂ ಸೆಕ್ಸ್​ಗೆ ಒಪ್ಪದ ಪತ್ನಿ ಬೇಸತ್ತ ಪತಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + twelve =
Remember me
