ನವದೆಹಲಿ:ರಾಷ್ಟ್ರಾದ್ಯಂತ ಲಾಕ್​ಡೌನ್​ ಘೋಷಿಸಿರುವ ಹಿನ್ನೆಲೆಯಲ್ಲಿ ನಾವೆಲ್ಲರೂ ಮನೆಯೊಳಗೆ ಬಂದಿಗಳಾಗಿ, ಸುರಕ್ಷಿತವಾಗಿದ್ದರೆ, ತಮ್ಮ ಹಾಗೂ ತಮ್ಮ ಕುಟುಂಬದವರ ಸುರಕ್ಷತೆಯನ್ನು ಲೆಕ್ಕಿಸದ ವೈದ್ಯರು ನಿರಂತರವಾಗಿ ಕರೊನಾ ಪೀಡಿತರ ಸೇವೆಯಲ್ಲಿ ತೊಡಗಿದ್ದಾರೆ. ಬಿಡುವಾದಾಗ, ಕುಟುಂಬಸ್ಥರನ್ನು ನೋಡಬೇಕೆಂದರೂ ಅವರನ್ನು ಕರೊನಾ ವೈರಸ್​ ಸೋಂಕಿನ ಭೀತಿ ಬಿಟ್ಟುಬಿಡದಂತೆ ಕಾಡುತ್ತಿದೆ. ಹೀಗಾಗಿ ಹಲವು ವೈದ್ಯರು ಮನೆಗೆ ತೆರಳದೆ, ಸಿಕ್ಕ ಅವಕಾಶದಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು, ಕರ್ತವ್ಯಕ್ಕೆ ಮರಳುತ್ತಿದ್ದಾರೆ.
ದೆಹಲಿಯ ಆಸ್ಪತ್ರೆಯೊಂದರಲ್ಲಿ ಕರೊನಾ ವಾರಿಯರ್​ ಆಗಿ ಕೋವಿಡ್​ 19 ಪೀಡಿತರ ಸೇವೆಯಲ್ಲಿ ತೊಡಗಿದ್ದ ವೈದ್ಯರೊಬ್ಬರಿಗೆ ಕುಟುಂಬಸ್ಥರನ್ನು ಭೇಟಿಯಾಗಬೇಕು ಎನಿಸಿತು. ಮನೆಗೆ ಹೋಗಿ ಪತ್ನಿ, ಮಕ್ಕಳನ್ನು ನೋಡಿ ಆರಾಮವಾಗಿ ಕುಳಿತು ಚಹಾ ಕುಡಿಯಬೇಕು ಎಂಬ ಬಯಕೆ ಮನದಲ್ಲಿ ಹುಟ್ಟಿತು.
ತಡಮಾಡದ ಅವರು ಮಂಗಳವಾರ ಆಸ್ಪತ್ರೆಯಿಂದ ಮನೆಗೆ ತೆರಳಿದರು. ಮನೆಯ ಗೇಟ್​ ಬಳಿ ಬರುತ್ತಲೇ ಕರೊನಾ ವೈರಸ್​ ಸೋಂಕಿನ ಭೀತಿ ಆವರಿಸಿತು. ತಕ್ಷಣವೇ ಗೇಟ್​ನಿಂದ ಅನತಿ ದೂರದಲ್ಲಿ ಕುಳಿತ ಅವರು, ಪತ್ನಿಗೆ ಹೇಳಿ ಚಹಾ ಮಾಡಿಸಿಕೊಂಡು ಕುಡಿದರು. ದೂರದಿಂದಲೇ ಮಕ್ಕಳೊಂದಿಗೆ ಮಾತನಾಡಿ ನಿರಾಳರಾಗಿ ಮತ್ತೆ ಕರ್ತವ್ಯಕ್ಕೆ ಮರಳಿದರು.
‘ಕರೊನಾ ಕುದುರೆ’ ಏರಿ ಹೊರಟ ಈ ಪೊಲೀಸ್ ಅಧಿಕಾರಿಯ ಮಾತನ್ನು ಕೇಳಿಬಿಡಿ…ಇಲ್ಲದಿದ್ದರೆ ವೈರಸ್​ನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ !

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nineteen − two =
Remember me
