ನವದೆಹಲಿ: ಯಾವುದೇ ಒಂದು ನಿರ್ದಿಷ್ಟ ಸ್ಥಳದಲ್ಲಿ ಕನಿಷ್ಠ 28 ದಿನಗಳ ಕಾಲ ಒಂದೂ ಕರೊನಾ ಸೋಂಕು ಪ್ರಕರಣ ಮರುಕಳಿಸದಿದ್ದರೆ ಮಾತ್ರ ಆ ಸ್ಥಳವನ್ನು ಕರೊನಾಮುಕ್ತ ಪ್ರದೇಶ ಎಂಬುದಾಗಿ ಘೋಷಿಸಲು ಸಾಧ್ಯ….! ಇಲ್ಲದಿದ್ದರೆ ಆ ಸ್ಥಳವನ್ನು ಇನ್ನೂ ‘ಕರೊನಾ ಸರಪಳಿ ಮುರಿಯದ ಅಪಾಯಕಾರಿ ಪ್ರದೇಶ’ ಎಂದೇ ಹೇಳಬೇಕಾಗುತ್ತದೆ.
ಇಂಥದೊಂದು ಸ್ಪಷ್ಟನೆಯನ್ನು ಸ್ವತಃ ಕೇಂದ್ರ ಆರೋಗ್ಯ ಸಚಿವಾಲಯವೇ ಮಂಗಳವಾರ ನೀಡಿದೆ. ನಲವತ್ತು ದಿನಗಳ ಲಾಕ್‌ಡೌನ್‌ನ ಔಚಿತ್ಯ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವಾಲಯದ ಜಂಟಿ ಕಾರ‌್ಯದರ್ಶಿ ಲವ ಅಗರವಾಲ್, ಈ ವಿವರಣೆಯನ್ನು ನೀಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕರೊನಾದಿಂದ ಮತ್ತೆ 31 ಜನ ಮೃತಪಟ್ಟಿದ್ದು, ಮೃತರ ಸಂಖ್ಯೆ 339ಕ್ಕೆ ಏರಿದೆ. ಒಟ್ಟು ಸೋಂಕಿತರ ಸಂಖ್ಯೆ 10363ಕ್ಕೆ ಏರಿದೆ. ಒಂದು ದಿನದಲ್ಲಿ ಹೊಸದಾಗಿ ಸೇರ್ಪಡೆಯಾದವರ ಸಂಖ್ಯೆ 1211. ಯುವ ಪೀಳಿಗೆಯವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದ್ದರೂ ಸಾವಿಗೀಡಾಗುತ್ತಿರುವವರಲ್ಲಿ ವಯಸ್ಸಾದವರ ಸಂಖ್ಯೆಯೇ ಜಾಸ್ತಿ ಇದೆ.
ಲಾಕ್​ಡೌನ್​ನಲ್ಲಿ ಸಿಕ್ಕಿಕೊಂಡು ಕಾರಿನಲ್ಲೇ 21 ದಿನ ಕಳೆದ ಪುತ್ತೂರಿನ ಯುವಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
