ನವದೆಹಲಿ:ಭಾರತದಲ್ಲಿ ಕರೊನಾ ವೈರಸ್​ನ ಎರಡನೇ ಅಲೆ ದಾಂಗುಡಿಯಿಡುವ ಸಾಧ್ಯತೆ ಕಡಿಮೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಹೇಳಿದ್ದಾರೆ. ಇದರಿಂದ ಈ ಬಗ್ಗೆ ಇದ್ದ ಆತಂಕ ತುಸು ಕಡಿಮೆಯಾಗಿದೆ. ಒಂದು ವೇಳೆ ಎರಡನೇ ಅಲೆ ಉಂಟಾದರೂ ಮೊದಲ ಅಲೆಯಷ್ಟು ಪ್ರಬಲವಾಗಿ ಇರುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಿತ್ಯದ ಸೋಂಕಿನ ಹಾಗೂ ಮರಣದ ಸಂಖ್ಯೆ ಸತತವಾಗಿ ಇಳಿಯುತ್ತಿದ್ದರೂ ಒಟ್ಟು ಸೋಂಕಿತರ ಸಂಖ್ಯೆ ಒಂದು ಕೋಟಿ ನಾಲ್ಕು ಸಾವಿರಕ್ಕಿಂತ ಹೆಚ್ಚಾಗಿದೆ. ಅಮೆರಿಕದ ನಂತರದ ಸ್ಥಾನದಲ್ಲಿ ಭಾರತವಿದೆ. ಭಾರತದ ದೈನಿಕ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ ಎಂದು ಪ್ರಖ್ಯಾತ ವೈರಾಣು ತಜ್ಞ ಡಾ. ಷಾಹಿದ್ ಜಮೀಲ್ ಹೇಳಿದ್ದಾರೆ. ಈ ವರ್ಷಾಂತ್ಯದಲ್ಲಿ ಲಸಿಕೆ ನೀಡಿಕೆ ಆರಂಭಿಸಿ 30 ಕೋಟಿ ಜನರಿಗೆ ಲಸಿಕೆ ಹಾಕಿದರೆ 2025ರ ವೇಳೆಗೆ ಈ ರೋಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ. ಕೆ.ಕೆ. ಅಗರ್​ವಾಲ್ ಅಭಿಪ್ರಾಯ ಪಟ್ಟಿದ್ದಾರೆ.
80 ಸಾವಿರ ಕೋಟಿ ರೂ. ಬೇಕು
ಭಾರತದಲ್ಲಿ ಮುಂದಿನ 1 ವರ್ಷ ಕಾಲ ಕರೊನಾ ವೈರಸ್ ಲಸಿಕೆ ವಿತರಿಸಲು -ಠಿ;80 ಸಾವಿರ ಕೋಟಿ ಬೇಕಾಗಬಹುದು ಎಂದು ಪುಣೆಯ ಲಸಿಕೆ ತಯಾರಿಕೆ ಸಂಸ್ಥೆ ಸೆರಂ ಶನಿವಾರ ಅಭಿಪ್ರಾಯಪಟ್ಟಿದೆ. ಲಸಿಕೆ ಅಭಿಯಾನದ ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ಹಾಕಲು ಭಾರತ ಸರ್ಕಾರ ಯೋಜಿಸಿದೆ.
ಕೇರಳದಲ್ಲಿ ಆತಂಕ
ಕೇರಳದಲ್ಲಿ ಈಚೆಗೆ ಸ್ಥಳೀಯ ಸಂಸ್ಥೆ ಚುನಾವಣೆಗಳು ನಡೆದಿರುವ ಹಿನ್ನೆಲೆಯಲ್ಲಿ ಕರೊನಾ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗಬಹುದು ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಎಚ್ಚರಿಕೆ ನೀಡಿದ್ದಾರೆ. ಮುಂದಿನ ಕೆಲವು ವಾರಗಳ ಕಾಲ ತುಂಬಾ ಎಚ್ಚರಿಕೆಯಿಂದ ಇರುವಂತೆ ಜನರಿಗೆ ಸೂಚಿಸಿದ್ದಾರೆ. ಲಸಿಕೆ ಸಿಗುವವರೆಗೂ ಸ್ವಯಂ ಕ್ವಾರಂಟೈನ್​ಗೆ ಒಳಪಟ್ಟು ತಾಳ್ಮೆಯಿಂದ ಇರುವಂತೆ ಸಲಹೆ ಮಾಡಿದ್ದಾರೆ.
ಅಮೆರಿಕದಲ್ಲಿ ಮಾಡರ್ನಾ ಲಸಿಕೆಗೆ ಮಾನ್ಯತೆ
ಅಮೆರಿಕದ ಆಹಾರ ಮತ್ತು ಔಷಧ ಪ್ರಾಧಿಕಾರ ಮಾಡರ್ನಾ ಕರೊನಾ ಲಸಿಕೆಯನ್ನು ತುರ್ತು ಉಪಯೋಗಕ್ಕಾಗಿ ಸಾರ್ವಜನಿಕ ಬಳಕೆಗೆ ಅನುಮೋದನೆ ಕೊಟ್ಟಿದೆ. ಕಳೆದ ವಾರ ಫೈಜರ್ ಕಂಪನಿಯ ಲಸಿಕೆಗೆ ತುರ್ತು ಸಾರ್ವಜನಿಕ ಬಳಕೆಗೆ ಅನುಮೋದನೆ ದೊರಕಿತ್ತು. ಫೈಜರ್ ಕಂಪನಿಯ ಲಸಿಕೆಯನ್ನು ಮೈನಸ್ 70 ಡಿಗ್ರಿಯಲ್ಲಿ ಇಡಬೇಕು. ಆಸ್ಪತ್ರೆಗಳಲ್ಲಿ ಈ ರೀತಿಯ ವಿಶೇಷ ರೆಫ್ರಿಜರೇಟರುಗಳ ಸಂಖ್ಯೆ ತುಂಬಾ ಕಡಿಮೆ. ಆದರೆ ಮಾಡರ್ನಾ ಕಂಪನಿಯ ಲಸಿಕೆಯನ್ನು ಜೀರೋ ಡಿಗ್ರಿಯಿಂದ 8 ಡಿಗ್ರಿವರೆಗೆ ಇಟ್ಟರೆ ಸಾಕು. ಹಾಗಾಗಿ ಈಗಿರುವ ಸಾಧಾರಣ ರೆಫ್ರಿಜರೇಟರ್ ಸಾಗುತ್ತದೆ. ಮಾಡರ್ನಾ ಕಂಪನಿ ಕೇವಲ ಹತ್ತು ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟಿದೆ. ಇಲ್ಲಿಯವರೆಗೆ ಯಾವ ಔಷಧವನ್ನೂ ಬಿಡುಗಡೆ ಮಾಡಿಲ್ಲ. ಕೆಲವು ತಿಂಗಳ ಹಿಂದೆ ಈ ಕಂಪನಿಗೆ ಟ್ರಂಪ್ ಸರ್ಕಾರ ಲಸಿಕೆ ಸಂಶೋಧನೆಗಾಗಿ 500 ಮಿಲಿಯನ್ ಡಾಲರ್ ಕೊಟ್ಟಾಗ ಬಹಳಷ್ಟು ಜನರು ಕಟುವಾಗಿ ಟೀಕಿಸಿದ್ದರು. ಈ ಕಂಪನಿ ಸಾಮರ್ಥ್ಯದ ಬಗ್ಗೆ ಭಾರಿ ಅನುಮಾನ ವ್ಯಕ್ತ ಪಡಿಸಿದ್ದರು. ಆದರೆ, ಈ ಕಂಪನಿ ಹೊಸ ತಂತ್ರಜ್ಞಾನದೊಂದಿಗೆ ಕೆಲವೇ ತಿಂಗಳಲ್ಲಿ ಪರಿಣಾಮಕಾರಿಯಾದ ಲಸಿಕೆಯನ್ನು ತಯಾರಿಸಿ, 30,000 ಜನರ ಮೇಲೆ ಪ್ರಯೋಗ ಮಾಡಿದೆ. ಔಷಧ 95% ಯಶಸ್ವಿಯಾಗಿದೆ. ಜನವರಿ ತಿಂಗಳಲ್ಲಿ ಕೇವಲ ಇಪ್ಪತ್ತು ಡಾಲರ್ ಇದ್ದ ಮಾಡರ್ನಾ ಕಂಪನಿಯ ಷೇರುಗಳು ಈಗ 140 ಡಾಲರ್​ಗೆ ಮಾರಾಟವಾಗುತ್ತಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 3 =
Remember me
