ಲಖನೌ:ಟ್ರಾವೆಲ್​ ಹಿಸ್ಟರಿ ಇಲ್ಲದ 33 ವರ್ಷದ ಮತ್ತೊರ್ವ ವ್ಯಕ್ತಿಯಲ್ಲಿ ಕರೊನಾ ವೈರಸ್​ ಸೋಂಕು ಧೃಡವಾಗಿದ್ದು, ನಾವು ಕೋವಿಡ್​-19 ಮೂರನೇ ಹಂತಕ್ಕೆ ತಲುಪಿದ್ವಾ? ಎಂಬ ಆತಂಕ ಮನೆಮಾಡಿದೆ.
ಉತ್ತರ ಪ್ರದೇಶದ ಪಿಲಿಭಿತ್​ ಜಿಲ್ಲೆಯ ವ್ಯಕ್ತಿಗೆ ಬುಧವಾರ ಕರೊನಾ ವೈರಸ್ ಪಾಸಿಟಿವ್​ ವರದಿಯಾಗಿದೆ. ಆದರೆ, ಟ್ರಾವೆಲ್​ ಹಿಸ್ಟರಿ ಇಲ್ಲದಿರುವುದರಿಂದ ಸಮುದಾಯ ಹರಡುವಿಕೆಯ ಪ್ರಕರಣ ಎಂದು ಪರಿಗಣಿಸಲಾಗಿದೆ.
ನಿನ್ನೆಯಷ್ಟೇ ಗೌತಮಬುದ್ಧ ನಗರದ ಮೂರು ಪ್ರಕರಣಗಳಲ್ಲಿ ನೊಯ್ಡಾದ 137ನೇ ಸೆಕ್ಟರ್​ನಲ್ಲಿ ವಾಸವಾಗಿಗಿರುವ ದಂಪತಿಗೆ ಸೋಂಕು ತಗುಲಿರುವುದಾಗಿ ವರದಿಯಾಗಿತ್ತು. ಕಳವಳಕಾರಿಯೆಂದರೆ ನೊಯ್ಡಾ ದಂಪತಿಗೂ ಟ್ರಾವೆಲ್​ ಹಿಸ್ಟರಿ ಇರಲಿಲ್ಲ. ಆದರೆ ಲಂಡನ್​ನಿಂದ ಬಂದಿದ್ದ ಆಪ್ತರೊಬ್ಬರಿಗೆ ಆತಿಥ್ಯ ನೀಡಿದ್ದರು ಎಂದು ತಿಳಿದುಬಂದಿದೆ.
ಆತಿಥ್ಯ ಸ್ವೀಕರಿಸಿದವರಿಗೇನಾದರೂ ರೋಗದ ಲಕ್ಷಣಗಳಿದ್ದರೆ, ದಂಪತಿಗೆ ಹರಡಿರಬಹುದು ಎಂದು ಅಂದಾಜಿಸಲಾಗಿದೆ. ಲಂಡನ್​ ಅತಿಥಿಯ ಜಾಲವನ್ನು ಪತ್ತೆ ಮಾಡಿದರೆ ಎಲ್ಲ ಸಂಶಯಗಳಿಗೆ ಉತ್ತರ ಸಿಗಲಿದೆ ಎಂದು ಯುಪಿಯ ಆರೋಗ್ಯ ಇಲಾಖೆ ತಿಳಿಸಿದೆ.
ಟ್ರಾವೆಲ್​ ಹಿಸ್ಟರಿಯಿಲ್ಲದ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳಲ್ಲಿ ಹಾಗೂ ಜನತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಕರೊನಾ ವೈರಸ್​ ಎರಡನೇ ಹಂತದಿಂದ ಮೂರನೇ ಹಂತಕ್ಕೇನಾದರೂ ನಾವು ಕಾಲಿಟ್ಟೆವಾ ಎಂಬ ಸಂಶಯ ಆರಂಭವಾಗತೊಡಗಿದೆ.
ಈವರೆಗೂ ಉತ್ತರ ಪ್ರದೇಶದಲ್ಲಿ 34 ಸೋಂಕು ಪ್ರಕರಣಗಳು ವರದಿಯಾಗಿವೆ. ಕರೊನಾಗೆ ದಾಳಿಗೆ ಸಿಲುಕಿರುವ ಪ್ರಮುಖ ನಗರಗಳಲ್ಲಿ ಇದು ಕೂಡ ಒಂದಾಗಿದೆ.(ಏಜೆನ್ಸೀಸ್​)
ಅಗತ್ಯ ವಸ್ತುಗಳನ್ನು ಮನೆಗೆ ಬಾಗಿಲಿಗೆ ತಲುಪಿಸಲು ಸಿಎಂ ಯೋಗಿ ಆದಿತ್ಯನಾಥ್​ ನಿರ್ಧಾರ: ಮಾರುಕಟ್ಟೆಗಳಿಗೆ ತೆರಳದಂತೆ ಮನವಿ

VIDEO| ಕೋವಿಡ್​-19 ಮುನ್ನೆಚ್ಚರಿಕ್ಕೆ ವಹಿಸಿ ಯುಗಾದಿ ಹಬ್ಬವನ್ನು ಸರಳವಾಗಿ ಆಚರಿಸಿ: ಶ್ರೀ ಶ್ರೀಶೈಲ ಜಗದ್ಗುರುಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 15 =
Remember me
