ಪಥನಂತಿಟ್ಟು:ಕೊರೊನಾ ವೈರಸ್ ಭಾರತದಲ್ಲಿ ಮೊದಲು ಕಾಣಿಸಿಕೊಂಡಿದ್ದು ಕೇರಳದಲ್ಲಿ. ವುಹಾನ್​ನಿಂದ ಒಟ್ಟಿಗೆ ಪ್ರಯಾಣಿಸಿದ್ದ ಮೂವರು ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿತ್ತು. ಅವರೆಲ್ಲೂ ಸದ್ಯ ಗುಣಮುಖರಾಗಿದ್ದಾರೆ ಎಂದು ಕೇರಳ ಆರೋಗ್ಯ ಇಲಾಖೆ ಮಾಹಿತಿ ನೀಡಿತ್ತು.
ಈಗ ಮತ್ತೆ ಕೇರಳದಲ್ಲಿ ಐದು ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅವರಲ್ಲಿ ಮೂರು ಜನರು ಇಟಲಿಗೆ ಹೋಗಿ ಬಂದವರಾಗಿದ್ದಾರೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.
ಇಟಲಿಯಿಂದ ಮಗುವಿನೊಂದಿಗೆ ಬಂದ ದಂಪತಿ ತಮ್ಮ ಮಾರ್ಚ್​ 1ರಂದು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ನಂತರ ಸಂಬಂಧಿಕರನ್ನು ಭೇಟಿಯಾಗಿದ್ದರು. ಹಾಗಾಗಿ ಈ ವೈರಸ್ ಇನ್ನೂ ಇಬ್ಬರಿಗೆ ತಗುಲುವಂತಾಯಿತು. ಕೊರೊನಾ ಪೀಡಿತರನ್ನು ಪ್ರತ್ಯೇಕ ವಾರ್ಡ್​ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಪಥನಂತಿಟ್ಟು ಜಿಲ್ಲಾದ್ಯಂತ ಅಲರ್ಟ್ ಮಾಡಲಾಗಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಗೇ ಸೋಂಕು ಪೀಡಿತರು ಬಂದ ವಿಮಾನದಲ್ಲಿದ್ದವರ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗುವುದು ಎಂದು ಆರೋಗ್ಯ ಸಚಿವೆ ತಿಳಿಸಿದ್ದಾರೆ.
ಕೇರಳದಲ್ಲಿ ಕೊರೊನಾದೊಂದಿಗೆ ಹಕ್ಕಿ ಜ್ವರದ ಭಯವೂ ಆವರಿಸಿದೆ. ಒಂದು ಕೋಳಿಫಾರ್ಮ್​ ಹಾಗೂ ನರ್ಸರಿಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದಾಗಿ ನಿನ್ನೆ ವರದಿಯಾಗಿತ್ತು. (ಏಜೆನ್ಸೀಸ್​)
‘ಕೊರೊನಾ ವೈರಸ್​ ಬಗ್ಗೆ ಯಾರಿಗೂ ಆತಂಕ ಬೇಡ..’ದೇಶದ ಜನರಿಗೆ ಧೈರ್ಯ ತುಂಬಿದ ಪ್ರಧಾನಿ ನರೇಂದ್ರ ಮೋದಿ

ಕೊರೊನಾ ವೈರಸ್​ ಆಯ್ತು… ಈಗ ಕೇರಳದಲ್ಲಿ ಚಿಕನ್​ಗೂ ಬಂತು ಕಂಟಕ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − fifteen =
Remember me
