ನವದೆಹಲಿ:ರಾಷ್ಟ್ರದಲ್ಲಿ ಮಹಾಮಾರಿ ಕರೊನಾ ವೈರಸ್​ನಿಂದ ಮೃತಪಟ್ಟವರಲ್ಲಿ ಶೇ 75 ರಷ್ಟು ಸಂತ್ರಸ್ತರು 60 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರೆಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ದಿನನಿತ್ಯದಂತೆ ಶನಿವಾರ ಸಂಜೆಯು ನಡೆದ ಕರೊನಾ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್​ ಅಗರ್ವಾಲ್​ ಮಾತನಾಡಿ, ಮೃತ ಕೋವಿಡ್​ ಸಂತ್ರಸ್ತರಲ್ಲಿ ಶೇ 83 ರಷ್ಟು ಈಗಾಗಲೇ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ಮಾಹಿತಿ ನೀಡಿದರು.
ವಯಸ್ಸಿಗೆ ಅನುಗುಣವಾಗಿ ವಿಶ್ಲೇಷಿಸಿರುವ ಮಾಹಿತಿ ಪ್ರಕಾರ 14.4 ರಷ್ಟು ಕರೊನಾ ಸಾವು 0-45 ವಯೋಗುಂಪಿನಲ್ಲಿ ಕಂಡುಬಂದಿದೆ. 10.3 ರಷ್ಟು 45-60ರ ವಯೋಗುಂಪಿನಲ್ಲಿಯೂ, 33.1 ರಷ್ಟು 60-75ರ ವಯೋಮಾನದವರಲ್ಲಿಯೂ ಮತ್ತು 42.2 ರಷ್ಟು ಸಾವು 75 ವರ್ಷ ಮೇಲ್ಪಟ್ಟ ಗುಂಪಿನಲ್ಲಿ ವರದಿಯಾಗಿದೆ ಎಂದು ಅಗರ್ವಾಲ್​ ವಿವರಿಸಿದ್ದಾರೆ.
ಸದ್ಯದ ಕರೊನಾ ಅಂಕಿ-ಅಂಶಗಳನ್ನು ನೀಡಿರುವ ಆರೋಗ್ಯ ಸಚಿವಾಲಯ, ಇಲ್ಲಿಯವರೆಗೂ ರಾಷ್ಟ್ರದಲ್ಲಿ 14,378 ಪಾಸಿಟಿವ್​ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 4,291 ಕೇಸ್​ಗಳು ತಬ್ಲಿಘಿ ಜಮಾತ್​ ನಂಟನ್ನು ಹೊಂದಿವೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 991 ಹೊಸ ಪ್ರಕರಣಗಳು ಹಾಗೂ 43 ಸಾವು ವರದಿಯಾಗಿದೆ ಎಂದು ಅಗರ್ವಾಲ್​ ಹೇಳಿದ್ದಾರೆ.
ಇದೇ ವೇಳೆ ರಾಷ್ಟ್ರವ್ಯಾಪಿ 1,992 ರೋಗಿಗಳು ಗುಣಮುಖರಾಗಿದ್ದಾರೆ. ಶೇಕಡವಾರು ಪ್ರಮಾಣದಲ್ಲಿ ಹೇಳುವುದಾದರೆ, ಒಟ್ಟಾರೆ 13.85 ರಷ್ಟು ಮಂದಿ ಕರೊನಾದಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.(ಏಜೆನ್ಸೀಸ್​)
ಮಾನವೀಯತೆಯು ಮಹಾಮಾರಿ ಕರೊನಾ ವೈರಸ್ ಮಣಿಸಲಿದೆ: ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 2 =
Remember me
