ನವದೆಹಲಿ:ಭಾರತದಲ್ಲಿ ನೋಡನೋಡುತ್ತಿದ್ದಂತೆ ಕರೊನಾ ವೈರಸ್​ ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಕರೊನಾ ಸೋಂಕಿತರ ಸಂಖ್ಯೆ 14,378ಕ್ಕೆ ಏರಿದ್ದು, 480 ಜನರು ಮೃತಪಟ್ಟಿದ್ದಾರೆ. 1992 ರೋಗಿಗಳು ಕರೊನಾದಿಂದ ಚೇತರಿಸಿಕೊಂಡಿದ್ದಾರೆ ಎಂದು ಇಂದು ಬೆಳಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಶುಕ್ರವಾರದವರೆಗೆ ಕರೊನಾ ಸೋಂಕಿತರ ಸಂಖ್ಯೆ 13,387 ಇತ್ತು. 437 ಮಂದಿ ಸಾವನ್ನಪ್ಪಿದ್ದರು. 1749 ಮಂದಿ ಡಿಸ್​ಚಾರ್ಜ್​ ಆಗಿದ್ದರು. ಕಳೆದ 24ಗಂಟೆಯಲ್ಲಿ ಎಲ್ಲ ಸಂಖ್ಯೆಯಲ್ಲೂ ಗಣನೀಯವಾಗಿ ಹೆಚ್ಚಾಗಿದೆ.
ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಕರೊನಾ ವಿಪರೀತವಾಗಿ ಬಾಧಿಸುತ್ತಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 3323 ಮಂದಿ ಸೋಂಕಿತರು ಇದ್ದಾರೆ. ದೆಹಲಿಯಲ್ಲಿ 1707, ತಮಿಳುನಾಡಿನಲ್ಲಿ 1323, ರಾಜಸ್ಥಾನದಲ್ಲಿ 1229 ಜನ ವೈರಸ್​ ಪೀಡಿತರು ಇದ್ದಾರೆ. ಹಾಗೇ ಸಾವಿನ ಸಂಖ್ಯೆಯಲ್ಲೂ ಮಹಾರಾಷ್ಟ್ರವೇ ಮುಂದಿದೆ. ಅಲ್ಲಿ ಬರೋಬ್ಬರಿ 201ಮಂದಿ ಕೊವಿಡ್​ನಿಂದ ಮೃತಪಟ್ಟಿದ್ದಾರೆ.
ಎಲ್ಲ ರಾಜ್ಯಗಳಲ್ಲೂ ಕರೊನಾ ವೈರಸ್​ ಅಟ್ಟಹಾಸ ತೋರಿಸುತ್ತಿದ್ದು, ಸದ್ಯ ಭಾರತದಲ್ಲಿ ಎರಡನೇ ಹಂತದ ಲಾಕ್​ಡೌನ್​ ಇದೆ. ಇದು ಮುಗಿಯುವ ಹೊತ್ತಿಗಾದರೂ ಕರೊನಾ ಪ್ರಮಾಣ ಕಡಿಮೆ ಆಗಲಿ ಎಂಬುದು ಎಲ್ಲರ ನಿರೀಕ್ಷೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
