ನವದೆಹಲಿ:ಕರೊನಾವೈರಸ್​ ಸೋಂಕಿತರ ಸಂಖ್ಯೆ ಭಾರತದಲ್ಲಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, ಕಾಲಕಾಲಕ್ಕೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡುತ್ತಿದೆ.
ಇಂದು ಬೆಳಗ್ಗೆ 10 ಗಂಟೆಯ ಹೊತ್ತಿಗೆ ಭಾರತದಲ್ಲಿ ಕರೊನಾ ರೋಗಿಗಳು 867 ಜನರಿದ್ದರು. ಆದರೆ ಈ ಸಂಖ್ಯೆ ಮಧ್ಯಾಹ್ನದ ವೇಳೆಗೆ 979ಕ್ಕೆ ಏರಿದೆ. ಇಲ್ಲಿಯವರೆಗೆ ಕರೊನಾದಿಂದ ಮೃತಪಟ್ಟವರು ಒಟ್ಟು 25 ಜನ.
ಕರೊನಾ ವೈರಸ್​ನಿಂದ ಇದುವರೆಗೆ ಮಹಾರಾಷ್ಟ್ರದಲ್ಲಿ 6 ಮಂದಿ, ಗುಜರಾತ್​ನಲ್ಲಿ ನಾಲ್ಕು, ಕರ್ನಾಟಕದಲ್ಲಿ ಮೂರು, ಮಧ್ಯಪ್ರದೇಶ ಮತ್ತು ದೆಹಲಿಯಲ್ಲಿ ತಲಾ ಇಬ್ಬರು, ಕೇರಳ, ತೆಲಂಗಾಣ, ತಮಿಳುನಾಡು, ಬಿಹಾರ್​, ಪಂಜಾಬ್​, ಪಶ್ಚಿಮಬಂಗಾಳ, ಜಮ್ಮುಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
979 ಕರೊನಾ ಸೋಂಕಿತರಲ್ಲಿ 48 ಮಂದಿ ವಿದೇಶಿಗರು. ಒಟ್ಟು 86 ಜನರು ಗುಣಮುಖರಾಗಿದ್ದಾರೆ. (ಏಜೆನ್ಸೀಸ್​)
‘ಲೂಸಿಯಾ’ ಪವನ್ ನೇತೃತ್ವದಲ್ಲಿ ಕ್ರೌಡ್ ಫಂಡಿಂಗ್; 350 ಸಿನಿಮಾ ಕಾರ್ಮಿಕರಿಗೆ ತಲಾ 2000 ರೂ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
