ನವದೆಹಲಿ:ಕರೊನಾ ಮಹಾಮಾರಿ ಇಡೀ ಜಗತ್ತಿನ ಜನರನ್ನು ಆತಂಕದ ಮಡುವಿಗೆ ತಳ್ಳಿದೆ. ಭಾರತ ಸೇರಿ ಹಲವು ದೇಶಗಳು ಲಾಕ್​ಡೌನ್ ಘೊಷಿಸಿ ಜನರ ಓಡಾಟದ ಮೇಲೆ ನಿಯಂತ್ರಣ ವಿಧಿಸಿ, ವೈರಾಣು ಹರಡುವುದನ್ನು ತಡೆಯಲು ಹರಸಾಹಸ ಪಡುತ್ತಿವೆ. ಲಸಿಕೆ ಸಂಶೋಧನೆಗೆ ವ್ಯಾಪಕ ಕೆಲಸ ನಡೆಯುತ್ತಿದೆ. ಮೊದಲ ಹಂತದ ಲಾಕ್​ಡೌನ್ ವಿಸ್ತರಣೆಗೊಂಡು ಮೇ 3ರ ವರೆಗೆ ಜಾರಿಯಲ್ಲಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮನೆಯಲ್ಲೇ ಉಳಿಯುವುದು ಈ ಲಾಕ್​ಡೌನ್​ನ ಪ್ರಮುಖ ಅಂಶಗಳಾಗಿವೆ. ಒಂದು ವೇಳೆ ಈ ಮಹಾಮಾರಿ 2014ರಲ್ಲಿ ವಕ್ಕರಿಸಿದ್ದಿದ್ದರೆ ಭಾರತದಲ್ಲಿ ಪರಿಸ್ಥಿತಿ ಏನಾಗಬಹುದಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳುವುದೇ ದುಸ್ತರ. 2014ರ ಬಳಿಕ ಎನ್​ಡಿಎ ಸರ್ಕಾರ ಹಲವು ಅಭಿವೃದ್ಧಿ ಕ್ರಮಗಳನ್ನು ಕೈಗೊಂಡಿದ್ದು, ಮೂಲಸೌಲಭ್ಯ, ವಸತಿ, ಉದ್ಯೋಗ ಇನ್ನಿತರ ಕ್ಷೇತ್ರಗಳಲ್ಲಿ ವ್ಯಾಪಕ ಸುಧಾರಣೆ ತಂದಿದೆ. ಜನಜೀವನ ತುಸು ಸರಳವಾಗಿದೆ. ಒಂದು ವೇಳೆ ಈ ಅಂಶಗಳು ಇಲ್ಲದಿದ್ದರೆ, ಕರೊನಾ ವಿರುದ್ಧ ಭಾರತ ಸಮರ ಕೈಗೊಳ್ಳುವುದು ದುಸ್ತರವಾಗುತ್ತಿತ್ತು.
2. ಈ ಮೊದಲು ಅಡುಗೆಗೆ ಒಲೆ ಹೊತ್ತಿಸಲು ಎಂಟು ಕೋಟಿಗೂ ಹೆಚ್ಚು ಮಹಿಳೆಯರು ಉರುವಲು ಕಟ್ಟಿಗೆ ತರಬೇಕಾಗಿತ್ತು. ಈಗ ಮಹಿಳೆಯರು ಸುಲಭವಾಗಿ ಗ್ಯಾಸ್ ಸ್ಟವ್​ನಲ್ಲಿ ಅಡುಗೆ ಮಾಡಬಹುದು. ಬಡವರಿಗೆ ಉಜ್ವಲಾ ಯೋಜನೆಯಲ್ಲಿ ಸಿಲಿಂಡರ್, ಸ್ಟವ್​ಗಳನ್ನು ನೀಡಲಾಗಿದೆ.
3. ಪ್ರಸ್ತುತ ಎನ್​ಡಿಎ ಸರ್ಕಾರ 2 ಕೋಟಿ ಕುಟುಂಬಗಳಿಗೆ ಸ್ವಂತ ಸೂರು ಹೊಂದಲು ನೆರವಾಗಿದೆ. ಇದರಿಂದ ಅವರು ನೆಮ್ಮದಿಯಾಗಿ ಮನೆಯಲ್ಲಿ ಇರಬಹುದು.
4. ಲಾಕ್​ಡೌನ್ ಅವಧಿಯಲ್ಲಿ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೇರ ನಗದು ಯೋಜನೆ ಘೋಷಣೆ ಮಾಡಿದೆ. ಈ ಹಿಂದೆಯೇ ಜನಧನ ಯೋಜನೆ ಮೂಲಕ ಸರ್ಕಾರ 36 ಕೋಟಿ ಬಡವರಿಗೆ ಬ್ಯಾಂಕ್ ಖಾತೆ ಇದಗಿಸಿದೆ. ಇದು ಇಲ್ಲದಿದ್ದರೆ ಬಡ ಜನರಿಗೆ ನೇರವಾಗಿ ಪರಿಹಾರ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ.
5. 18,000ಕ್ಕೂ ಹೆಚ್ಚು ಹಳ್ಳಿ, 3 ಕೋಟಿಗಿಂತ ಹೆಚ್ಚಿನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಇಲ್ಲದೇ 21 ದಿನ ಲಾಕ್​ಡೌನ್ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.
6. 2014ರಿಂದ ಮೋದಿ ಸರ್ಕಾರ ಬಡ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಕೆಲಸ ಮಾಡದಿದ್ದರೆ ಎಂಥ ಭಯಾನಕ ಸ್ಥಿತಿ ಸೃಷ್ಟಿಯಾಗಬಹುದಿತ್ತು ಎನ್ನುವುದನ್ನು ಕಲ್ಪಿಸಿಕೊಳ್ಳಬಹುದು.
2014ರ ನಂತರದ ಪ್ರಮುಖ ಅಭಿವೃದ್ಧಿ
ಕರೊನಾ ಹಾವಳಿ ಹಿನ್ನೆಲೆಯಲ್ಲಿ ಪ್ರತ್ಯೇಕ ಬಜೆಟ್ ಮಂಡನೆ ಮಾಡುತ್ತದೆಯೇ ಕೇಂದ್ರ ಸರ್ಕಾರ?

ಊರಿಗೆ ಬಿಡುತ್ತೇನೆ ಎಂದು ವೃದ್ಧೆಯನ್ನು ತಿರುಪತಿಯಿಂದ ಲಾರಿಯಲ್ಲಿ ಕರೆತಂದ ಚಾಲಕ ಮಾಡಿದ್ದೇನು…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − five =
Remember me
