ನವದೆಹಲಿ:ಮಹಾಮಾರಿ ಕರೊನಾ ಸೋಂಕು ಜಾಗತಿಕವಾಗಿ 22 ಲಕ್ಷಕ್ಕೂ ಹೆಚ್ಚು ಜನರಿಗೆ ತಗುಲಿದ್ದು, ಇದರಲ್ಲಿ 5.61 ಲಕ್ಷ ಜನರು ಈಗ ಗುಣಮುಖರಾಗಿದ್ದಾರೆ. 15 ಲಕ್ಷ ಪ್ರಕರಣಗಳು ಸಕ್ರಿಯವಾಗಿದ್ದು, 1.49 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಸೋಂಕು ಪೀಡಿತರ ಸಂಖ್ಯೆ 14,126 ಇದ್ದು, ಇವರಲ್ಲಿ 1,986 ಮಂದಿ ಗುಣಮುಖರಾಗಿದ್ದಾರೆ. 11,665 ಸಕ್ರಿಯ ಪ್ರಕರಣಗಳಿದ್ದು, 475 ಮಂದಿ ಸಾವನ್ನಪ್ಪಿದ್ದಾರೆ. ತಜ್ಞರ ಪ್ರಕಾರ ಕರೊನಾ ಪೀಡಿತರಲ್ಲಿ ಶೇ. 80ರಿಂದ 85 ಮಂದಿ ಸಾಧಾರಣ ಪ್ರಮಾಣದಲ್ಲಿ ಸೋಂಕಿಗೆ ಗುರಿಯಾಗಿರುತ್ತಾರೆ. ಶೇ. 15ರಿಂದ 20 ಮಂದಿಗೆ ಮಾತ್ರ ಸೋಂಕು ತೀವ್ರವಾಗಿರುತ್ತದೆ. ಇಂಥವರು ಪೂರ್ಣವಾಗಿ ಗುಣವಾಗಲು ಆರು ವಾರಗಳು ಬೇಕು. ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ತಿಂಗಳುಗಳೇ ಬೇಕಾಗಬಹುದು.
ಸಾಧಾರಣ ಪ್ರಕರಣ
ಸಾಧಾರಣ ಪ್ರಕರಣಗಳಲ್ಲಿ ರೋಗ ಪೀಡಿತರ ಮುಖದಲ್ಲಿ ಆಯಾಸ ಎದ್ದು ಕಾಣುತ್ತದೆ. ಕೆಮ್ಮು, ಸ್ನಾಯು ಸೆಳೆತ, ಜ್ವರ, ಎದೆ ನೋವು ಕಾಣಿಸಿಕೊಳ್ಳುವುದು ಸಾಮಾನ್ಯ ಲಕ್ಷಣ. ಇಂಥವರು ಮನೆಯಲ್ಲೇ ಪ್ರತ್ಯೇಕ ವಾಸದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಎರಡು ವಾರಗಳಲ್ಲಿ ಆರಾಮವಾಗುತ್ತಾರೆ. ಈ ಹಂತದಲ್ಲಿ ಹಲವರಿಗೆ ಸೋಂಕು ತಗುಲಿರುವ ಚಿಹ್ನೆಯೇ ಕಾಣದಿರಬಹುದು ಮತ್ತು ದೇಹದಲ್ಲಿ ರೋಗನಿರೋಧಕ ಶಕ್ತಿ ಇದ್ದವರು ಯಾವುದೇ ಔಷಧೋಪಚಾರ ಇಲ್ಲದೆಯೂ ಗುಣಮುಖರಾಗಬಹುದು.
ಮಧ್ಯಮ ಪ್ರಮಾಣದ ಸೋಂಕು
ಮಧ್ಯಮ ಪ್ರಮಾಣದ ಸೋಂಕಿತರ ಬಗ್ಗೆ ಹೆಚ್ಚಿನ ದತ್ತಾಂಶ ಲಭ್ಯವಿಲ್ಲ. ಈ ವರ್ಗದ ಸೋಂಕಿತರಲ್ಲಿ ಸಾಧಾರಣ ಪ್ರಕರಣದವರಲ್ಲಿದ್ದ ಲಕ್ಷಣದ ಜತೆಗೆ ತುಸು ಉಸಿರಾಟದ ಸಮಸ್ಯೆ ಇರುತ್ತದೆ ಮತ್ತು ಕೆಲಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಅಗತ್ಯ. ಸುಗಮ ಉಸಿರಾಟಕ್ಕೆ ಆಮ್ಲಜನಕ ಪಡೆಯುವುದು ಉತ್ತಮ.
ಸೋಂಕು ಮುಕ್ತರ ಗುರುತಿಸುವಿಕೆ ಹೇಗೆ?
ಜಾಗತಿಕ ಮಾನದಂಡ ಪ್ರಕಾರ 24 ತಾಸಿನ ಅವಧಿಯಲ್ಲಿ ಸತತ ಎರಡು ಪರೀಕ್ಷೆಗಳಲ್ಲಿ ನೆಗಟಿವ್ ಬಂದರೆ ಅಂತವರು ಸೋಂಕು ಮುಕ್ತರು. ಚೀನಾದಲ್ಲಿ ಮೂರು ಅಥವಾ ಅದಕ್ಕೂ ಹೆಚ್ಚು ದಿನ ಜ್ವರ ಇಲ್ಲದಿದ್ದರೆ ಮತ್ತು ಶ್ವಾಸಕೋಶದ ಸೋಂಕು ಗುಣವಾಗುತ್ತಿರುವ ಲಕ್ಷಣ ಕಂಡುಬಂದರೆ ಅಂಥವರನ್ನು ಸೋಂಕು ಮುಕ್ತರು ಎಂದು ಪರಿಗಣಿಸಲಾಗುತ್ತದೆ. ಅಮೆರಿಕದಲ್ಲಿ ಸೋಂಕು ಮುಕ್ತರಾದ ಮೇಲೂ ಒಂದು ವಾರ ನಿಗಾದಲ್ಲಿರಬೇಕು. ಭಾರತದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ಮೇಲೂ 14 ದಿನ ಸ್ವಯಂ ಕ್ವಾರಂಟೈನ್ ಕಡ್ಡಾಯ. ಕೋವಿಡ್-19ನಿಂದ ಮುಕ್ತರಾದರಲ್ಲಿ ತೂಕ ಇಳಿಕೆ, ನಿತ್ರಾಣ ಕೆಲವು ದಿನ ಇರುತ್ತದೆ. ಪೌಷ್ಟಿಕ ಆಹಾರ ಸೇವನೆ, ಆಯಾಸವಾಗುವ ಕೆಲಸದಿಂದ ದೂರವಿದ್ದು, ವಿಶ್ರಾಂತಿ ಪಡೆಯುವುದು ಉತ್ತಮ.
ತೀವ್ರ ಸ್ವರೂಪ
ಹೆಚ್ಚು ಜ್ವರ, ಅತಿಸಾರದಿಂದ ನಿರ್ಜಲೀಕರಣ, ಉಸಿರಾಟಕ್ಕೆ ತೀವ್ರ ಸಮಸ್ಯೆ ಇರುತ್ತದೆ. ಇಂಥವರಿಗೆ ಫ್ಲೂಯಿಡ್ ಔಷಧೋಪಚಾರ ಅಗತ್ಯ ಮತ್ತು ವೆಂಟಿಲೇಟರ್ ಅಗತ್ಯ. ವೆಂಟಿಲೇಟರ್ ತೆಗೆದಮೇಲೂ ಕೆಲವರಿಗೆ ಆಮ್ಲಜನಕ ಪೂರೈಕೆಯ ನಳಿಕೆ ಅಳವಡಿಸಬೇಕಾಗಬಹುದು.
ವೃದ್ಧರಲ್ಲಿ ಹೆಚ್ಚು
ಹೃದ್ರೋಗ, ರೋಗನಿರೋಧಕ ಶಕ್ತಿ ಕೊರತೆಯ ಕಾರಣ ತೀವ್ರ ತರಹದ ಉಸಿರಾಟದ ತೊಂದರೆ (ಎಆರ್​ಡಿಎಸ್) ಇದ್ದ ವೃದ್ಧರಿಗೆ ಕರೊನಾ ಸೋಂಕು ತಗುಲಿದರೆ ಪ್ರಾಣಾಪಾಯ ಸಾಧ್ಯತೆ ಹೆಚ್ಚು. ಭಾರತದಲ್ಲಿ ಈ ರೀತಿ ಲಕ್ಷಣವಿದ್ದ ಕೋವಿಡ್-19 ರೋಗಿಗಳ ಪೈಕಿ ಶೇ. 60 ಮಂದಿ ಅಸುನೀಗಿದ್ದಾರೆ.
ಮೊಸಳೆ ದವಡೆಗೆ ಸಿಲುಕಿದ್ದ ಮಗನನ್ನು ರಕ್ಷಿಸಲು ಪ್ರಾಣ ಪಣಕ್ಕಿಟ್ಟು ಕಾದಾಡಿದ ತಾಯಿ: ಮುಂದೇನಾಯ್ತು ಗೊತ್ತಾ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
