ನವದೆಹಲಿ:ಭಾರತದಲ್ಲಿ ಒಟ್ಟೂ ಕರೊನಾ ಪೀಡಿತರಲ್ಲಿ ಮೃತರ ಪ್ರಮಾಣ (ಕೇಸ್ ಫೆಟಾಲಿಟಿ) ಶೇ. 3.3 ಆಗಿದ್ದು, ಮೃತರ ಸಂಖ್ಯೆ ಒಂದು ಲಕ್ಷಕ್ಕೆ 0.09 ಆಗಿದೆ. ಕೋವಿಡ್-19 ನಿಯಂತ್ರಿಸುವಲ್ಲಿ ಭಾರಿ ಯಶಸ್ಸು ಗಳಿಸಿರುವ ದಕ್ಷಿಣ ಕೊರಿಯಾ ಮತ್ತು ಸಾಮೂಹಿಕ ಕ್ವಾರಂಟೈನ್​ನಂಥ ಕ್ರಮಕೈಗೊಂಡ ಚೀನಾ ಮೊದಲಾದ ದೇಶಗಳಿಗೆ ಹೋಲಿಸಿದಲ್ಲಿ ಭಾರತದ ನಿರ್ವಹಣೆ ಉತ್ತಮ ಸ್ಥಾನದಲ್ಲಿದೆ. ಆರಂಭಿಕ ಹಂತದಲ್ಲಿ ರೋಗ ಕಾಣಿಸಿಕೊಂಡ ದೇಶಗಳಲ್ಲಿ ದಕ್ಷಿಣ ಕೊರಿಯಾ ಕೂಡ ಒಂದು. ಆದರೆ ಅದು ಸೋಂಕಿತರ ಸಂಖ್ಯೆ 10,780ಕ್ಕೆ ಹಾಗೂ ಸಾವಿನ ಸಂಖ್ಯೆಯನ್ನು 250ಕ್ಕೆ ಸೀಮಿತಗೊಳಿಸುವಲ್ಲಿ ಯಶಸ್ಸು ಕಂಡಿತು. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕರೊನಾವೈರಸ್ ಸಂಪನ್ಮೂಲ ಕೇಂದ್ರ ಈ ಮಾಹಿತಿಗಳನ್ನು ದಾಖಲಿಸಿದೆ.
ಯುರೋಪ್ ಸ್ಥಿತಿ ಗಂಭೀರ
ಯುರೋಪ್​ನಲ್ಲಿ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಕರೊನಾ ಸಾವಿನ ಪ್ರಮಾಣ ಬೆಲ್ಜಿಯಂನಲ್ಲಿ ಅತಿ ಹೆಚ್ಚು, ಅಂದರೆ ಲಕ್ಷಕ್ಕೆ 67.44. ನಂತರದ ಸ್ಥಾನದಲ್ಲಿ ಸ್ಪೇನ್ (53), ಇಟಲಿ (47), ಬ್ರಿಟನ್ (42), ಫ್ರಾನ್ಸ್ (37) ಮತ್ತು ಅಮೆರಿಕ (20) ಇವೆ.
ಭಾರತದಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಳ
ದೇಶಾದ್ಯಂತ 419 ಪ್ರಯೋಗಾಲಯಗಳಲ್ಲಿ ಪ್ರತಿದಿನ ಕರೊನಾ 75,000 ಪರೀಕ್ಷೆ ಮಾಡಲಾಗುತ್ತಿದೆ. ಲ್ಯಾಬ್​ಗಳು ಕಳೆದ ಒಂದು ತಿಂಗಳಿಗೂ ಹೆಚ್ಚು ಅವಧಿಯಿಂದ ಹೆಚ್ಚು ಕಮ್ಮಿ ದಿನದ 24 ಗಂಟೆ ಕೆಲಸ ಮಾಡಿವೆ. ಪರೀಕ್ಷೆಗಳನ್ನು ನಡೆಸಲು ವೈದ್ಯಕೀಯ ಕಾಲೇಜುಗಳು, ಲ್ಯಾಬ್​ಗಳು ಮತ್ತು ಆಸ್ಪತ್ರೆಗಳಿಗೆ ತರಬೇತಿ ನೀಡಲು ಕೇಂದ್ರ ಸರ್ಕಾರ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್್ಸ), ಪಿಜಿಐ ಚಂಡೀಗಢ, ಸಿಎಂಸಿ ವೆಲ್ಲೂರು, ಜೆಐಪಿಎಂಇಆರ್ ಪುದುಚೇರಿ, ಎಸ್​ಜಿಪಿಐಎಂಎಸ್ ಲಖನೌ, ಏಮ್್ಸ ಭುವನೇಶ್ವರ ಮೊದಲಾದ ಪ್ರಮುಖ ಸಂಸ್ಥೆಗಳ ನೆರವನ್ನು ಒದಗಿಸಿದೆ.
2. ಚೀನಾದಲ್ಲಿ ಸಾವಿನ ಪ್ರಮಾಣ ಲಕ್ಷಕ್ಕೆ 0.33. ಭಾರತದಲ್ಲಿ 0.09.
3. ಭಾರತದ ಸಾವಿನ ದರ ಎಲ್ಲ ದೊಡ್ಡ ದೇಶಗಳ ಪೈಕಿ ಅತ್ಯಂತ ಕಡಿಮೆ.
4. ಚೀನಾದ ಸೋಂಕಿತರ ಅಧಿಕೃತ ಸಂಖ್ಯೆ 83,959. ಬಲಿಯಾದವರು 4,637. ಅಂದರೆ ಸಾವಿನ ದರ 5.5%.
5. ಭಾರತದ ಒಟ್ಟು ಸೋಂಕಿತರು 37,257, ಮೃತರು 1,223. ಸಾವಿನ ದರ 3.3%

ತುಂಬಾ ಆಸೆಯಿಂದ ಪ್ರವಾಸಕ್ಕೆ ಹೋದ ನವದಂಪತಿಗೆ ಹೀಗಾಗಬಾರದಿತ್ತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
