ಬೆಂಗಳೂರು:ಎದುರಿಗೆ ಬರುವ ವೈರಿಗಳನ್ನು ಸೆದೆಬಡಿಯಲು ಶಸ್ತ್ರಾಸ್ತ್ರಗಳು ಹೇಗೆ ಅವಶ್ಯಕವೋ, ಕಣ್ಣಿಗೆ ಕಾಣದ ವೈರಸ್​ ಎಂಬ ಮಹಾಮಾರಿಯನ್ನು ಮಣಿಸಲು ನಮ್ಮ ದೇಹದೊಳಗಿನ ರೋಗ ನಿರೋಧಕ ಶಕ್ತಿಯು ತುಂಬಾ ಮುಖ್ಯ. ಹೀಗಾಗಿ ಅದನ್ನು ವೃದ್ಧಿಪಡಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದಿಷ್ಟು ಉಪಯುಕ್ತ ಸಲಹೆಯನ್ನು ನೀಡಿದ್ದು, ಅದನ್ನು ಅನುಸಿರಿಸಿದರೆ ಆರೋಗ್ಯ ಬಿಕ್ಕಟ್ಟ ಸೃಷ್ಟಿಸಿರುವ ಕಿಲ್ಲರ್​ ಕರೊನಾ ವಿರುದ್ಧದ ಹೋರಾಟದಲ್ಲಿ ಖಂಡಿತವಾಗಿ ಜಯಗಳಿಸಬಹುದಾಗಿದೆ.
ಕೋವಿಡ್​-19ನಂತಹ ಸಂದಿಗ್ಧ ಸಮಯದಲ್ಲಿ ಆಯುರ್ವೇದದ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಆಯುರ್ವೇದವು ಪ್ರಕೃತಿಯ ಕೊಡುಗೆಯಾಗಿದ್ದು, ದೇಹ ಸ್ವಾಸ್ಥ್ಯ ಕಾಪಾಡಲು ನೆರವಾಗಲಿದೆ. ಆಯುರ್ವೇದವು ಪ್ರಮುಖ ಕಲ್ಪನೆಗಳಾದ “ದಿನ ಚರ್ಯ” ಮತ್ತು “ಋತು ಚರ್ಯ”ದ ಮೇಲೆ ಅವಲಂಬಿತವಾಗಿದೆ.ಈ ನಿಟ್ಟಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಆಯುಷ್​ ಸಚಿವಾಲಯವು ಕೆಲವು ಸಲಹೆಗಳನ್ನು ನೀಡಿದೆ ಎಂದು ಸರ್ಕಾರ ಹೇಳಿದೆ.
ದೇಹದ ನೈಸರ್ಗಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಾಮಾನ್ಯ ವಿಧಾನಗಳು1. ದಿನವಿಡಿ ಬೆಚ್ಚಗಿನ ನೀರನ್ನೇ ಕುಡಿಯುವುದು.2. ದಿನವು ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಮಾಡುವ ಅಭ್ಯಾಸ ರೂಢಿಸಿಕೊಳ್ಳುವುದು.3. ಅಡುಗೆಯಲ್ಲಿ ಅರಿಶಿಣ, ಜೀರಿಗೆ, ಧನಿಯಾ ಮತ್ತು ಬೆಳ್ಳುಳ್ಳಿ ಬಳಕೆಯನ್ನು ಹೆಚ್ಚಿಸಿಕೊಳ್ಳುವುದು.
ಸರಳ ಆಯುರ್ವೇದ ವಿಧಾನಗಳು1. ಪ್ರತಿದಿನ ಮುಂಜಾನೆ ಮತ್ತು ಸಂಜೆ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆ, ಇಲ್ಲ ತುಪ್ಪವನ್ನು ಮೂಗಿನ ಹೊಳ್ಳೆಗಳಿಗೆ ಹಚ್ಚಿಕೊಳ್ಳಿ2. ಒಂದು ಚಮಚ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಾಯಲ್ಲಿ ಹಾಕಿಕೊಳ್ಳಿ. ಅದನ್ನು ಕುಡಿಯಬೇಡಿ. 2 ರಿಂದ 3 ನಿಮಿಷದ ಬಳಿಕ ಬಿಸಿ ನೀರಿಂದ ಬಾಯಿ ಮುಕ್ಕಳಿಸಿ. ಹೀಗೆ ದಿನಕ್ಕೆ ಒಂದು ಅಥವಾ ಎರಡು ಸಲ ಮಾಡಬಹುದು.
ಗಂಟಲು ಕೆರೆತ ಅಥವಾ ಒಣಕೆಮ್ಮು ಇದ್ದರೆ1. ದಿನಕ್ಕೊಮ್ಮೆ ಪುದೀನಾ ಅಥವಾ ಅಜವಾನದ ಹಬೆ ಸೇವಿಸಬೇಕು.2. ಲವಂಗದ ಪುಡಿ ಮತ್ತು ಸಕ್ಕರೆ ಅಥವಾ ಜೇನುತುಪ್ಪದ ಮಿಶ್ರಣವನ್ನು ದಿನಕ್ಕೆ ಎರಡ್ಮೂರು ಬಾರಿ ಸೇವಿಸಬೇಕು.(ಗಂಟಲು ಕೆರೆತ ಅಥವಾ ಒಣಕೆಮ್ಮುವಿನ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ)
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕ್ರಮಗಳು1. ಪ್ರತಿದಿನ ಬೆಳಗ್ಗೆ ಒಂದು ಚಮಚದಲ್ಲಿ 10 ಗ್ರಾಂ ನಷ್ಟು ಚವನ್​ ಪ್ರಾಶ ಸೇವಿಸಿ.2. ದಿನಕ್ಕೆರಡು ಬಾರಿ ತುಳಸಿ, ದಾಲ್ಚಿನ್ನಿ, ಕರಿಮೆಣಸು, ಶುಂಠಿ, ಒಣದ್ರಾಕ್ಷಿಯುಕ್ತ ಚಹಾ ಸೇವಿಸಿ. ರುಚಿಗಾಗಿ ಬೆಲ್ಲ, ನಿಂಬೆ ರಸವನ್ನು ಸೇರಿಸಿಕೊಳ್ಳಬಹುದು.3. ಅರ್ಧ ಚಮಚ ಅರಿಶಿಣ ಪುಡಿಯನ್ನು 150 ಎಂಎಲ್​ ಬಿಸಿ ಹಾಲಿನೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಸೇವಿಸಿ.
ಯುವ ಸಮೂಹವೇ ಎಚ್ಚರ… ಬೇಡವೇ ಬೇಡ ಕರೊನಾದೆಡೆಗಿನ ತಾತ್ಸಾರ: ಸ್ಪೋಟಕ ಮಾಹಿತಿ ನೀಡಿದ ಕೇಂದ್ರ ಸರ್ಕಾರ!

ಚೀನಾದ ನಾಯಿ ಮಾಂಸ ಇಂಡಸ್ಟ್ರಿಯ ಕಠೋರ ಸತ್ಯ ಬಿಚ್ಚಿಟ್ಟ ರೆಸ್ಟೋರೆಂಟ್​ ಮಾಲೀಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 12 =
Remember me
