ಕರೊನಾ ವೈರಸ್​ ಕುರಿತಂತೆ ಇಲ್ಲ ಸಲ್ಲದ ವದಂತಿಗಳು ಹಬ್ಬುತ್ತಿವೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಹಲವಾರು ಸಂಶಯಗಳು, ಪ್ರಶ್ನೆಗಳಿವೆ. ಈ ಮಹಾಮಾರಿ ಕುರಿತಂತೆ ಸಾರ್ವಜನಿಕರಲ್ಲಿ ಮೂಡಬಹುದಾದ ಕೆಲವೊಂದು ಪ್ರಶ್ನೆಗಳಿಗೆ ಇಲ್ಲಿ ಉತ್ತರಿಸಲಾಗಿದೆ.
# ಕರೊನಾ ವೈರಸ್​ ಹರಡದಂತೆ ನಾನೇನು ಮಾಡಬಹುದು?ಶುಭಾಶಯ ಕೋರುವಾಗ ಶೇಕ್​ಹ್ಯಾಂಡ್​ ಮಾಡುವುದು, ಅಪ್ಪಿಕೊಳ್ಳುವುದು ಇತ್ಯಾದಿ ದೈಹಿಕ ಸಂಪರ್ಕ ಬೇಡ. ನಮಸ್ತೆ ಎನ್ನುವ ಮೂಲಕ, ಸ್ಮೈಲ್​ ಮಾಡುವ ಮೂಲಕ ಇಲ್ಲವೇ ತಲೆ ಬಾಗಿಸುವ ಮೂಲಕ ಪರಸ್ಪರ ಶುಭಾಶಯ ಕೋರಬಹುದು.
# ಶೇಕ್​ ಹ್ಯಾಂಡ್​ ಮಾಡಿದರೆ ವೈರಸ್​ ಹೇಗೆ ಹರಡುತ್ತದೆ?ಶೇಕ್​ ಹ್ಯಾಂಡ್​ ಮಾಡಿದಾಗ ನಿಮ್ಮ ದೇಹದಲ್ಲಿರುವ ವೈರಸ್ ಇನ್ನೊಬ್ಬರ ಕೈಗೆ ಅಂಟಿಕೊಳ್ಳುತ್ತದೆ. ಆಗ ಅವರು ಕೈ, ಕಣ್ಣು ಇಲ್ಲವೇ ಬಾಯಿಯನ್ನು ಮುಟ್ಟಿಕೊಂಡಾಗ ಇದು ಅದರ ಮೂಲಕ ಅವರ ದೇಹದೊಖಳಕ್ಕೆ ಪ್ರವೇಶಿಸುತ್ತದೆ.
# ಸಾರ್ವಜನಿಕ ಸ್ಥಳಗಳಿಗೆ ಹೋಗುವಾಗ ರಬ್ಬರ್​ ಗ್ಲೌಸ್​ ಹಾಕಿಕೊಂಡರೆ ಇನ್​ಫೆಕ್ಷನ್​ ಆಗುವುದನ್ನು ತಡೆಗಟ್ಟಬಹುದೆ?ಇಲ್ಲ. ಬರಿಯಕೈಯನ್ನು ಆಗಾಗ್ಗೆ ತೊಳೆಯುವುದರಿಂದ ಮಾತ್ರ ವೈರಸ್​ ಸೋಂಕು ತಗುಲದಂತೆ ತಡೆಗಟ್ಟಹುದು. ರಬ್ಬರ್​ ಗ್ಲೌಸ್​ ಹಾಕಿಕೊಂಡರೆ ಅದರಿಂದಲೇ ನೀವು ನಿಮ್ಮ ಕಣ್ಣು, ಮೂಗು, ಬಾಯಿಯನ್ನು ಮುಟ್ಟಿಕೊಳ್ಳುವ ಸಾದ್ಯತೆ ಇರುವ ಕಾರಣ, ಅದರಿಂದ ಯಾವುದೇ ಪ್ರಯೋಜನವಿಲ್ಲ.
# ನಾನೇಕೆ ಸೋಪಿನಿಂದ ಕೈತೊಳೆಯಬೇಕು?ಕೈಯಿಂದಲೇ ಹೆಚ್ಚಾಗಿ ಕರೊನಾ ವೈರಸ್​ ಹರಡುವ ಸಾಧ್ಯತೆ ಇರುವ ಕಾರಣ, ಆಲ್ಕೋಬಾಲ್​ ಅಂಶವಿರುವ ಸೋಪಿನಿಂದ ಕೈಯನ್ನು ತೊಳೆದರೆ ಅದರಲ್ಲಿರುವ ವೈರಸ್​ ನಾಶವಾಗುವ ಸಾಧ್ಯತೆ ಇದೆ.
#ಕೆಮ್ಮುವ ಅಥವಾ ಸೀನುವ ವ್ಯಕ್ತಿಯಿಂದ ನಾನೆಷ್ಟು ದೂರದಲ್ಲಿ ಇರಬೇಕು? ಏಕೆ?ಒಂದು ಮೀಟರ್​ ಅಂದರೆ ಮೂರು ಅಡಿ ದೂರದಲ್ಲಿ ಇರಬೇಕು. ಏಕೆಂದರೆ, ಸೀನುವಾಗ ಅಥವಾ ಕೆಮ್ಮುವಾಗ ಅವರ ಬಾಯಿಯಿಂದ ಇಲ್ಲವೇ ಮೂಗಿನಿಂದ ಬಿಂದು ರೂಪದಲ್ಲಿ ದ್ರವವು ಹೊರಕ್ಕೆ ಬರುತ್ತದೆ. ಅದರಲ್ಲಿ ವೈರಸ್​ ಇರುವ ಸಾಧ್ಯತೆ ಇದೆ. ಒಂದು ವೇಳೆ ನೀವು ಸಮೀಪದಲ್ಲಿ ಇದ್ದರೆ, ಆ ದ್ರವವನ್ನು ನೀವು ಉಸಿರಾಡುವ ಸಾಧ್ಯತೆ ಇದೆ. ಇದರಿಂದ ಅದು ನಿಮ್ಮ ದೇಹದೊಳಕ್ಕೂ ಪ್ರವೇಶ ಮಾಡಬಲ್ಲುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 19 =
Remember me
