ರಾಂಪುರ:ಕರೊನಾ ವೈರಸ್ ಸೋಂಕು ನಿವಾರಣೆಗೆಂದು ಸಿಂಪಡಿಸುತ್ತಿದ್ದ ರಾಸಾಯನಿಕ ತಮ್ಮ ಮೇಲೆ ಬಿತ್ತೆಂದು ಕುಪಿತರಾದ ಗುಂಪು, ದ್ರಾವಣ ಸಿಂಪಡಿಸುತ್ತಿದ್ದ ಕಾರ್ವಿುಕನ ಮೇಲೆ ನಡೆಸಿದೆ ಮತ್ತು ಆ ದ್ರಾವಣವನ್ನು ಬಲವಂತವಾಗಿ ಕುಡಿಸಿದೆ. ಇದರಿಂದ ಕಾರ್ವಿುಕ ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ ಮೋಟಿಪುರ ಹಳ್ಳಿಯಲ್ಲಿ ಕುನ್ವಾರ್ ಪಾಲ್ ಏಪ್ರಿಲ್ 14ರಂದು ಸೋಂಕು ನಿವಾರಕ ಸಿಂಪಡಿಸುತ್ತಿದ್ದರು. ಈ ಸಂದರ್ಭದಲ್ಲಿ ಇಂದ್ರಪಾಲ್ ಎಂಬುವರ ಕಾಲಿನ ಮೇಲೆ ರೋಗನಿರೋಧಕ ಬಿತ್ತು. ಇದರಿಂದ ಕುಪಿತಗೊಂಡ ಇಂದ್ರಪಾಲ್ ತನ್ನ ಗೆಳೆಯರೊಂದಿಗೆ ಕಾರ್ವಿುಕನ ಮೇಲೆ ಹಲ್ಲೆ ನಡೆಸಿ, ಸಿಟ್ಟಿನಿಂದ ಸೋಂಕು ನಿವಾರಕವನ್ನು ಯುವಕನ ಬಾಯಿಗೆ ಸಿಂಪಡಿಸಿದ್ದ. ಅಸ್ವಸ್ಥನಾದ ಕಾರ್ವಿುಕನನ್ನು ಸ್ಥಳೀಯ ದವಾಖಾನೆಯಿಂದ ಮೊರದಾಬಾದ್​ನ ಆಸ್ಪತ್ರೆಗೆ ಸ್ಥಳಾಂತರಿಸಲಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಎರಡು ದಿನದ ಹಿಂದೆ ಮೃತನಾಗಿದ್ದಾನೆ.
ಇಂದ್ರಪಾಲ್ ಹಾಗೂ ಆತನ ಐವರು ಸ್ನೇಹಿತರ ವಿರುದ್ಧ ದೂರು ದಾಖಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.
ವಿವಿಧ ಯೋಜನೆಗಳಡಿ 36,659 ಕೋಟಿ ರೂ. ನೇರ ನಗದು ವರ್ಗಾವಣೆ ಮಾಡಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 12 =
Remember me
