ಮುಂಬೈ:ತಾಪಮಾನ ಹೆಚ್ಚಳದಿಂದಾಗಿ ಕರೊನಾ ವೈರಸ್ ಸಾಯುತ್ತದೆಯೇ? ವೈರಸ್ ಪಸರಿಸುವಿಕೆ ನಿಯಂತ್ರಣಕ್ಕೆ ಬರುತ್ತದೆಯೇ?
ಈ ಕುರಿತು ವಿಶ್ವದಾದ್ಯಂತ ಹಲವು ಚರ್ಚೆಗಳು ನಡೆಯುತ್ತಿವೆ. ವಿಶ್ವದ ಹಲವು ತಜ್ಞರು, ವಿಜ್ಞಾನಿಗಳೂ ಈ ಬಗ್ಗೆ ಅನೇಕ ವಾದಗಳನ್ನು ಮಂಡಿಸಿದ್ದಾರೆ. ಇದೀಗ ಮಹಾರಾಷ್ಟ್ರದ ನಾಗ್ಪುರದ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಎನ್‌ಇಇಆರ್‌ಐ) ಸಹ ಈ ಕುರಿತು ಸಂಶೋಧನೆ ನಡೆಸಿದ್ದು, ತಾಪಮಾನ ಹೆಚ್ಚಳದಿಂದಾಗಿ ಕರೊನಾ ವೈರಸ್ ನಿಯಂತ್ರಣಕ್ಕೆ ಬರಲಿದೆ ಎಂದು ತಿಳಿಸಿದೆ.
ಕರೊನಾ ಮಾಹಿತಿ ಹಾಗೂ ಹವಾಮಾನ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಸರಾಸರಿ ನೈಜ ತಾಪಮಾನ ಮತ್ತು ಸಾಪೇಕ್ಷ ಆರ್ದ್ರತೆ ಹಾಗೂ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿನ ಕರೊನಾ ಪ್ರಕರಣಗಳ ಏರಿಕೆಯ ನಡುವಿರುವ ಸಂಬಂಧವನ್ನು ಎನ್‌ಇಇಆರ್‌ಐ ಅಧ್ಯಯನ ನಡೆಸಿದೆ.
ಇದರ ಪ್ರಕಾರ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಹಗಲಿನ ವೇಳೆಯ ಸರಾಸರಿ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದ್ದಾಗ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ತಿಳಿದುಬಂದಿದೆ.
ತಾಪಮಾನ ಮತ್ತು ಕರೊನಾ ಸೋಂಕಿನ ನಡುವೆ ಶೇ. 85ರಷ್ಟು ಬಲವಾದ ಸಂಬಂಧವಿದೆ ಎಂದು ಎನ್‌ಇಇಆರ್‌ಐ ಕಂಡುಹಿಡಿದಿದೆ. ದೇಶದ ಕೆಲ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಳವಾಗುತ್ತಿರುವುದು ಹಾಗೂ ಕರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದರ ಬಗ್ಗೆ ಈ ಅಧ್ಯಯನ ನಡೆಸಲಾಗಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳನ್ನು ಪ್ರಮುಖವಾಗಿ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಹೀಗಾಗಿ ಭಾರತದಲ್ಲಿ ಕರೊನಾ ಅತಿ ವೇಗವಾಗಿ ಹರಡುವುದನ್ನು ತಾಪಮಾನ ಕಡಿಮೆಗೊಳಿಸಿದೆ.
ಆದಾಗ್ಯೂ ಕರೊನಾ ಮುಕ್ತವಾಗಿರಲು ಸಾಮಾಜಿಕ ಅಂತರದ ಪಾಲನೆ ಬಹು ಮುಖ್ಯವಾಗಿದೆ ಎಂದು ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಹೇಳಿದೆ. ಸೂರ್ಯನ ಶಾಖ, ತಾಪಮಾನ ಹಾಗೂ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕರೊನಾ ವಿರುದ್ಧ ಪ್ರಬಲ ಪ್ರತಿರೋಧ ತೋರಿಸಿದೆ ಎಂದು ಈಗಾಗಲೇ ಕೆಲ ಅಧ್ಯಯನಗಳೂ ಹೇಳಿವೆ.
ಕರೊನಾ ಮೇಲೆ ಲಿಪಿಡ್ ಹೊದಿಕೆ ಇರುತ್ತದೆ. ಚಳಿ ವಾತಾವರಣ ಹೆಚ್ಚಾದಾಗ ವೈರಸ್ ಮೇಲಿನ ಲಿಪಿಡ್ ಗಟ್ಟಿಯಾಗಿ ಹೊದಿಕೆ ರೀತಿಯ ಪದರ ಉಂಟಾಗುತ್ತದೆ. ಹೀಗಾಗಿ ಬಿಸಿಲಿಗಿಂತ ಚಳಿಯಲ್ಲಿ ಕರೊನಾ ಹೆಚ್ಚು ಸಕ್ರಿಯವಾಗಿರುತ್ತದೆ ಎನ್ನಲಾಗಿದೆ.
ಉಷ್ಣ ತಾಪಮಾನದಲ್ಲಿ ಕರೊನಾ ಪಸರಿಸುವಿಕೆ ವೇಗ ತಗ್ಗಲಿದೆ ಎನ್ನಲಾಗಿದೆಯಾದರೂ, ಇದರಿಂದ ಕರೊನಾ ಮುಕ್ತವಾಗಲು ಸಾಧ್ಯವಿಲ್ಲ. ಈ ಮಹಾಮಾರಿ ವಿರುದ್ಧ ಇನ್ನೂ ಕೂಡ ಔಷಧ ಅಥವಾ ಲಸಿಕೆ ಸಿದ್ಧಪಡಿಸಲಾಗಿಲ್ಲ. ಅತೀ ಹೆಚ್ಚು ತಾಪಮಾನ ಹೊಂದಿರುವ ದೇಶಗಳಲ್ಲೂ ಸಹ ಕರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ.(ಏಜೆನ್ಸೀಸ್​)
ಕರೊನಾ ವಿರುದ್ಧ ಹೋರಾಡುತ್ತಿರುವ ಜರ್ಮನಿ ವೈದ್ಯರು ಬೆತ್ತಲೆ ಸೆಲ್ಫಿ ತೆಗೆದು ಜಾಲತಾಣದಲ್ಲಿ ಹರಿಬಿಟ್ಟಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + nine =
Remember me
