ನವದೆಹಲಿ:ಕೋವಿಡ್​-19 ಹರಡುವಿಕೆ ನಿಯಂತ್ರಿಸಲು ಭಾರತ ಮೇ ತಿಂಗಳಿಂದ ಪ್ರತಿ ತಿಂಗಳು 10 ಲಕ್ಷ ಟೆಸ್ಟಿಂಗ್​ ಕಿಟ್​ಗಳನ್ನು ಉತ್ಪಾದಿಸಲು ಮುಂದಾಗಿದೆ.
ತಿಂಗಳಿಗೆ 10 ಲಕ್ಷ ಆರ್​ಟಿ & ಪಿಸಿಆರ್​ ಪರೀಕ್ಷಾ ಕಿಟ್​ ಹಾಗೂ ಪ್ರತಿಕಾಯ ಪತ್ತೆಹಚ್ಚುವ ಪರೀಕ್ಷಾ ಕಿಟ್​ಗಳನ್ನು ತಯಾರಿವ ಯೋಜನೆ ಹೊಂದಿದೆ.
ಈ ಸಾಂಕ್ರಾಮಿಕ ರೋಗದ ಉಲ್ಬಣದಿಂದಾಗಿ ಜಾಗತಿಕ ಮಟ್ಟದಲ್ಲಿ ಆಮದು ಬೇಡಿಕೆ ಗಗನಕ್ಕೇರುತ್ತಿದ್ದು, ಇತರ ದೇಶಗಳ ಮೇಲೆ ಅವಲಂಬನೆಯನ್ನು ಕಡಿಮೆಗೊಳಿಸಲು ಭಾರತ ಈ ಕ್ರಮಕ್ಕೆ ಮುಂದಾಗಿದ್ದು, ರೋಗ ಪತ್ತೆ, ಚಿಕಿತ್ಸೆ ಹಾಗೂ ಲಸಿಕೆ ಬಗ್ಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇಂದ್ರ ಸೇರಿ ವಿವಿಧ ರಾಜ್ಯಗಳು ಕೋವಿಡ್​-19 ಕೇಂದ್ರ ಹಾಗೂ ಸೌಲಭ್ಯಗಳಿಗೆ ಗಮನಾರ್ಹ ಕಾರ್ಯನಿರ್ವಹಿಸಿವೆ. ಶುಕ್ರವಾರದವರೆಗೆ 1,73,746 ಐಸೋಲೇಷನ್​ ಹಾಸಿಗೆಗಳ ಕೇಂದ್ರಗಳು ಮತ್ತು 21,806 ಐಸಿಯು ಹಾಸಿಗೆಗಳ ಕೇಂದ್ರಗಳು ಸೇರಿ ಒಟ್ಟು 1919 ಕೋವಿಡ್​-19 ಘಟಕಗಳು ದೇಶಾದ್ಯಂತ ಗುರುತಿಸಲ್ಪಟ್ಟಿವೆ. ಇವುಗಳ ಪೈಕಿ ತೃತೀಯ ಆರೋಗ್ಯ ಸೇವೆಯ ಅಗತ್ಯವಿರುವ ರೋಗಿಗಳಿಗಾಗಿ 672 ವಿಶೇಷ ಕೋವಿಡ್​ ಆಸ್ಪತ್ರೆಗಳು ಮತ್ತು ಮಧ್ಯಮ ಪ್ರಮಾಣದಲ್ಲಿ ಕೋವಿಡ್​ -19 ಲಕ್ಷಣಗಳಿರುವ ರೋಗಿಗಳಿಗೆ (ಗಂಭೀರವಲ್ಲದ) 1247 ಆರೋಗ್ಯ ರಕ್ಷಣಾ ಕೇಂದ್ರಗಳು ಸೇರಿವೆ.
ಗುರುವಾರ ಚೀನಾದಿಂದ ಪೂರೈಕೆಯಾದ ಐದು ಲಕ್ಷ ಪ್ರತಿಕಾಯ ಪರೀಕ್ಷಾ ಕಿಟ್​ಗಳನ್ನು ತುರ್ತು ಅಗತ್ಯವಿರುವ ಜಿಲ್ಲೆಗಳಿಗೆ ಆದ್ಯತೆಯ ಮೇರೆಗೆ ಹಂಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)
ಉತ್ತರ ಪ್ರದೇಶದ ಐದು ಜಿಲ್ಲೆಗಳು ಮಹಾಮಾರಿ ಕರೊನಾ ಮುಕ್ತವೆಂದು ಘೋಷಣೆ!

ದೂರದಿಂದಲೇ ಮಗಳನ್ನು ನೋಡಿ ಕಣ್ಣೀರು ಹಾಕಿದ್ದ ನರ್ಸ್​ ಸುಗಂಧಾ ಮಗಳನ್ನು ಭೇಟಿಯಾದ ಕ್ಷಣ ಹೀಗಿತ್ತು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + seventeen =
Remember me
