ನವದೆಹಲಿ:ಕರೊನಾ ವೈರಸ್​ನಿಂದಾಗಿ ದೇಶದಲ್ಲಿ ಮೃತಪಟ್ಟವರ ಸಂಖ್ಯೆ ಒಂದು ಸಾವಿರ ಗಡಿ ದಾಟಿದೆ. ಕಳೆದ 24 ತಾಸಿನಲ್ಲಿ 89 ಜನರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 1,074ಕ್ಕೆ ಏರಿಕೆಯಾಗಿದೆ. ಆದಾಗ್ಯೂ ಭಾರತದಲ್ಲಿ ಕರೊನಾದಿಂದಾಗಿ ಸಾವನ್ನಪು್ಪತ್ತಿರುವವರ ಪ್ರಮಾಣ ಪ್ರತಿ 10 ಲಕ್ಷಕ್ಕೆ 0.76 ಇದೆ. ಅಮೆರಿಕಕ್ಕೆ ಹೋಲಿಸಿದರೆ ಅಲ್ಲಿನ ಮರಣ ಪ್ರಮಾಣ 175ಕ್ಕಿಂತಲೂ ಹೆಚ್ಚಿದೆ.
ದೇಶದಲ್ಲಿ ಕಳೆದ 24 ತಾಸಿನ ಅಂತರದಲ್ಲಿ 2,251 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 31,656ಕ್ಕೆ ಏರಿದೆ. ದೇಶದಲ್ಲಿ ಈವರೆಗೆ 7,835 ಜನರು ಗುಣಮುಖರಾಗಿದ್ದು, ಸದ್ಯ 32,882 ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 1,593 ಜನರು ಗುಣಮುಖರಾಗಿದ್ದು, ತಮಿಳುನಾಡಿನಲ್ಲಿ 1,210, ದೆಹಲಿಯಲ್ಲಿ 1,210, ರಾಜಸ್ಥಾನದಲ್ಲಿ 781 ಜನರು ಗುಣಮುಖರಾಗಿದ್ದಾರೆ. ಮಹಾರಾಷ್ಟ್ರವೊಂದರಲ್ಲೇ ಸುಮಾರು 430 ಜನರು ಸಾವನ್ನಪ್ಪಿದ್ದು, ದೇಶದ ಒಟ್ಟು ಸಾವಿನ ಸಂಖ್ಯೆಯಲ್ಲಿ ಶೇ. 40 ಪ್ರಮಾಣವನ್ನು ಮಹಾರಾಷ್ಟ್ರ ಹೊಂದಿದೆ. ನಂತರದ ಸ್ಥಾನದಲ್ಲಿ ಗುಜರಾತ್ ಇದ್ದು, ಅಲ್ಲಿ 197 ಜನರು ಸಾವನ್ನಪ್ಪಿದ್ದಾರೆ.
ಮಧ್ಯಪ್ರದೇಶದಲ್ಲಿ 130 ಜನರು ಸಾವನ್ನಪ್ಪಿದ್ದಾರೆ. ದೆಹಲಿ ಮತ್ತು ರಾಜಸ್ಥಾನದಲ್ಲಿ ತಲಾ ಸುಮಾರು 50 ಮಂದಿ ಮೃತರಾಗಿದ್ದಾರೆ. ಸೋಂಕಿತರ ಸಂಖ್ಯೆಯಲ್ಲೂ ಮಹಾರಾಷ್ಟ್ರ ಮೊದಲಿದ್ದು, ಅಲ್ಲಿ 9,900ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಗುಜರಾತ್​ನಲ್ಲಿ 4,000, ದೆಹಲಿಯಲ್ಲಿ 3,300, ಮಧ್ಯಪ್ರದೇಶದಲ್ಲಿ 2,500, ರಾಜಸ್ಥಾನದಲ್ಲಿ 2,300 ಹಾಗೂ ತಮಿಳುನಾಡಿನಲ್ಲಿ 2,100 ಪ್ರಕರಣಗಳು ವರದಿಯಾಗಿವೆ.
ಕೇಂದ್ರ ನೌಕರರಿಗೆ ಆರೋಗ್ಯ ಸೇತು ಬಳಕೆ ಕಡ್ಡಾಯ
ಕೇಂದ್ರ ಸರ್ಕಾರಿ ನೌಕರರು ಆರೋಗ್ಯ ಸೇತು ಆಪ್​ನ್ನು ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ಸರ್ಕಾರ ಆದೇಶಿಸಿದೆ. ನೌಕರರು ಕಚೇರಿಗೆ ಬರುವ ಮೊದಲು ಆಪ್​ನಲ್ಲಿ ತಮ್ಮ ಸುರಕ್ಷತೆಯ ಬಗ್ಗೆ ಪರೀಕ್ಷಿಸಿಕೊಳ್ಳಬೇಕು. ಸುರಕ್ಷಿತ ಮತ್ತು ಕಡಿಮೆ ತೊಂದರೆ ಇದ್ದರೆ ಮಾತ್ರವೇ ಕೆಲಸಕ್ಕೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಪ್ರಧಾನಿ ಕಚೇರಿ, ಎಲ್ಲಾ ಸಚಿವಾಲಯಗಳು, ಇಲಾಖೆಗಳಿಗೆ ಈ ಆದೇಶದ ಪ್ರತಿ ಕಳುಹಿಸಲಾಗಿದ್ದು, ಇಲಾಖೆಗಳು ಮತ್ತು ಸಚಿವಾಲಯಗಳು ತಮ್ಮ ಆಡಳಿತ ವರ್ಗದಲ್ಲಿ ಈ ರೀತಿಯ ಆದೇಶ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ. ಯಾವ ವ್ಯಕ್ತಿಗೆ ಆರೋಗ್ಯ ಸೇತು ಆಪ್ ಹೆಚ್ಚಿನ ತೊಂದರೆಯಲ್ಲಿದ್ದೀರಿ ಮತ್ತು ಮಧ್ಯಮ ತೊಂದರೆಯಲ್ಲಿದ್ದೀರಿ ಎಂದು ತೋರಿಸುತ್ತದೆಯೋ ಅವರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕೆಂದು ಹೇಳಲಾಗಿದೆ.
ಪುಷ್ಪಗಳಿಂದ ಮನಸೂರೆಗೊಂಡ ಕೇದಾರನಾಥ- ಮೋದಿ ಹೆಸರಲ್ಲಿ ಮೊದಲ ಪೂಜೆ: ಭಕ್ತರಿಗೆ ಸಿಗಲಿದೆಯೇ ದರುಶನ ಭಾಗ್ಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
