ನವದೆಹಲಿ:ಭಾರತದ ಪೆಟ್ರೋಪಸ್ (ಇಂಡಿಯನ್ ಫ್ಲೈಯಿಂಗ್ ಫಾಕ್ಸ್) ಮತ್ತು ರೌಸೆಟ್ಟಸ್ (ಓಲ್ಡ್ ವರ್ಲ್ಡ್ ಫ್ರೂಟ್ ಬ್ಯಾಟ್) ಪ್ರಭೇದದ ಬಾವಲಿಗಳಲ್ಲಿ ಬೀಟಾಕರೊನಾವೈರಸ್ ಇರುವುದನ್ನು ಕೇರಳ ಮತ್ತು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಮೊದಲ ಬಾರಿಗೆ ಪತ್ತೆ ಮಾಡಿದೆ. ಇದು ಕೋವಿಡ್-19 ವೈರಾಣುವಿನ ಮೂಲವಾದ ಸಾರ್ಸ್-ಕೋವಿ-2 ಸೋಂಕಿಗಿಂತ ಭಿನ್ನವಾಗಿದೆ ಎಂದು ಸಂಶೋಧನಾ ತಂಡ ಹೇಳಿದೆ.
ಕೇರಳ, ಹಿಮಾಚಲ ಪ್ರದೇಶ, ಪುದುಚೆರಿ ಮತ್ತು ತಮಿಳುನಾಡಿನ ಬಾವಲಿಗಳಿಂದ ಸಂಗ್ರಹಿಸಿದ್ದ ಮಾದರಿಯಲ್ಲಿ (ಸ್ಯಾಂಪಲ್) ಕರೊನಾವೈರಸ್ ಪಾಸಿಟಿವ್ ಬಂದಿದೆ. ಹಿಂದೆ ಕೇರಳದಲ್ಲಿ ಕಾಣಿಸಿಕೊಂಡ ಮಾರಣಾಂತಿಕ ನಿಫಾ ಸೋಂಕಿಗೂ ಪೆಟ್ರೋಪಸ್ ಜಾತಿಯ ಬಾವಲಿಗಳು ಕಾರಣವಾಗಿದ್ದವು ಎಂದು ಸಂಶೋಧನಾ ತಂಡ ತಿಳಿಸಿದೆ. ಈ ಅಧ್ಯಯನವು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ಪ್ರಕಾಶನದ ಭಾರತೀಯ ವೈದ್ಯಕೀಯ ಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.
586 ಮಾದರಿ ಸಂಗ್ರಹ
ಪೆಟ್ರೋಪಸ್ ಮತ್ತು ರೌಸೆಟ್ಟಸ್ ಪ್ರಭೇದದ ಬಾವಲಿಗಳ ಸ್ರಾವದ 586 ಸ್ಯಾಂಪಲ್​ಗಳನ್ನು ಕೇರಳ, ಕರ್ನಾಟಕ, ತಮಿಳುನಾಡು, ಹಿಮಾಚಲ ಪ್ರದೇಶ, ಪಂಜಾಬ್, ಗುಜರಾತ್, ತೆಲಂಗಾಣ, ಒಡಿಶಾ, ಛತ್ತೀಸ್​ಗಢ ಮತ್ತು ಪುದುಚೆರಿಗಳಿಂದ 2018 ಮತ್ತು 2019ರಲ್ಲಿ ಸಂಗ್ರಹಿಸಲಾಗಿತ್ತು. ಇವುಗಳನ್ನು ಈಗ ರಿವರ್ಸ್-ಟ್ರಾನ್ಸ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್​ಟಿ-ಪಿಸಿಆರ್) ಪರೀಕ್ಷೆ ಒಳಪಡಿಸಿ ಕರೊನಾವೈರಸ್ ಇರುವಿಕೆ ಬಗ್ಗೆ ವಿಶ್ಲೇಷಣೆ ನಡೆಸಲಾಯಿತು. ಈ ಪೈಕಿ ಕೇರಳ, ತಮಿಳುನಾಡು, ಹಿಮಾಚಲ ಪ್ರದೇಶ ಮತ್ತು ಪುದುಚೇರಿಯಲ್ಲಿ ಸಂಗ್ರಹಿಸಲಾದ ಕನಿಷ್ಠ 25 ಸ್ಯಾಂಪಲ್​ಗಳಲ್ಲಿ ಪಾಸಿಟಿವ್ ಅಂಶ ಕಂಡುಬಂತು ಎಂದು ಸಂಶೋಧಕರ ತಂಡ ಹೇಳಿದೆ.
ಸಾಂಕ್ರಾಮಿಕ ಸಾಮರ್ಥ್ಯ ಸಮೀಕ್ಷೆ
ಬಾವಲಿಗಳ ಮೂಲಕ ಈ ವೈರಸ್ ಮಾನವರಿಗೆ ತಗುಲಲು ಸಾಧ್ಯವೇ ಎಂಬ ಬಗ್ಗೆ ಸಂಶೋಧಕರ ತಂಡ ವಿಸõತ ಅಧ್ಯಯನ ಕೈಗೊಂಡಿದೆ. ಬಾವಲಿಯಲ್ಲಿ ಕಂಡುಬಂದಿರುವ ಸೋಂಕಿಗೆ ಸಾಂಕ್ರಾಮಿಕ ಸಾಮರ್ಥ್ಯ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಪಾಸಿಟಿವ್ ಅಂಶ ಕಂಡು ಬಂದಿರುವ 4 ರಾಜ್ಯಗಳ ಸೋಂಕಿತರು, ಸಾಕುಪ್ರಾಣಿಗಳ ಮಾದರಿ ಸಂಗ್ರಹಕ್ಕೆ ಶಿಫಾರಸು ಮಾಡಲಾಗಿದೆ.
ವಿಜಯವಾಣಿ ಡಿಜಿಟಲ್​ ಮಾಧ್ಯಮ ಹೆಸರು, ಲೋಗೋ ದುರ್ಬಳಕೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 − sixteen =
Remember me
