ಭೋಪಾಲ್​:ಕೋಳಿಗಳಲ್ಲಿ ಕರೊನಾ ವೈರಸ್​? ಕೋಳಿ ಸಾಕಣಿಕಾ ಕೇಂದ್ರಗಳಲ್ಲಿ ಕೊವಿಡ್​-19 ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಮಧ್ಯಪ್ರದೇಶದ ಹಲವು ಜಿಲ್ಲೆಗಳಲ್ಲಿ ಕೋಳಿ ಸಾಕಣಿಕಾ ಕೇಂದ್ರಗಳಲ್ಲಿ ಕೊವಿಡ್​-19 ಇರುವುದು ಆರೋಗ್ಯ ಇಲಾಖೆ ನಡೆಸಿದ ತಪಾಸಣೆಯಿಂದ ಬೆಳಕಿಗೆ ಬಂದಿದೆ. ಭೋಪಾಲ್​, ಗ್ವಾಲಿಯರ್​, ಇಂಧೋರ್​, ಉಜ್ಜೈನ್​, ರತ್ಲಂ, ದೇವಾಸ್, ಇಂಧೋರ್​, ಬದ್ನಾಗರ, ಸೆಹೋರ್, ಬಾರ್ವಾನಿ ಮತ್ತು ಮೊಹೋಗಳಲ್ಲಿನ ಪೌಲ್ಟ್ರಿಗಳಲ್ಲಿದ್ದ ಕೋಳಿಗಳ ರಕ್ತದ ಮಾದರಿಗಳನ್ನು ಆಯಾ ಜಿಲ್ಲಾಡಳಿತಗಳಿಂದ ಕೊವಿಡ್​-19 ಟೆಸ್ಟ್​​ಗೆ ಒಳಪಡಿಸಲಾಗಿತ್ತು. ಈಗ ಅಲ್ಲೆಲ್ಲ ಕಡೆಗಳಲ್ಲೂ ಕರೊನಾ ಇರುವುದು ದೃಢಪಟ್ಟಿದೆ ಎಂದು ವರದಿಯಾಗಿತ್ತು. ಇದನ್ನು ಕೇಳಿದ ಅಲ್ಲಿನ ಜನ ಸಿಕ್ಕಾಪಟೆ ಗಾಬರಿಯಾಗಿದ್ದರು. ಚಿಕನ್​ ಪ್ರಿಯರಂತೂ ತುಂಬ ತಲೆಕೆಡಿಸಿಕೊಂಡಿದ್ದರು. ಪೌಲ್ಟ್ರಿಗಳಿಂದ ಕೋಳಿಗಳನ್ನು ತೆಗೆದುಕೊಂಡು ಹೋಗಿ, ಚಿಕನ್​ ತಿಂದವರೆಲ್ಲ ವಿಪರೀತ ಭಯಭೀತರಾಗಿದ್ದರು.ಇದನ್ನೂ ಓದಿ:ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್​; ಯಾವುದರ ಮುನ್ಸೂಚನೆ ಇದು…?
ಆದರೆ ಇದೆಲ್ಲ ಸುಳ್ಳು ಸುದ್ದಿ ಎಂದು ಮಧ್ಯಪ್ರದೇಶದ ಪಶುಸಂಗೋಪನಾ ಇಲಾಖೆ ಸ್ಪಷ್ಟಪಡಿಸಿದೆ. ಚಿಕನ್​ನ್ನು ತಿನ್ನುವುದರಿಂದ ಕರೊನಾ ಸೋಂಕಿನ ಭಯವಿಲ್ಲ. ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ. ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗುತ್ತಿದೆ. ಅದನ್ನು ಯಾರೂ ನಂಬಬೇಡಿ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೆ ಸೀಲ್​ಡೌನ್​, ಈ 5 ಏರಿಯಾಗಳು ಕಂಪ್ಲೀಟ್​ ಬಂದ್
ಕೋಳಿ ಸಾಕಣಾ ಕೇಂದ್ರಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ ಎಂಬ ಮಾಧ್ಯಮವೊಂದರ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್​ ಆದ ಬೆನ್ನಲ್ಲೇ ಪಶುಸಂಗೋಪನಾ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ.ಅಷ್ಟೇ ಅಲ್ಲ, ಯಾವ ಪೌಲ್ಟ್ರಿಯಿಂದಲೂ ಮಾದರಿಗಳನ್ನು ಸಂಗ್ರಹಿಸಲಾಗಿಲ್ಲ. ಕೋಳಿಗಳಲ್ಲಿ ಕರೊನಾ ಸೋಂಕು ಪತ್ತೆಯೂ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.(ಏಜೆನ್ಸೀಸ್​)
ಉಗ್ರರದ್ದು ಕ್ರೂರ ಕಾಮತೃಷೆ; ಅಡಗುತಾಣಗಳಲ್ಲಿವೆ ಕಾಂಡೊಮ್​, ವಯಾಗ್ರಾ, ಅಶ್ಲೀಲ ವಸ್ತುಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 1 =
Remember me
