ನವದೆಹಲಿ:ಜಾಗತಿಕವಾಗಿ ಕರೊನಾ ಸೋಂಕಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು, ಗುರುವಾರ ಒಂದೇ ದಿನ 3.14 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗಿನ ಏಕದಿನ ಏರಿಕೆಯಲ್ಲಿ ಇದು ಗರಿಷ್ಠ ದಾಖಲೆಯಾಗಿದೆ.
ಭಾರತದಲ್ಲಿ 96,500 ಪ್ರಕರಣಗಳು ಹೆಚ್ಚಾಗಿದ್ದರೆ, ಅಮೆರಿಕದಲ್ಲಿ 46,300, ಬ್ರೆಜಿಲ್​ನಲ್ಲಿ 36 ಸಾವಿರದಷ್ಟು ಪ್ರಕರಣ ದೃಢವಾಗಿದೆ. ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 52 ಲಕ್ಷಕ್ಕೂ ಅಧಿಕವಾಗಿದೆ. 24 ಗಂಟೆಗಳಲ್ಲಿ 1,175 ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 84 ಸಾವಿರ ಮೀರಿದೆ. ಇದುವರೆಗೆ 41 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದು, ಈ ಪ್ರಮಾಣ ಶೇ. 78.86ಕ್ಕೆ ಏರಿಕೆಯಾಗಿದೆ. ಜಾಗತಿಕ ಪ್ರಕರಣಗಳಲ್ಲಿ ಭಾರತ ಶೇ. 16ರಷ್ಟು ಪಾಲನ್ನು ಹೊಂದಿದೆ. ಹಾಗಿದ್ದರೂ ದೇಶದ ಜನಸಂಖ್ಯೆಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಅತ್ಯಂತ ಕಡಿಮೆಯಿದೆ. ಮರಣ ಪ್ರಮಾಣ ಶೇ. 1.6ರಷ್ಟಿದ್ದು, ಪಾಸಿಟಿವಿಟಿ ಪ್ರಮಾಣ ಶೇ. 8.5ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದುಬೈನಲ್ಲಿ ಏರ್ ಇಂಡಿಯಾ ವಿಮಾನಕ್ಕೆ ನಿರ್ಬಂಧ: ಅರಬ್ ಸಂಯುಕ್ತ ಸಂಸ್ಥಾನಕ್ಕೆ ತೆರಳುವ ಭಾರತದ ಏರ್ ಇಂಡಿಯಾ ಎಕ್ಸ್​ಪ್ರೆಸ್ ವಿಮಾನಗಳನ್ನು ಅಕ್ಟೋಬರ್ 2ರವರೆಗೆ ನಿರ್ಬಂಧಿಸಿರುವುದಾಗಿ ಅಲ್ಲಿನ ವಿಮಾನಯಾನ ಸಚಿವಾಲಯ ತಿಳಿಸಿದೆ.
ಚೀನಾದಲ್ಲಿ ಬ್ಯಾಕ್ಟೀರಿಯಾ
ಕರೊನಾ ಸೋಂಕು ಮೊದಲು ಕಾಣಿಸಿಕೊಂಡ ಚೀನಾದಲ್ಲಿ ಬ್ಯಾಕ್ಟೀರಿಯಾ ಸಂಬಂಧಿತ ಮತ್ತೊಂದು ಕಾಯಿಲೆ ಕಾಣಿಸಿಕೊಂಡಿದೆ. ಸರ್ಕಾರಿ ಲ್ಯಾಬೋರೇಟರಿಯೊಂದರಲ್ಲಿ ಪ್ರಾಣಿಗಳ ಔಷಧ ತಯಾರಿಸುವ ವೇಳೆ ಹೊರ ಹೊಮ್ಮಿದ ಬ್ಯಾಕ್ಟೀರಿ ಯಾದಿಂದ ಬ್ರೂಸೆಲೋಸಿಸ್ ಕಾಯಿಲೆ ಉಂಟಾಗಿದೆ.
ಇಸ್ರೇಲ್​ನಲ್ಲಿ ಮತ್ತೊಮ್ಮೆ ಲಾಕ್​ಡೌನ್
ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್​ಡೌನ್ ಮಾಡಿರುವುದಾಗಿ ಇಸ್ರೇಲ್​ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಶುಕ್ರವಾರದಿಂದ ಮೂರು ವಾರಗಳ ಲಾಕ್​ಡೌನ್ ಜಾರಿಯಲ್ಲಿರಲಿದೆ. ದೇಶದಲ್ಲಿ ಈವರೆಗೆ 1.77 ಲಕ್ಷ ಪ್ರಕರಣ ಪತ್ತೆ ಯಾಗಿದ್ದು, 46,500 ಸಕ್ರಿಯ ಪ್ರಕರಣಗಳಿವೆ. 1,170 ಜನರು ಮೃತರಾಗಿದ್ದಾರೆ.
ಮರಣ ಪ್ರಮಾಣ ಕಡಿಮೆಯೇಕೆ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
