ನವದೆಹಲಿ:ಭಾರತದ 732 ಜಿಲ್ಲೆಗಳ ಪೈಕಿ 406 ಜಿಲ್ಲೆಗಳಲ್ಲಿ ಕನಿಷ್ಠ ಒಬ್ಬ ಕರೊನಾ ಸೋಂಕಿತ ವ್ಯಕ್ತಿ ಇದ್ದಾರೆ. ಅಂದರೆ ಶೇಕಡಾ 55.46 ಹೆಚ್ಚು ಜಿಲ್ಲೆಗಳು ಕೋವಿಡ್-19 ಪೀಡಿತ ಪ್ರದೇಶಗಳಾಗಿವೆ. ಮಾರ್ಚ್ 23ರಂದು 84 ಜಿಲ್ಲೆಗಳಿಗೆ ಹರಡಿದ್ದ ಸೋಂಕು, ಏ.9ಕ್ಕೆ 284 ಜಿಲ್ಲೆಗಳಿಗೆ ತನ್ನ ಬಾಹು ವಿಸ್ತರಿಸಿತು. ನಂತರ ಅದು 406ಕ್ಕೆ ಏರಿತು ಎಂದು ಏ. 18ರ ಸರ್ಕಾರಿ ಅಂಕಿ ಸಂಖ್ಯೆ ತಿಳಿಸಿದೆ. ಈ 406 ಜಿಲ್ಲೆಗಳಲ್ಲಿ 170ನ್ನು ಹಾಟ್​ಸ್ಪಾಟ್ ಅಥವಾ ಕೆಂಪು ವಲಯ ಎಂದು ವರ್ಗೀಕರಿಸಲಾಗಿದೆ. ಇದರಲ್ಲಿ ಹತ್ತು ಜಿಲ್ಲೆಗಳಲ್ಲಿ ಶೀಘ್ರವಾಗಿ ವ್ಯಾಧಿ ವಿಸ್ತರಣೆಯಾಗಿದ್ದು ಅವುಗಳನ್ನು ಅತಿ ತೀವ್ರ ಪೀಡಿತ ಹಾಟ್​ಸ್ಪಾಟ್ ಜಿಲ್ಲೆಗಳೆಂದು ವರ್ಗೀಕರಿಸಲಾಗಿದೆ.
ದೇಶದಲ್ಲಿ ದಾಖಲಾಗಿರುವ ಒಟ್ಟು ಕರೊನಾ ಪ್ರಕರಣಗಳಲ್ಲಿ 10 ಹಾಟ್​ಸ್ಪಾಟ್​ಗಳಲ್ಲಿ ಶೇಕಡಾ 46.39 ಪ್ರಕರಣಗಳಿವೆ. 50 ಟಾಪ್ ಜಿಲ್ಲೆಗಳಲ್ಲಿ ದೃಢಪಟ್ಟ ಪ್ರಕರಣಗಳ ಸಂಖ್ಯೆ ಶೇಕಡಾ 71.40.
ತಮಿಳುನಾಡಿನಲ್ಲಿ ಹೆಚ್ಚು ಹಾಟ್​ಸ್ಪಾಟ್
16 ರಾಜ್ಯಗಳಲ್ಲಿ ಕನಿಷ್ಠ ಐದು ಜಿಲ್ಲೆಗಳನ್ನು ಹಾಟ್​ಸ್ಪಾಟ್​ಗಳೆಂದು ಗುರುತಿಸಲಾಗಿದೆ. ತಮಿಳು ನಾಡು, ಗರಿಷ್ಠ ಅಂದರೆ 22 ಹಾಟ್​ಸ್ಪಾಟ್ ಜಿಲ್ಲೆಗಳಿರುವ ರಾಜ್ಯವಾಗಿದೆ. ಮಹಾರಾಷ್ಟ್ರ (14), ಉತ್ತರ ಪ್ರದೇಶ (13), ರಾಜಸ್ಥಾನ (12), ಆಂಧ್ರ ಪ್ರದೇಶ (11), ದೆಹಲಿ (10), ತೆಲಂಗಾಣ (9), ಜಮ್ಮು ಮತ್ತು ಕಾಶ್ಮೀರ (8), ಪಂಜಾಬ್ (8), ಕರ್ನಾಟಕ (8), ಕೇರಳ (7), ಮಧ್ಯ ಪ್ರದೇಶ (6), ಹರಿಯಾಣ (6), ಗುಜರಾತ್ (6), ಅಸ್ಸಾಂ (5), ಹಿಮಾಚಲ ಪ್ರದೇಶ (5).
20 ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಕೇಸ್
20 ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ದೃಢಪಟ್ಟ ಕರೊನಾ ಪ್ರಕರಣಗಳಿವೆ. ದಕ್ಷಿಣ ದೆಹಲಿ, ನವದೆಹಲಿ, ಕೇಂದ್ರ ದೆಹಲಿ, ಆಗ್ರಾ, ಜೈಪುರ, ಜೋಧ್​ಪುರ, ಭೋಪಾಲ್, ಅಹಮದಾಬಾದ್, ವಡೋದರಾ, ಇಂದೋರ್, ಥಾಣೆ, ಮುಂಬೈ, ಕಾಸರಗೋಡು, ಹೈದರಾಬಾದ್, ಚೆನ್ನೈ, ಕರ್ನಲ್, ಗುಂಟೂರು, ಕೊಯಮತ್ತೂರು ಮತ್ತು ಕೋಲ್ಕತ. ಇವುಗಳಲ್ಲಿ ಬಹುತೇಕ ನಗರಗಳು ದೊಡ್ಡ ಸಿರಿವಂತ ನಗರಗಳು ಮಾತ್ರವಲ್ಲದೆ ಪ್ರಭಾವಶಾಲಿ ಆರ್ಥಿಕ ವಲಯಗಳೂ ಆಗಿವೆಯೆನ್ನುವುದು ಗಮನಾರ್ಹ. ಈ ಜಿಲ್ಲೆಗಳಲ್ಲಿ ಲಾಕ್​ಡೌನ್ ವಿಸ್ತರಣೆಯಾಗುವ ಸೂಚನೆಗಳಿದ್ದು. ಇದು ಆರ್ಥಿಕತೆಗೆ ಶುಭಶಕುನವಲ್ಲ ಎಂದು ಹೇಳಲಾಗಿದೆ.
ಭಿಲ್ವಾರಾ ಮಾದರಿ
ಕರೊನಾ ವೈರಸ್ ವ್ಯಾಪಿಸುವುದನ್ನು ತಡೆಯುವಲ್ಲಿ ದೇಶದ ಇತರ ಭಾಗಗಳಿಗೆ ಮಾದರಿಯಾದ ರಾಜಸ್ಥಾನದ ಭಿಲ್ವಾರಾ ಶೀಘ್ರವೇ ಕೆಂಪು ವಲಯದಿಂದ ಆರೆಂಜ್ ವಲಯಕ್ಕೆ ಬದಲಾಗುತ್ತಿದೆ. ಅಲ್ಲಿ ಮಾರ್ಚ್ 19ರಂದು ಮೊದಲ ಪ್ರಕರಣ ಪತ್ತೆಯಾಗಿತ್ತು, ಮುಂದಿನ ಕೆಲವೇ ವಾರಗಳಲ್ಲಿ ಸೋಂಕಿತರ ಸಂಖ್ಯೆ 26ಕ್ಕೇರಿತ್ತು. ಆದರೆ ಅಧಿಕಾರಿಗಳು ಮಾಡಿದ ಅಪಾರ ಪ್ರಯತ್ನಗಳಿಂದಾಗಿ ಏಪ್ರಿಲ್ 9ರಿಂದ ಅಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಇನ್ನೂ ಆರು ದಿನ ಯಾವುದೇ ಪ್ರಕರಣ ಪತ್ತೆಯಾಗದಿದ್ದರೆ ಭಿಲ್ವಾರಾ ಕಿತ್ತಳೆ ವಲಯಕ್ಕೆ ಬದಲಾಗಲಿದೆ. ಒಟ್ಟು 28 ದಿನ ಯಾವುದೇ ಪ್ರಕರಣ ಗಳಿಲ್ಲದಿದ್ದರೆ ಭಿಲ್ವಾರಾ ಮೇ 7ರ ಹೊತ್ತಿಗೆ ಹಸಿರು ವಲಯಕ್ಕೆ ಬರಲಿದೆ ಮತ್ತು ಹೀಗೆ ಪರಿವರ್ತನೆಯಾದ ದೇಶದ ಮೊದಲ ಜಿಲ್ಲೆಯಾಗಲಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 13 =
Remember me
