ಪತ್ತನಂತಿಟ್ಟ:ಕೇರಳದಲ್ಲಿ ಐದು ಮಂದಿಗೆ ಕೊರೊನಾ ಸೋಂಕು ತಗುಲಿದ್ದು ನಿನ್ನೆ ವರದಿಯಾಗಿದೆ. ಇಟಲಿಯಿಂದ ಮಗನೊಂದಿಗೆ ಆಗಮಿಸಿದ್ದ ದಂಪತಿ ತಮ್ಮ ಸಂಬಂಧಿಕರನ್ನು ಭೇಟಿಯಾಗಿದ್ದರು.
ಆ ಇಬ್ಬರು ಸಂಬಂಧಿಕರು ಜ್ವರದಿಂದ ಆಸ್ಪತ್ರೆಗೆ ದಾಖಲಾದಾಗಲೇ ಅವರಲ್ಲಿ ಕೊರೊನಾ ಇರುವುದು ದೃಢಪಟ್ಟಿತ್ತು. ಬಳಿಕ ದಂಪತಿಯನ್ನೂ ತಪಾಸಣೆಗೆ ಒಳಪಡಿಸಿ ಆಸ್ಪತ್ರೆಯೊಂದರ ಪ್ರತ್ಯೇಕ ವಾರ್ಡ್​ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಈಗ ಕೇರಳದಲ್ಲಿ ಆರನೇ ಪ್ರಕರಣ ಪತ್ತೆಯಾಗಿದೆ. ಮೂರು ವರ್ಷದ ಮಗುವಿನಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.ಮಗುವಿನ ಕುಟುಂಬವೂ ಇಟಲಿಯಿಂದಲೇ ಆಗಮಿಸಿತ್ತು. ಅವರು ಮಾರ್ಚ್​ 7ರಂದು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ಅಲ್ಲಿ ಸಾರ್ವತ್ರಿಕ ಸ್ಕ್ರೀನ್​ ಟೆಸ್ಟ್ ವೇಳೆ ಮಗುವಿನಲ್ಲಿ ಸೋಂಕಿನ ಲಕ್ಷಣ ಕಂಡುಬಂದಿತ್ತು. ರಕ್ತದ ಮಾದರಿ ತಪಾಸಣೆಯ ವರದಿ ಸೋಮವಾರ (ಇಂದು) ಬಂದಿದ್ದು, ಅದರಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.
ಸದ್ಯ ಎರ್ನಾಕುಲಂ ವೈದ್ಯಕೀಯ ಕಾಲೇಜಿನ ಪ್ರತ್ಯೇಕ ವಾರ್ಡ್​ನಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. (ಏಜೆನ್ಸೀಸ್)
ಇಟಲಿಯಿಂದ ಕೇರಳಕ್ಕೆ ಬಂದು ಸಂಬಂಧಿಕರನ್ನು ಭೇಟಿಯಾದ ದಂಪತಿ; ಈಗ ಎಲ್ಲರೂ ಕೊರೊನಾ ವೈರಸ್​ ಪೀಡಿತರು

ಬಿಜೆಪಿ ಮುಖಂಡನ ಆಪ್ತನ ಕ್ಲಬ್​ಗೆ ಖಾಕಿ ದಾಳಿ

ಯೂಟ್ಯೂಬ್​ನಿಂದ ಕೋಟಿಗೊಬ್ಬ 3 ಡಿಲೀಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
