ನವದೆಹಲಿ:ಭಾರತದಲ್ಲಿ ಹೊಸ ಕರೊನಾ ಪ್ರಕರಣಗಳ ಸಂಖ್ಯೆ ತ್ವರಿತವಾಗಿ ಹೆಚ್ಚಳವಾಗುತ್ತಿದ್ದು, ಸೋಂಕಿತರ ಸಂಖ್ಯೆ ಇನ್ನೆರಡು ದಿನಗಳಲ್ಲಿ ಒಂದು ಲಕ್ಷದ ಗಡಿ ದಾಟುವ ಸಂಭವವಿದೆ. ಭಾನುವಾರ 4,000 ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 94 ಸಾವಿರಕ್ಕಿಂತ ಹೆಚ್ಚಾಗಿದೆ. ಜತೆಗೆ ಹೊಸದಾಗಿ 102 ಸಾವುಗಳು ವರದಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 2,900ಕ್ಕಿಂತ ಹೆಚ್ಚಾಗಿದೆ. ಏಪ್ರಿಲ್ 3ರ ವೇಳೆ 40 ಸಾವಿರದ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ ಕೇವಲ 15 ದಿನಗಳಲ್ಲಿ ಲಕ್ಷದ ಗಡಿ ಸಮೀಪಿಸುತ್ತಿದೆ. ಮಹಾರಾಷ್ಟ್ರದಲ್ಲಿ ಕರೊನಾ ತೀವ್ರತೆ ಹೆಚ್ಚಿದ್ದು, ಅಲ್ಲಿ ಸೋಂಕಿತರ ಪ್ರಮಾಣ 33 ಸಾವಿರದ ಗಡಿ ದಾಟಿದೆ. ಗುಜರಾತ್ ಹಾಗೂ ತಮಿಳುನಾಡಿನಲ್ಲಿ ತಲಾ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ಸಮೀಪಿಸಿದೆ. ರಾಜಸ್ಥಾನದಲ್ಲಿ 5 ಸಾವಿರ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ತಲಾ 4 ಸಾವಿರ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲಿ ತಲಾ 2 ಸಾವಿರ, ಪಂಜಾಬ್, ತೆಲಂಗಾಣ, ಬಿಹಾರ, ಕರ್ನಾಟಕ ಮತ್ತು ಜಮ್ಮು-ಕಾಶ್ಮೀರದಲ್ಲಿ ತಲಾ 1 ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ:ಲಾಕ್​ಡೌನ್​ ಹೊಸ ಮಾರ್ಗಸೂಚಿ ನೋಡಿ ಕೇಂದ್ರ ಸರ್ಕಾರವನ್ನು ಹೊಗಳಿದ ದೆಹಲಿ ಸಿಎಂ
ವಿಶ್ವದಲ್ಲಿ ಕರೊನಾದಿಂದ ತೀವ್ರ ಬಾಧಿತವಾಗಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಮರಣ ಪ್ರಮಾಣ ಕಡಿಮೆಯಿದ್ದು, ಈವರೆಗೆ ಸುಮಾರು 2,900ಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪಿದ್ದಾರೆ. ಇದರಲ್ಲೂ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ, 1,100, ಗುಜರಾತ್ 600, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಳ ತಲಾ 200, ದೆಹಲಿ, ರಾಜಸ್ಥಾನ ಮತ್ತು ಉತ್ತರಪ್ರದೇಶದಲ್ಲಿ ತಲಾ 100ಕ್ಕೂ ಅಧಿಕ ರೋಗಿಗಳು ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆ
ಹೆಚ್ಚಿರುವುದು ಸಮಾಧಾನದ ಸಂಗತಿಯಾಗಿದ್ದು, ಗುಣಮುಖರ ಪ್ರಮಾಣ ಶೇಕಡಾ 35ಕ್ಕಿಂತ ಹೆಚ್ಚಿದೆ. 34 ಸಾವಿರಕ್ಕೂ ಹೆಚ್ಚು ರೋಗಿಗಳು ಈವರೆಗೆ ಗುಣಮುಖ ರಾಗಿದ್ದು, ಇನ್ನೂ 53 ಸಾವಿರ ಸಕ್ರಿಯ ಪ್ರಕರಣಗಳಿವೆ.
ನವದೆಹಲಿ:ಭಾರತದಲ್ಲಿ ಕರೊನಾ ವೈರಸ್​ನಿಂದಾಗಿ 26 ಕೋಟಿ ಜನರು ಬಡವರಾಗಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ವಿಶ್ವಸಂಸ್ಥೆ ಮತ್ತು ಆಕ್ಸ್ ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ (ಒಪಿಎಚ್​ಐ) ನೀಡಿರುವ ವರದಿಯ ಪ್ರಕಾರ, ಲಾಕ್​ಡೌನ್​ನಿಂದಾಗಿ ಭಾರತದಲ್ಲಿ ಬಡವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ. 2006ರಿಂದ 2016ರವರೆಗೆ ಭಾರತದಲ್ಲಿ ಬಡತನ ಪ್ರಮಾಣ ಕಡಿಮೆಯಾಗಿದೆ. 27.1 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರೆ ಎಂದು ಜಾಗತಿಕ ಬಡತನ ಸೂಚ್ಯಂಕ (ಎಂಪಿಐ) ಕಳೆದ ವರ್ಷ ಸೂಚಿಸಿತ್ತು. ಆದರೆ ಈಗ ಮತ್ತೆ 26 ಕೋಟಿ ಜನರು ಬಡವರಾಗಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಸದ್ಯ ವಿಶ್ವದಲ್ಲೇ ಅತೀ ಹೆಚ್ಚು ಅಂದರೆ 36.9 ಕೋಟಿ ಬಡವರನ್ನು ಭಾರತ ಹೊಂದಿದೆ.
ಇದನ್ನೂ ಓದಿ:ಭಾರತದ ಕೆಂಪು ದೀಪದ ಹಿಂದಿದೆ ಕರೊನಾ ಭಯಂಕರ ರಹಸ್ಯ- ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಎಂದಿದೆ ಅಮೆರಿಕ
ತಿರುವನಂತಪುರಂ: ಜೂನ್ 1ರಿಂದ ದೂರದರ್ಶನ ಮತ್ತು ಸ್ಮಾರ್ಟ್​ಫೋನ್​ಗಳ ಮೂಲಕ ಶಿಕ್ಷಣ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ. IT@School VICTERS ಚಾನಲ್ ಮುಖಾಂತರ ಶಿಕ್ಷಣ ನೀಡುವುದಕ್ಕೆ ನಿರ್ಧರಿಸಲಾಗಿದೆ. ಕೇರಳ ಶಿಕ್ಷಣಕ್ಕಾಗಿ ಮೂಲ ಸೌಕರ್ಯ ಮತ್ತು ತಂತ್ರಜ್ಞಾನ (ಕೆಐಟಿಇ) ಇಲಾಖೆಯ ವತಿಯಿಂದ ಈ ಚಾನಲ್ ಆರಂಭಿಸಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − ten =
Remember me
