ಇಂಡೋನೇಷ್ಯಾ:ಕರೊನಾ ವೈರಸ್​ ವಿಶ್ವಾದ್ಯಂತ ಪ್ರತಿಯೊಬ್ಬರಲ್ಲಿಯೂ ಭೀತಿ ಸೃಷ್ಟಿಸಿದ್ದರೂ ಈ ವೈರಸ್​ ಕುರಿತಂತೆ ಬರುತ್ತಿರುವ ಜೋಕ್​ಗಳಿಗೇನೂ ಕಮ್ಮಿ ಇಲ್ಲ. ಲಾಕ್​ಡೌನ್​ನಲ್ಲಿ ಮನೆಯಲ್ಲಿಯೇ ಕುಳಿತು ಹೊಸಹೊಸ ಜೋಕ್​ಗಳನ್ನು ಸೃಷ್ಟಿ ಮಾಡುವವರಿಗೆ ಸದ್ಯ ಇರುವ ವಸ್ತು ಕರೊನಾ.
ಅದೇ ರೀತಿ ಗಂಡ-ಹೆಂಡತಿಯ ಬಗ್ಗೆ ಇಲ್ಲಿಯವರೆಗೆ ಬಂದಿರುವ ಜೋಕ್​, ಮೀಮ್​ಗಳಷ್ಟು ಯಾವ ವಿಷಯಕ್ಕೂ ಬಂದಿಲ್ಲ ಎಂದೇ ಹೇಳಬಹುದು. ಹಾಗೆಂದು ಕರೊನಾ ವೈರಸ್​ ಅನ್ನು ಹೆಂಡತಿಗೆ ಹೋಲಿಸಿದರೆ?
ಇದನ್ನೂ ಓದಿ:ರಾಷ್ಟ್ರ ರಾಜಧಾನಿ ಗಡಿ ಕ್ಲೋಸ್​: ಸದ್ಯ ದೆಹಲಿಗೆ ಪ್ರವೇಶವಿಲ್ಲ ಎಂದ ಸಿಎಂ ಕೇಜ್ರಿವಾಲ್​
ಹೌದು. ಈ ರೀತಿ ಹೋಲಿಕೆ ಮಾಡಿ ಇದೀಗ ಇಂಡೋನೇಷ್ಯಾದ ಭದ್ರತಾ ಸಚಿವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಚಿವ ಮೊಹಮ್ಮದ್‌ ಮಹಫೂದ್‌ ಎಂ.ಡಿ ಅವರು ಇತ್ತೀಚೆಗೆ ಸ್ಥಳೀಯ ವಿಶ್ವವಿದ್ಯಾಲಯ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕರೊನಾ ವೈರಸ್‌ ಕುರಿತಂತೆ ಜೋಕ್‌ ಹೇಳಿದ್ದು ಇದೀಗ ವಿಶ್ವಾದ್ಯಂತ ಭಾರಿ ಟೀಕೆಗೆ ಗುರಿಯಾಗಿದೆ. ಅದರಲ್ಲಿಯೂ ಮಹಿಳೆಯರು ಸಚಿವರ ವಿರುದ್ಧ ಕಿಡಿ ಕಾರುತ್ತಿದ್ದಾರೆ.
ಹಾಗೆಂದು ಸಚಿವರು ತಾವೇ ಸೃಷ್ಟಿ ಮಾಡಿರುವ ಜೋಕ್​ ಏನೂ ಹೇಳಲಿಲ್ಲ. ಬದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮೀಮ್​ ಬಗ್ಗೆ ಅವರು ಉಲ್ಲೇಖಿಸಿದ್ದರು. ಜಕಾರ್ತದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡುವ ವೇಳೆ ಅವರು, ಕರೊನಾ ವೈರಸ್‌ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ:ಲಾಕ್​ಡೌನ್​ ದಾಟಿ ಬಂದ್ಳು… ಕುದುರೆ ಏರಿ ಬಂದ್ಳು… ಚೆಲುವೆ ಮಹಾರಾಣಿ….
ಆಗ ಅವರು, ನನ್ನ ಸಹೋದ್ಯೋಗಿವೊಬ್ಬರು ನನಗೆ ಮೀಮ್‌ ಕಳುಹಿಸಿದ್ದರು. ಅದರಲ್ಲಿ “ಕರೊನಾ ಒಂದು ರೀತಿ ಘಾಟಿ ಹೆಂಡತಿ ಇದ್ದಂತೆ. ಮೊದಲಿಗೆ ನಿಯಂತ್ರಿಸಲು ಪ್ರಯತ್ನ ಪಡುತ್ತೇವೆ. ಆದರೆ ಅದು ನಿಯಂತ್ರಣಕ್ಕೆ ಬರುವುದಿಲ್ಲ ಎಂದು ತಿಳಿದಾಗ ಅದ ಜತೆಯೇ ಬದುಕಲು ಆರಂಭಿಸುತ್ತೇವೆ” ಅದೇ ರೀತಿ ಕರೊನಾ ವೈರಸ್‌ ಜತೆಗೂ ಬದುಕುವುದನ್ನು ಕಲಿಯಬೇಕಿದೆ ಎಂದು ಮೀಮ್​ನಲ್ಲಿ ಇತ್ತು’ ಎಂದಿದ್ದಾರೆ..
ಮೀಮ್​ನಲ್ಲಿ ಏನೇ ಇರಲಿ. ಅದು ಸಚಿವರ ಬಾಯಲ್ಲಿ ಬಂದದ್ದನ್ನು ಮಹಿಳೆಯರು ಸಹಿಸಿಕೊಳ್ಳುತ್ತಿಲ್ಲ. ಆದ್ದರಿಂದ ಇವರ ವಿರುದ್ಧ ಬಹುದೊಡ್ಡ ಮಟ್ಟಿನ ಟೀಕಾ ಪ್ರಹಾರ ನಡೆಯುತ್ತಿದೆ. ‘ಇದು ಕೀಳು ಅಭಿರುಚಿಯ ಹೇಳಿಕೆ. ಅಧಿಕಾರದಲ್ಲಿರುವವರ ಮಹಿಳಾ ವಿರೋಧಿ ಮನಸ್ಥಿತಿಯನ್ನೂ ಈ ಹೇಳಿಕೆ ತೋರಿಸುತ್ತದೆ’ ಎಂದು ವುಮೆನ್ಸ್‌ ಸಾಲಿಡಾರಿಟಿ ಗ್ರೂಪ್‌ನ ಮುಖ್ಯಸ್ಥೆ ದಿಂಡಾ ನಿಸಾ ಯುರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಥವರು ಸಚಿವರಾಗಲು ಅನರ್ಹರು. ಕೂಡಲೇ ರಾಜೀನಾಮೆ ನೀಡಬೇಕು ಎಂಬ ಒತ್ತಾಯಗಳೂ ಕೇಳಿಬಂದಿವೆ(ಏಜೆನ್ಸೀಸ್​)
ಕಾನೂನು ಸಲಹೆ: ತಾತನ ಆಸ್ತಿಯ ಹಕ್ಕನ್ನು ಪಡೆದುಕೊಳ್ಳುವುದು ಹೇಗೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + six =
Remember me
