ನವದೆಹಲಿ:ಕರೊನಾ ವೈರಸ್‌ ತಡೆಗಟ್ಟಲು ಜಾತಿ, ಮತ, ಧರ್ಮ ಎಲ್ಲವನ್ನೂ ಮೀರಿ ಎಲ್ಲರೂ ಶ್ರಮಿಸಬೇಕಾದ ಅಗತ್ಯವಿದೆ. ಈ ಸೋಂಕು ತಗುಲಲು ಯಾವುದೇ ನಿರ್ದಿಷ್ಟ ಸಮದಾಯವನ್ನು ಗುರಿಯಾಗಿಸುವುದು ಯಾವುದೇ ಕಾರಣಕ್ಕೂ ಸರಿಯಲ್ಲ ಎಂದು ಸದ್ಗುರು ಜಗ್ಗಿ ವಾಸುದೇವ ಹೇಳಿದ್ದಾರೆ.
ತಮ್ಮ ಟ್ವಿಟರ್‌ ಖಾತೆಯಲ್ಲಿ ವೀಡಿಯೋ ಅಪ್‌ಲೋಡ್‌ ಮಾಡುವ ಮೂಲಕ ಅವರು ಈ ಸಂದೇಶ ನೀಡಿದ್ದಾರೆ. ‘ವೈರಸ್‌ಗೆ ಯಾವುದೇ ಜಾತಿ, ಮತ, ಧರ್ಮದ ಅರಿವಿಲ್ಲ. ಸೋಂಕು ಯಾರಿಗೆ ಬೇಕಾದರೂ ತಗುಲಬಹುದು. ಇವುಗಳ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಮೂಡಿಸುವುದು ಸರಿಯಲ್ಲ. ಅದರ ಬದಲು ಎಲ್ಲರೂ ಒಂದಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ. ಇದು ತುರ್ತಾಗಿ ಆಗಬೇಕಾಗಿರುವ ಕಾರ್ಯ’ ಎಂದಿದ್ದಾರೆ.
’ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ವೈರಸ್‌ ತಡೆಗಟ್ಟಲು ಪ್ರಯತ್ನಿಸಿ. ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿ ಹರಡಲು ಆಸ್ಪದ ನೀಡಬೇಡಿ. ಎಂದು ಈಗ ನಾವೆಲ್ಲಾ ಬಹಳ ಎಚ್ಚರಿಕೆಯಿಂದ ಇರುವ ಸಮಯ ಬಂದಿದೆ. ಜನರಿಗೆ ಸುಮ್ಮನೆ ಭೀತಿ ಹುಟ್ಟಿಸುವ ಪೋಸ್ಟ್‌ಗಳನ್ನು ಶೇರ್‌ ಮಾಡುವ ಮೂಲಕ ಆತಂಕ ಸೃಷ್ಟಿಸುವ ಸಮಯ ಇದಲ್ಲ. ಈ ವೈರಸ್‌ನ ಗಂಭೀರತೆಯನ್ನು ಅರಿತು ಎಲ್ಲರೂ ಒಗ್ಗಟ್ಟಾಗಿ ಅದನ್ನು ಹೊಡೆದೋಡಿಸೋಣ’ ಎಂದು ಸದ್ಗುರು ಕಿವಿಮಾತು ಹೇಳಿದ್ದಾರೆ.
ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಸಭೆಯ ಕುರಿತು ಬರುತ್ತಿರುವ ವರದಿಗಳ ಬೆನ್ನಲ್ಲೇ ಸದ್ಗುರು ಈ ಟ್ವೀಟ್‌ ಮಾಡಿದ್ದಾರೆ.(ಏಜೆನ್ಸೀಸ್​)
ಎಷ್ಟೇ ಬೇಡಿಕೊಂಡರು ಮಗುವಿನ ತಂದೆಗೆ ಅಮಾನವೀಯವಾಗಿ ಥಳಿಸಿದ್ದ ಪೊಲೀಸ್‌ ಅಧಿಕಾರಿ ಅಮಾನತು

ವ್ಯಾಟ್​ ಹೆಚ್ಚಳದಿಂದ ಇಂಧನ ದರದಲ್ಲಿ ಭಾರಿ ಏರಿಕೆ: ಯಾವ್ಯಾವ ನಗರದಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಎಷ್ಟಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 9 =
Remember me
