ನವದೆಹಲಿ:ಕರೊನಾ ಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಿವೆ. ಲಾಕ್​ಡೌನ್ ಪರಿಣಾಮ ಉದ್ಯೋಗ ಕಳೆದುಕೊಂಡು ಸ್ವಗ್ರಾಮಗಳತ್ತ ಮುಖಮಾಡಿರುವ ಸಾವಿರಾರು ಸಂಖ್ಯೆಯ ಕಾರ್ವಿುಕರನ್ನೂ ಕಡ್ಡಾಯವಾಗಿ 14 ದಿನ ಹೋಮ್ ಕ್ವಾರಂಟೈನ್​ಗೆ ಒಳಪಡಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಟ್ಟಪ್ಪಣೆ ವಿಧಿಸಿದೆ. ಈ ನಡುವೆ, ‘ಕರೊನಾ ವಿರುದ್ಧದ ಸಂಘರ್ಷದ ಭಾಗವಾಗಿ ಕೈಗೊಳ್ಳಲಾದ ಕಠಿಣ ಕ್ರಮಕ್ಕೆ ಕ್ಷಮೆಯಿರಲಿ. ಆದರೆ ಇಂಥ ಕ್ರಮ ಅನಿವಾರ್ಯವಾಗಿತ್ತು’ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನಿರ್ಬಂಧ ಮತ್ತಷ್ಟು ಕಠಿಣವಾಗುವ ಸೂಚನೆ ನೀಡಿದ್ದಾರೆ. ಇತ್ತ ರಾಜ್ಯದಲ್ಲಿ ವಿನಾಕಾರಣ ರಸ್ತೆಗಿಳಿಯುವ ವಾಹನಗಳನ್ನು ಜಪ್ತಿ ಮಾಡುವ ಮೂಲಕ ಪೊಲೀಸರು ಮತ್ತೊಂದು ಹಂತದಲ್ಲಿ ಬಿಸಿ ಮುಟ್ಟಿಸಿದ್ದಾರೆ.
ಕೇಂದ್ರ ಸೂಚನೆ:ದೇಶದ ಹಲವು ರಾಜ್ಯಗಳಲ್ಲಿ ಸಾವಿರಾರು ಕಾರ್ವಿುಕರು ಸ್ವಗ್ರಾಮಗಳಿಗೆ ವಲಸೆ ಹೋಗುತ್ತಿರುವ ಕುರಿತಂತೆ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಭಾನುವಾರ ಎಲ್ಲ ರಾಜ್ಯಗಳ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದರು. ವಲಸಿಗ ಕಾರ್ವಿುಕರಿಂದ ಕರೊನಾ ವೈರಸ್ ಹರಡದಂತೆ ತಡೆಯಲು ಎಲ್ಲ ಕ್ರಮ ಕೈಗೊಳ್ಳಬೇಕು. ಅವರ ಕ್ವಾರೆಂಟೈನ್ ಹಾಗೂ ಊಟ, ತಿಂಡಿಗೆ ವ್ಯವಸ್ಥೆ ಮಾಡಬೇಕೆಂದು ರಾಜ್ಯಗಳಿಗೆ ಸೂಚಿಸಿದರು.
ರಸ್ತೆಗೆ ಇಳಿವ ವಾಹನ ಜಪ್ತಿ
*ಬಿಗಿಯಾದ ಕರ್ನಾಟಕ*ರಾಜ್ಯದೆಲ್ಲೆಡೆ ಕಟ್ಟೆಚ್ಚರ
ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ ಕರ್ನಾಟಕದಲ್ಲಿ ಬಂದೋಬಸ್ತ್ ಹಾಗೂ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ರಾಜ್ಯದಲ್ಲಿ ಕರೊನಾ ಸೋಂಕು 3ನೇ ಹಂತಕ್ಕೆ ತಲುಪುವ ಸಾಧ್ಯತೆ ಬಗ್ಗೆ ಎಚ್ಚರಿಕೆ ರವಾನೆಯಾದ್ದರಿಂದ ಅನಗತ್ಯವಾಗಿ ರಸ್ತೆಗಿಳಿವ ವಾಹನಗಳನ್ನು ಜಪ್ತಿ ಮಾಡಿ ಸವಾರರ ವಿರುದ್ಧ ಪ್ರಕರಣ ದಾಖಲಿಸುವ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ.
*ಭಾನುವಾರ ಒಂದೇ ದಿನ ಬೆಂಗಳೂರಲ್ಲಿ 900 ವಾಹನ ಜಪ್ತಿ
*ರಸ್ತೆಗಿಳಿವ ಸವಾರರ ಉದ್ದೇಶ ಪರಿಶೀಲಿಸಿ ಬಳಿಕ ಕ್ರಮ
*ಲಾಕ್​ಡೌನ್ ಇರುವವರೆಗೂ ಕಾರ್ಯಾಚರಣೆ ಮುಂದುವರಿಕೆ
*ಸೋಮವಾರದಿಂದ ರಾಜ್ಯಾದ್ಯಂತ ನಿಯಮ ಕಟ್ಟುನಿಟ್ಟು
*ಜಪ್ತಿಯಾದ ವಾಹನಗಳನ್ನು ಕೋರ್ಟ್​ನಲ್ಲೇ ಹಿಂಪಡೆಯಬೇಕು
*ನಿಯಮ ಉಲ್ಲಂಘಿಸಿದರೆ ಕ್ರಮದ ಎಚ್ಚರಿಕೆ ನೀಡಿದ ಡಿಜಿಪಿ
ಕೇಂದ್ರದ ನಿರ್ದೇಶನಗಳು
ಲಾಕ್​ಡೌನ್ ಪರಿಣಾಮಕಾರಿಯಾಗಿ ಅನುಷ್ಠಾನವಾಗಲಿ, ಎಲ್ಲ ರಾಜ್ಯಗಳ ಗಡಿ ಬಂದ್ ಮಾಡಿ
*ಲಾಕ್​ಡೌನ್ ಅವಧಿಯಲ್ಲಿ ಉದ್ಯೋಗಿಗಳು, ವಲಸಿಗ ಕಾರ್ವಿುಕರ ವೇತನವನ್ನು ಕಡಿತವಿಲ್ಲದೆ ಸಕಾಲದಲ್ಲಿ ನೀಡಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ
*ಲಾಕ್​ಡೌನ್ ಅವಧಿಯಲ್ಲಿ ಮನೆ ಮಾಲೀಕರು ಕಾರ್ವಿುಕರ ಮೇಲೆ ಒತ್ತಡ ಹೇರಬಾರದು. ಇವರ ಜತೆಗೆ ವಿದ್ಯಾರ್ಥಿಗಳಿಗೆ ಮನೆ ಖಾಲಿ ಮಾಡುವಂತೆ ಒತ್ತಡ ಹೇರಿದಲ್ಲಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು
*ವಲಸೆ ಕಾರ್ವಿುಕರು ಸೇರಿ ಬಡ ಮತ್ತು ನಿರ್ಗತಿಕರಿಗೆ ಆಹಾರ ಮತ್ತು ಆಶ್ರಯಕ್ಕಾಗಿ ಸಮರ್ಪಕ ವ್ಯವಸ್ಥೆ ಮಾಡಬೇಕು. ಈ ಉದ್ದೇಶಕ್ಕಾಗಿ ಎಸ್​ಡಿಆರ್​ಎಫ್ ಹಣ ಬಳಸಿಕೊಳ್ಳಬಹುದು
* ನಗರ, ಹೆದ್ದಾರಿಗಳಲ್ಲಿ ವಾಹನ ಓಡಾಡುತ್ತಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಿ, ಅಗತ್ಯ ಸರಕು ಸಾಗಣೆಗಷ್ಟೇ ಅನುಮತಿ ನೀಡಿ
ರಸ್ತೆಗೆ ಇಳಿವ ವಾಹನ ಜಪ್ತಿ
ಕೇಂದ್ರ ಸರ್ಕಾರದ ಸೂಚನೆ ಬೆನ್ನಲ್ಲೇ ಕರ್ನಾಟಕದಲ್ಲಿ ಬಂದೋಬಸ್ತ್ ಹಾಗೂ ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ರಾಜ್ಯದಲ್ಲಿ ಕರೊನಾ ಸೋಂಕು 3ನೇ ಹಂತಕ್ಕೆ ತಲುಪುವ ಸಾಧ್ಯತೆ ಬಗ್ಗೆ ಎಚ್ಚರಿಕೆ ರವಾನೆಯಾದ್ದರಿಂದ ಅನಗತ್ಯವಾಗಿ ರಸ್ತೆಗಿಳಿವ ವಾಹನಗಳನ್ನು ಜಪ್ತಿ ಮಾಡಿ ಸವಾರರ ವಿರುದ್ಧ ಪ್ರಕರಣ ದಾಖಲಿಸುವ ಕಾರ್ಯವನ್ನು ಪೊಲೀಸರು ಆರಂಭಿಸಿದ್ದಾರೆ.
ರಾಜಮನೆತನವನ್ನೂ ಬಿಡದ ಕೋವಿಡ್ 19; ಸ್ಪೇನ್‌ನ ರಾಣಿ ಮರಿಯಾ ತೆರೇಸಾ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
