ನವದೆಹಲಿ:ಡೆಡ್ಲಿ ಕರೊನಾ ವೈರಸ್​ ಸೋಂಕಿಗೆ ಮೃತಪಟ್ಟವರ ಸಂಖ್ಯೆ 8ಕ್ಕೇರಿದೆ. 7 ಭಾರತೀಯರು ಹಾಗೂ ಓರ್ವ ಇಟಲಿ ಪ್ರಜೆ ಸೇರಿ ದೇಶದಲ್ಲಿ ಈವರೆಗೆ 8 ಮಂದಿ ಸಾವಿಗೀಡಾಗಿದ್ದಾರೆ.
ಗುಜರಾತಿನ ಸೂರತ್​ ಮೂಲದ 67 ವರ್ಷದ ವೃದ್ಧ ಕರೊನಾ ವೈರಸ್​ ಸೋಂಕಿಗೆ ಬಲಿಯಾಗಿದ್ದಾರೆ. ಇಂದು ಸಾವಿಗೀಡಾದ ಮೂರನೇ ಪ್ರಕರಣ ಇದಾಗಿದೆ. ಮೃತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗುವ ಮುನ್ನ ದೆಹಲಿ, ಜೈಪುರ ಮತ್ತಿ ಸೂರತ್​ಗಳಲ್ಲಿ ಪ್ರಯಾಣ ಮಾಡಿದ್ದ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆಯಷ್ಟೇ 56 ವರ್ಷದ ಮುಂಬೈ ಮಹಿಳೆ ಸಾವಿಗೀಡಾಗಿದ್ದರು. ಮಧ್ಯಾಹ್ನ ಬಿಹಾರ ರಾಜಧಾನಿ ಪಟನಾದಲ್ಲಿ 38 ವರ್ಷದ ಸೋಂಕಿತ ವ್ಯಕ್ತಿ ಹತರಾಗಿದ್ದರು.
ಬಿಹಾರದ ವ್ಯಕ್ತಿ ಶನಿವಾರ ಬೆಳಗ್ಗೆ ಪಟನಾದ ಆಲ್​ ಇಂಡಿಯಾ ಮೆಡಿಕಲ್​ ಇನ್ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದ. ಆದರೆ ಸಾವಿನ ಬಗ್ಗೆ ಮಾಹಿತಿ ಖಚಿತವಾಗಿರಲಿಲ್ಲ. ಇದೀಗ ಕೋವಿಡ್​ 19ನಿಂದಲೇ ಮೃತರಾಗಿರುವುದು ಧೃಡವಾಗಿದೆ. ಮೃತ ವ್ಯಕ್ತಿ ಕತಾರ್​ನಿಂದ ಬಂದಿದ್ದ ಎಂದು ಟ್ರಾವೆಲ್​ ಹಿಸ್ಟರಿಯಲ್ಲಿ ಬಹಿರಂಗವಾಗಿದೆ.
ಬೆಳಗ್ಗೆ ಮೃತರಾದ ಮುಂಬೈ ಮಹಿಳೆಯು ಎಚ್​.ಎನ್​. ರಿಲಯನ್ಸ್​ ಆಸ್ಪತ್ರೆಯಲ್ಲಿ ಮಾರ್ಚ್​ 21ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೋವಿಡ್​ 19 ಸೋಂಕಿನಿಂದ ಭಾನುವಾರ ಬೆಳಗ್ಗೆ ಮೃತರಾಗಿದ್ದಾರೆ.
ದೇಶದಲ್ಲಿ ಈವರೆಗೆ 300ಕ್ಕೂ ಅಧಿಕ ಮಂದಿಗೆ ಕರೊನಾ ಸೋಂಕು ತಗುಲಿದ್ದು, ಓರ್ವ ಇಟಲಿ ಪ್ರಜೆ ಸೇರಿ ಒಟ್ಟು 8 ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.(ಏಜೆನ್ಸೀಸ್​)
PHOTOS| ಕರೊನಾ ಸೋಂಕು ತಗುಲದಂತೆ ಏನು ಮಾಡಬೇಕು? ಮಾಡಬಾರದು?: ಉಪಯುಕ್ತ ಮಾಹಿತಿ ಫೋಟೋಗಳಲ್ಲಿ…

ಕರೊನಾ ವೈರಸ್ ಲಕ್ಷಣಗಳು 14 ದಿನಗಳಲ್ಲೇ ಕಾಣಿಸಿಕೊಳ್ಳಬೇಕೆಂದೇನೂ ಇಲ್ಲ..17 ದಿನಗಳ ಬಳಿಕವೂ ಪತ್ತೆಯಾಗಬಹುದು..ಎಚ್ಚರ ಇರಲಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
