ನವದೆಹಲಿ:ಡೆಡ್ಲಿ ಕರೊನಾ ವೈರಸ್​ ಸೋಂಕಿಗೆ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ. 6 ಭಾರತೀಯರು ಹಾಗೂ ಓರ್ವ ಇಟಲಿ ಪ್ರಜೆ ಸೇರಿ ದೇಶದಲ್ಲಿ ಈವರೆಗೆ 7 ಮಂದಿ ಸಾವಿಗೀಡಾಗಿದ್ದಾರೆ.
ಬೆಳಗ್ಗೆಯಷ್ಟೇ ಕರೊನಾ ವೈರಸ್​ ಸೋಂಕಿತ ಮುಂಬಯಿಯ ನಿವಾಸಿ 56 ವರ್ಷದ ಮಹಿಳೆ ಸಾವಿಗೀಡಾಗಿದ್ದರು. ಇದೀಗ ಬಿಹಾರದಲ್ಲಿ ಮತ್ತೊಂದು ಸಾವಿನ ಪ್ರಕರಣ ವರದಿಯಾಗಿದೆ. ರಾಜಧಾನಿ ಪಟನಾದಲ್ಲಿ 38 ವರ್ಷದ ಸೋಂಕಿತ ವ್ಯಕ್ತಿ ಹತರಾಗಿದ್ದಾರೆ.
ಬಿಹಾರದ ವ್ಯಕ್ತಿ ಶನಿವಾರ ಬೆಳಗ್ಗೆ ಪಟನಾದ ಆಲ್​ ಇಂಡಿಯಾ ಮೆಡಿಕಲ್​ ಇನ್ಸ್ಟಿಟ್ಯೂಟ್​ ಆಫ್​ ಮೆಡಿಕಲ್​ ಸೈನ್ಸ್​ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದ. ಆದರೆ ಸಾವಿನ ಬಗ್ಗೆ ಮಾಹಿತಿ ಖಚಿತವಾಗಿರಲಿಲ್ಲ. ಇದೀಗ ಕೋವಿಡ್​ 19ನಿಂದಲೇ ಮೃತರಾಗಿರುವುದು ಧೃಡವಾಗಿದೆ. ಮೃತ ವ್ಯಕ್ತಿ ಕತಾರ್​ನಿಂದ ಬಂದಿದ್ದ ಎಂದು ಟ್ರಾವೆಲ್​ ಹಿಸ್ಟರಿಯಲ್ಲಿ ಬಹಿರಂಗವಾಗಿದೆ.
ಇಂದು ಬೆಳಗ್ಗೆ ಮೃತರಾದ ಮುಂಬೈ ಮಹಿಳೆಯು ಎಚ್​.ಎನ್​. ರಿಲಯನ್ಸ್​ ಆಸ್ಪತ್ರೆಯಲ್ಲಿ ಮಾರ್ಚ್​ 21ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೋವಿಡ್​ 19 ಸೋಂಕಿನಿಂದ ಭಾನುವಾರ ಬೆಳಗ್ಗೆ ಮೃತರಾಗಿದ್ದಾರೆ.
ದೇಶದಲ್ಲಿ ಸೋಂಕಿತರ ಸಂಖ್ಯೆ 300ರ ಗಡಿ ದಾಟಿದೆ.(ಏಜೆನ್ಸೀಸ್​)
ಕಿಲ್ಲರ್​ ಕರೊನಾಗೆ ದೇಶದಲ್ಲಿ 6ನೇ ಬಲಿ: ಸೋಂಕಿತರ ಸಂಖ್ಯೆ 324ಕ್ಕೇರಿಕೆ

ಕರೊನಾ ವೈರಸ್​ ಸೋಂಕಿತ ಬಾಲಿವುಡ್​ ಗಾಯಕಿ ವಿರುದ್ಧ ವೈದ್ಯರಿಂದ ಸ್ಪೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − four =
Remember me
